Site icon Vistara News

Actor Yash : ರಾಕಿ ಭಾಯ್​ ಯಶ್​ ನಾಪತ್ತೆ; ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ!

Actor Yash

ಬೆಂಗಳೂರು: ರಾಕಿ ಭಾಯ್​ ಯಶ್ (Yash) ಕಾಣೆಯಾಗಿದ್ದಾರೆ, ಹುಡುಕಿಕೊಟ್ಟವರಿಗೆ ಭರ್ಜರಿ ಬಹುಮಾನ ಕೊಡಲಾಗುವುದು. ಹೀಗೊಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಅದರ ಬಗ್ಗೆಯೇ ಜೋರು ಚರ್ಚೆಗಳು ನಡೆಯುತ್ತಿವೆ. ಹೌದಾ? ಅವರು ಕಾಣೆಯಾಗಲು ಸಾಧ್ಯವೇ? ಖಂಡಿತಾ ಇಲ್ಲ. ಅವರು ಕಾಣೆಯಾಗಿಲ್ಲ. ಬದಲಾಗಿ ಅವರು ಅಭಿಮಾನಿಗಳು ಮಾಡಿರುವ ಪೋಸ್ಟರ್ ಒಂದು ಈ ಚರ್ಚೆಗೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟದನ್ನು ಸಿಲ್ವರ್ ಸ್ಕ್ರೀನ್​ನಲ್ಲಿ ನೋಡುವ ಅಭಿಲಾಷೆಯಿಂದ ವರ್ಷಗಳಿಂದ ಕಾಯುತ್ತಿರುವ ಅವರ ಅಭಿಮಾನಿಗಳೇ ಕೆಲವರು ಹೀಗೋಂದು ಪೋಸ್ಟರ್ ಅನ್ನು ಹರಿಯಬಿಟ್ಟಿದ್ದು.

ಕೆಜಿಎಫ್​ ಚಾಪ್ಟರ್ 2 ಸಿನಿಮಾ ಬಿಡುಗಡೆಯಾದ ಬಳಿಕ ಯಶ್​ ಅವರ ಯಾವುದೇ ಹೊಸ ಸಿನಿಮಾ ಘೋಷಣೆಯಾಗಿಲ್ಲ. ಹೀಗಾಗಿ ಅವರ ಸಿನಿಮಾದ ಕುರಿತ ಹೊಸ ಸುದ್ದಿಗಾಗಿ ಕಾದಕಾದು ಸುಸ್ತಾಗಿರುವ ಅವರ ಅಭಿಮಾನಿಗಳೇ ಈ ಪೋಸ್ಟರ್ ಅನ್ನು ವೈರಲ್ ಮಾಡಿದ್ದಾರೆ. ”ನಮ್ಮ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ‘ಕೆಜಿಎಫ್ 2’ ಸಿನಿಮಾದ ಯಶಸ್ಸಿನ ಬಳಿಕ ಹೊಸ ಸಿನಿಮಾ ಘೋಷಣೆ ಮಾಡುವೆ ಎಂದಿದ್ದರು ಆದರೆ ಘೋಷಣೆ ಮಾಡದೆ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದ್ದಾರೆ. ಕೂಡಲೇ ಅವರನ್ನು ಯಾರಾದರೂ ಸಂಪರ್ಕಿಸಿ ಹೇಳಿ. ಬರೀ ಸಿನಿಮಾ ಅನೌನ್ಸ್ ಮಾಡೋಕೆ ಎರಡು ವರ್ಷ ತಗೊಂಡ್ರೆ ಹೇಗೆ ಸರ್, ಫ್ಯಾನ್ಸ್​ನ ಎಮೋಷನ್ ಜೊತೆ ಆಟ ಆಡ್ತಾ ಇದ್ದೀರ ಎಂದು ತಿಳಿಸಿ ಹೇಳಿ ಎಂದು ಬರೆದುಕೊಂಡಿದ್ದಾರೆ.

ಎಲ್ಲ ನಟರ ಅಭಿಮಾನಿಗಳು ಹೊಸ ಸಿನಿಮಾದ ಅಪ್​ಡೇಟ್​ಗಳನ್ನು ತಗೊಂಡು ಖುಷಿಯಲ್ಲಿದ್ದಾರೆ. ಆದರೆ ನೀವು ಮಾತ್ರ ಇನ್ನೂ ಸಿನಿಮಾ ಅನೌನ್ಸ್ ಮಾಡಿಲ್ಲ. ಅದರ ಬಗ್ಗೆ ಒಂದು ಕ್ಲೂ ಕೂಡ ಇಲ್ಲ. ತುಂಬಾ ಬೇಜಾರ್ ಆಗುತ್ತೆ ಬಾಸ್​ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ. ಮೇಲ್ನೊಟಕ್ಕೆ ಇದು ಯಶ್​ಗೆ ವಿರುದ್ಧವಾಗಿ ಬರೆದಿರುವ ಪೋಸ್ಟರ್ ಎನಿಸಿಕೊಂಡರೂ ಬರೆದಿದ್ದು ಕಟ್ಟರ್ ಅಭಿಮಾನಿ ಎಂಬುದರಲ್ಲಿ ಎರಡು ಮಾತಿಲ್ಲ.

ಯಶ್​ ನಟನೆಯ ಕೆಜಿಎಫ್ ಚಾಪ್ಟರ್​ 2 ಸಿನಿಮಾ ಬಿಡುಗಡೆ ಆಗಿ ಒಂದು ವರ್ಷ ದಾಟಿದೆ. ಆದರೆ, ಯಶ್ ಇನ್ನೂ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿಲ್ಲ. ಅಂದಹಾಗೆ ಯಶ್​ ಕಳೆದ ಎಳು ವರ್ಷದಲ್ಲಿ ನಟಿಸಿದ್ದು ಎರಡು ಸಿನಿಮಾಗಳಲ್ಲಿ ಮಾತ್ರ. ಕೆಜಿಎಫ್ ಬಿಟ್ಟರೆ 2016 ರಲ್ಲಿ ಅವರ ಸಂತೂ ಸ್ಟ್ರೈಟ್ ಫಾರ್ವರ್ಡ್ ಚಿತ್ರ ರಿಲೀಸ್​ ಆಗಿತ್ತು. ಸ್ಟಾರ್ ನಟನಿಂದ ದೊಡ್ಡ ದೊಡ್ಡ ಸಿನಿಮಾಗಳು ಆಗಾಗ ಬಿಡುಗಡೆಯಾಗಲಿ ಎಂದು ಇಂಡಸ್ಟ್ರಿ ಕಾಯುತ್ತಿರುತ್ತದೆ. ಅದೇ ರೀತಿ ಯಶ್​ ಅಭಿಮಾನಿಗಳೂ ಅದೇ ಬಯಕೆಯಲ್ಲಿದ್ದಾರೆ. ಆದರೆ, ಸಿನಿಮಾ ವಿಚಾರದಲ್ಲಿ ಸೆಲೆಕ್ಟಿವ್ ಎನಿಸಿಕೊಂಡಿರುವ ಯಶ್​ ಅಳೆದು, ತೂಗಿ ಸಿನಿಮಾ ತೆಗೆದುಕೊಳ್ಳುತ್ತಾರೆ.

ಏತನ್ಮಧ್ಯೆ, ಹೊಸ ಪ್ರಾಜೆಕ್ಟ್​​ಗಾಗಿ ಯಶ್​ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಕೆಲವು ದಿನಗಳ ಹಿಂದೆ ಮಲೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ದೊಡ್ಡ ಸಿನಿಮಾ ಮಾಡುತ್ತಿಲ್ಲ. ಚೆನ್ನಾಗಿರುವ ಕತೆಯ ಸಿನಿಮಾ ಕೊಡುವ ಪ್ರಯತ್ನದಲ್ಲಿದ್ದೀನಿ. ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡುತ್ತೇನೆ ಎಂದಿದ್ದರು. ಕೆಲವು ಮೂಲಗಳ ಪ್ರಕಾರ, ಯಶ್​ರ ಮುಂದಿನ ಸಿನಿಮಾಕ್ಕೆ ಕತೆ ಸಿದ್ಧಗೊಂಡಿದ್ದು ಶೀಘ್ರದಲ್ಲೇ ಘೋಷಣೆಯಾಗಲಿದೆ.

ಯಶ್​ರ ಮುಂದಿನ ಸಿನಿಮಾವನ್ನು ಮಹಿಳಾ ನಿರ್ದೇಶಕಿ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ವಿದೇಶದಲ್ಲಿ ಅದರ ಚಿತ್ರೀಕರಣ ಎಂದೂ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅದು ಶ್ರೀಲಂಕಾ. ಫ್ಯಾನ್​ ಇಂಡಿಯಾ ಸ್ಟಾರ್ ಅಗಿರುವ ಯಶ್​ಗೆ ಪೂರಕವಾಗಿ ಸಿನಿಮಾ ರೆಡಿ ಆಗುತ್ತಿದೆ ಎನ್ನಲಾಗಿದೆ.

Exit mobile version