Site icon Vistara News

Rocky Aur Rani Kii Prem Kahaani: ಅದ್ಧೂರಿಯಾಗಿದೆ ಕರಣ್ ಜೋಹರ್ ನಿರ್ದೇಶನದ ಸಿನಿಮಾ ಟೀಸರ್‌!

Rocky Aur Rani Kii Prem Kahaani Teaser Out

ಬೆಂಗಳೂರು: ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದ ಕರಣ್ ಜೋಹರ್ ನಿರ್ದೇಶನದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದ (Rocky Aur Rani Kii Prem Kahaani) ಟೀಸರ್ ಜೂನ್‌ 20ರಂದು ಬಿಡುಗಡೆಯಾಗಿದೆ. ಸಂಗೀತ ಮತ್ತು ಹಾಡುಗಳ ಮೂಲಕ ಮೈನವಿರೇಳಿಸುವಂತಿದೆ ಈ ಟೀಸರ್. ಪ್ರತಿ ದೃಶ್ಯವೂ ಸಖತ್ ಅದ್ಧೂರಿಯಾಗಿ ಮೂಡಿ ಬಂದಿದೆ. ಕರಣ್ ಏಳು ವರ್ಷಗಳ ಬಳಿಕ ಏ ದಿಲ್ ಹೈ ಮುಷ್ಕಿಲ್ (2016) ಸಿನಿಮಾ ನಂತರ ನಿರ್ದೇಶನಕ್ಕೆ ಇಳಿದಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಜುಲೈ 28ರಂದು ಬಿಡುಗಡೆಯಾಗಲಿದೆ.

ಒಂದು ನಿಮಿಷದ ಟೀಸರ್ ಅದ್ಧೂರಿ ಸೆಟ್‌, ರಣವೀರ್‌ ಸಿಂಗ್ ಹಾಗೂ ಆಲಿಯಾ ಲವ್‌ ಕಹಾನಿ, ನೃತ್ಯಗಳು, ಪ್ರತಿ ದೃಶ್ಯಗಳನ್ನೂ ಅಚ್ಚುಕಟ್ಟಾಗಿ ಕಾಣಿಸಿದ್ದಾರೆ ಕರಣ್‌. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಜಯಾ ಬಚ್ಚನ್, ಧರ್ಮೇಂದ್ರ ಮೊದಲಾದ ಕಲಾವಿದರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೆಸರೇ ಸೂಚಿಸುವಂತೆ ಇದೊಂದು ಪ್ರೇಮ ಕಥೆ. ಇದನ್ನು ಯಾವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಮದುವೆಯ ದೃಶ್ಯಗಳು ಸಹ ಟೀಸರ್‌ನಲ್ಲಿ ಇದ್ದವು. ಆಲಿಯಾ ವಧುವಿನಂತೆ ಅಲಂಕೃತವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವಿತ್ತು.

ಟೀಸರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ʻʻಸಿನಿಮಾ ಬೇಗ ಬಿಡುಗಡೆ ಮಾಡಿʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻಅರಿಜಿತ್ ಧ್ವನಿ ಬಹಳ ರೋಮಾಂಚನವೆಂದೆನಿಸಿತುʼʼಎಂದಿದ್ದಾರೆ. ʻʻಏ ದಿಲ್ ಹೈ ಮುಷ್ಕಿಲ್ʼʼ ಸಿನಿಮಾ ನಂತರ ಇದೇ ಸಿನಿಮಾ ಬ್ಲಾಕ್‌ಬಸ್ಟರ್‌ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Karan Johar | ಕರಣ್ ಜೋಹರ್ ನಿರ್ದೇಶನದ ʻರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌!

‘ಬ್ರಹ್ಮಾಸ್ತ್ರ’, ‘ಭೂಲ್ ಭುಲಯ್ಯ 2’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಪ್ರೀತಮ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Exit mobile version