ಬೆಂಗಳೂರು: ಯಶ್ `ಟಾಕ್ಸಿಕ್’ ಸಿನಿಮಾ ಅನೌನ್ಸ್ ಮಾಡಿದ್ದಾಗಿನಿಂದ (Yash 19 Movie Update) ಹೊಸ ಹೊಸ ಅಪ್‌ಡೇಟ್‌ಗಳು ಬರುತ್ತಲೇ ಇವೆ. ಯಶ್ ಕನ್ನಡ ಸಿನಿಮಾವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, ‘ಟಾಕ್ಸಿಕ್’ ಸಿನಿಮಾವನ್ನು ಕೇವಲ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಅಷ್ಟೇ ನಿರ್ಮಾಣ ಮಾಡುತ್ತಿಲ್ಲ. ಕೆವಿನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಜತೆ ಯಶ್ ತಮ್ಮ ʻಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ʼ ಮೂಲಕ ಕೈ ಜೋಡಿಸಿದ್ದಾರೆ. ಹಾಗೇ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುಳಿವೂ ಕೂಡ ವೈರಲ್ ಆಗುತ್ತಿದೆ.
ಯಶ್ ಅವರ ಈ ಸಿನಿಮಾ ಬಜೆಟ್ ಬರೋಬ್ಬರಿ 170 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಈ ಬಗ್ಗೆ ಕೆವಿಎನ್ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಇದರ ಜತೆಗೆ ಇನ್ನೊಂದು ಸುದ್ದಿ ಸಖತ್ ವೈರಲ್ ಆಗಿದೆ. ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಪೂರಕವಾಗಿ , ನಟ ತಮ್ಮ ಇನ್‌ಸ್ಟಾದಲ್ಲಿ ಫಸ್ಟ್ ಲುಕ್ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಜೋಕರ್ ಪಾತ್ರದಲ್ಲಿ ಏನಾದರೂ ಟೊವಿನೋ ಥಾಮಸ್ ಕಾಣಿಸಿಕೊಳ್ಳಲಿದ್ದಾರಾ ಎಂದು ಕಮೆಂಟ್ ಮಾಡಿದ್ದಾರೆ. ಜೋಕರ್ ಝಲಕ್‌ನ ಮಾತ್ರ ಟೊವಿನೋ ಥಾಮಸ್ ಹಂಚಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಯುಕೆ, ಯೂರೋಪ್ ಸೇರಿದಂತೆ ಹಲವೆಡೆ ಟೈಟಲ್ ರಿವೀಲ್ ಆಗಿದೆ. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವುದು ಕೂಡ ಕನ್ಫರ್ಮ್ ಆಗಿದೆ. ಗೀತು ಮೋಹನ್ದಾಸ್ ಕಲ್ಪನೆಯ ಕತೆಗೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 2025ರ ಏಪ್ರಿಲ್ 10ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಅಗುತ್ತಿದೆ.
ಇದನ್ನೂ ಓದಿ: Geetu Mohandas: ಯಶ್ TOXIC ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶಕಿ; ಯಾರಿವರು?
ಯಶ್ ಕೆಲವು ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡು ‘ಲೋಡಿಂಗ್’ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಯಶ್ ‘ಲೋಡಿಂಗ್’ ಪೋಸ್ಟರ್ ಹಂಚಿಕೊಂಡ ಕೇವಲ 40 ನಿಮಿಷದಲ್ಲಿ ಆ ಚಿತ್ರಕ್ಕೆ 30 ಸಾವಿರ ಲೈಕ್ಗಳು ಫೇಸ್ಬುಕ್ನಲ್ಲಿ ಬಂದಿದ್ದವು. ‘ಲೋಡಿಂಗ್’ ಪೋಸ್ಟರ್ʼ ಹಾಗೂ ಇಂದು ಹಂಚಿಕೊಂಡ ಪೋಸ್ಟರ್ ಕೆಂಪು ಬಣ್ಣವನ್ನು ಹೊಂದಿದ್ದು, ಮುಂದಿನ ಸಿನಿಮಾ ಕೂಡ ಇದೇ ಮಾದರಿಯ ಕಲರ್ ಕಾಂಬಿನೇಷನ್‌ನಲ್ಲಿ ಬರಲಿದೆ ಎಂದು ಫ್ಯಾನ್ಸ್ ಊಹಿಸಿದ್ದರು.