Site icon Vistara News

Rohit Shetty | ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು

Rohit Shetty

ಬೆಂಗಳೂರು : ʻಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸಿರೀಸ್‌ ಚಿತ್ರೀಕರಣ ವೇಳೆ ಗಾಯಗೊಂಡು ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಹೈದರಾಬಾದ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ರಾತ್ರಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಶೂಟಿಂಗ್ ವೇಳೆ ರೋಹಿತ್ ಅವರ ಕೈಗೆ ಗಾಯವಾಗಿದೆ ಎಂದು ವರದಿ ಆಗಿದೆ. ಇಷ್ಟಾಗಿಯೂ, ಅವರು ಘಟನೆ ಸಂಭವಿಸಿದ ಸ್ವಲ್ಪ ಸಮಯದ ನಂತರ ಚಿತ್ರೀಕರಣ ಪ್ರಾರಂಭ ಮಾಡಿದ್ದರು ಎನ್ನಲಾಗಿದೆ.

ರೋಹಿತ್ ಶೆಟ್ಟಿ ಅವರು ತಮ್ಮ ಮುಂಬರುವ ವೆಬ್ ಸೀರೀಸ್ ‘ಇಂಡಿಯನ್ ಪೋಲೀಸ್ ಫೋರ್ಸ್‌’ಗಾಗಿ ಶುಕ್ರವಾರ ಜನವರಿ 6 ಆ್ಯಕ್ಷನ್ ಸೀಕ್ವೆನ್ಸ್ ಅನ್ನು ನಿರ್ವಹಿಸುವಾಗ ಅವರ ಬೆರಳುಗಳಿಗೆ ಸ್ವಲ್ಪ ಗಾಯವಾಗಿದೆ. ಗಾಯಕ್ಕೆ ತಕ್ಷಣವೇ ಚಿಕಿತ್ಸೆ ನೀಡಲಾಗಿದೆ. ಮತ್ತು ಸ್ವಲ್ಪ ಸಮಯದ ನಂತರ ಅವರು ತಮ್ಮ ಚಿತ್ರೀಕರಣವನ್ನು ಪುನರಾರಂಭಿಸಿದರು ಎಂದು ವರದಿಯಾಗಿದೆ.

ಇದನ್ನೂ ಓದಿ | Miss India 2022 | ಮಿಸ್‌ ಇಂಡಿಯಾ ಆಗಿರುವ ಕನ್ನಡತಿ ಸಿನಿ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?

ವೆಬ್‌ ಸಿರೀಸ್‌ ಅಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್ ಒಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೈಮ್ ವಿಡಿಯೊದಲ್ಲಿ ಪ್ರೀಮಿಯರ್ ಆಗಲಿದೆ. ವೆಬ್‌ ಸಿರೀಸ್‌ ಸ್ಟ್ರೀಮಿಂಗ್ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ. ಚಿತ್ರೀಕರಣ ವೇಳೆ ಈ ಮೊದಲು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಗಾಯಗೊಂಡಿದ್ದರು. ಹಾಗೂ ನಟಿ ಶಿಲ್ಪಾ ಶೆಟ್ಟಿ ಕಾಲಿಗೆ ಏಟು ಮಾಡಿಕೊಂಡಿದ್ದರು. ಇದೀಗ ರೋಹಿತ್ ಆಸ್ಪತ್ರೆ ಸೇರಿದ್ದಾರೆ. ಸುಮಾರು 20 ಕೋಟಿ ರೂ.ಗೂ ಅಧಿಕ ಖರ್ಚು ಮಾಡಿ ಆ್ಯಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನಲಾಗಿದೆ. 

ಇದನ್ನೂ ಓದಿ | Ranveer Singh | ಮತ್ತೆ ಸೋಲುಂಡ ರಣವೀರ್‌ ಸಿಂಗ್‌: ʻಸರ್ಕಸ್‌ʼ ಸಿನಿಮಾ ಕಲೆಕ್ಷನ್‌ ಮಾಡಿದ್ದೆಷ್ಟು?

Exit mobile version