ಮುಂಬೈ: ಗಲ್ಲಿ ಬಾಯ್ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Kii Prem Kahani) ಸಿನಿಮಾದಲ್ಲಿ ಈ ಜೋಡಿ ಜತೆಯಾಗುತ್ತಿದ್ದು, ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.
ಇದನ್ನೂ ಓದಿ: Don 3 Movie : ಈಗ ಡಾನ್ ಶಾರುಖ್ ಅಲ್ಲ ರಣವೀರ್! ಸದ್ಯದಲ್ಲೇ ಬರಲಿದೆ ಡಾನ್ 3 ಪ್ರೊಮೋಷನಲ್ ವಿಡಿಯೊ
ಏಳು ವರ್ಷಗಳ ನಂತರ ಕರಣ್ ಜೋಹರ್ ಅವರು ನಿರ್ದೇಶಕರ ಟೋಪಿ ಧರಿಸಿರುವ ಸಿನಿಮಾ ಇದಾಗಿದೆ. ಏಳು ವರ್ಷಗಳ ಹಿಂದೆ, ಅಂದರೆ 2016ರಲ್ಲಿ ಕರಣ್ ಜೋಹರ್ ಅವರು ರಣಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯ ರೈ ಅಭಿನಯದ ಏ ದಿಲ್ ಹೈ ಮುಷ್ಕಿಲ್ ಚಿತ್ರವನ್ನು ನಿರ್ದೇಶಿಸಿದ್ದರು.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ ಫಸ್ಟ್ ಲುಕ್ ಅನ್ನು ಕರಣ್ ಜೋಹರ್ ಅವರ 51ನೇ ಜನ್ಮದಿನದಂದು ಬಿಡುಗಡೆ ಮಾಡಲಾಗಿದೆ. ಇಬ್ಬರೂ ನಟರ ಪ್ರತ್ಯೇಕ ಫಸ್ಟ್ಲುಕ್ಗಳು ಹಾಗೂ ಇಬ್ಬರೂ ಜತೆಯಾಗಿರುವ ಫಸ್ಟ್ ಲುಕ್ ಅನ್ನು ಕರಣ್ ಬಿಡುಗಡೆ ಮಾಡಿದ್ದಾರೆ. ಫಸ್ಟ್ಲುಕ್ನಲ್ಲಿ ರಣವೀರ್ ಪಕ್ಕಾ ಜಾಲಿ ಬಾಯ್ನಂತೆ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಆಲಿಯಾ ಎಲ್ಲರ ಮನಸ್ಸನ್ನು ಕದಿಯುವ ಸುಂದರಿಯಂತೆ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ರಣವೀರ್ ಮತ್ತು ಆಲಿಯಾ ಜೊತೆಗೆ, ಹಿರಿಯ ನಟರಾದ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಕೂಡ ನಟಿಸಿದ್ದಾರೆ. ಕರಣ್ ದೆಹಲಿಯ ನಾನಾ ಭಾಗಗಳಲ್ಲಿ ಚಿತ್ರವನ್ನು ವ್ಯಾಪಕವಾಗಿ ಚಿತ್ರೀಕರಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಅವರ ಹೊರಾಂಗಣ ಚಿತ್ರೀಕರಣದ ಹಲವಾರು ಫೋಟೋಗಳು ಆನ್ಲೈನ್ನಲ್ಲಿ ಸೋರಿಕೆಯಾಗಿದ್ದವು. ಅವುಗಳು ಚಿತ್ರವು ರೆಟ್ರೋ ವೈಬ್ ನೀಡುವಂತಿವೆ ಎನ್ನುವ ಸುಳಿವು ಕೊಟ್ಟಿದ್ದವು. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸಿನಿತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ.