Site icon Vistara News

Romeo and Juliet | 1968ರ ರೋಮಿಯೋ-ಜೂಲಿಯೆಟ್‌ ಚಿತ್ರದಲ್ಲಿ ನಗ್ನ ದೃಶ್ಯ! ಈಗ ಮೊಕದ್ದಮೆ ಹೂಡಿದ ಹಸ್ಸಿ, ವೈಟಿಂಗ್!

Romeo and Juliet

ಬೆಂಗಳೂರು : ಫ್ರಾಂಕೊ ಝೆಫಿರೆಲ್ಲಿಯವರ 1968ರ ಚಿತ್ರ ರೋಮಿಯೋ ಮತ್ತು ಜೂಲಿಯೆಟ್‌ನಲ್ಲಿ (Romeo and Juliet) ಹದಿಹರೆಯದವರಾಗಿ ನಟಿಸಿದ ಒಲಿವಿಯಾ ಹಸ್ಸಿ ಹಾಗೂ ಲಿಯೊನಾರ್ಡ್ ವೈಟಿಂಗ್‌ ಅವರು, ಪ್ಯಾರಾಮೌಂಟ್ ಪಿಕ್ಚರ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಈ ಚಿತ್ರದಲ್ಲಿ ತಮಗೆ ಅರಿವಿಗೆ ಬಾರದಂತೆ ನಗ್ನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸಾಂಟಾ ಮೋನಿಕಾ ಸುಪೀರಿಯರ್ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು ಕೆಲವು ನಗ್ನ ದೃಶ್ಯಗಳು ಲೈಂಗಿಕ ಶೋಷಣೆಗೆ ಸಮಾನವಾಗಿದೆ ಪ್ರತಿಪಾದಿಸಿದ್ದಾರೆ. ವಿಲಿಯಂ ಷೇಕ್ಸ್‌ಪಿಯರ್‌ನ ರೋಮಿಯೋ ಮತ್ತು ಜೂಲಿಯೆಟ್ ಚಿತ್ರದಲ್ಲಿ ನಟಿಸುವಾಗ ಒಲಿವಿಯಾ ಹಸ್ಸಿ ಅವರಿಗೆ 15 ವರ್ಷ ಮತ್ತು ಲಿಯೊನಾರ್ಡ್ ವೈಟಿಂಗ್‌ ಅವರಿಗೆ 16 ವರ್ಷ ವಯಸ್ಸಾಗಿತ್ತು. 2019ರಲ್ಲಿ ನಿಧನರಾದ ನಿರ್ದೇಶಕ ಜೆಫಿರೆಲ್ಲಿ ಅವರು ʻಶೂಟಿಂಗ್‌ ವೇಳೆ ಯಾವುದೇ ನಗ್ನತೆ ಇರುವುದಿಲ್ಲʼ ಎಂದು ಹೇಳಿದ್ದರು. ಆದರೆ, ನಗ್ನತೆಯ ದೃಶ್ಯಗಳು ಇಲ್ಲದಿದ್ದರೆ ಚಿತ್ರವು ಫೇಲ್ಯೂರ್‌ ಆಗುತ್ತದೆ ಎಂದು ಒತ್ತಾಯಿಸಿ, ಅವರು ಆ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಅಪ್ರಾಪ್ತ ವಯಸ್ಕ ಮಕ್ಕಳನ್ನು ಅರಿವಿಲ್ಲದೆ ರಹಸ್ಯವಾಗಿ ಚಿತ್ರೀಕರಿಸಿದ್ದಾರೆ. ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸಿ, ಅಪ್ರಾಪ್ತ ವಯಸ್ಕರನ್ನು ಲಾಭಕ್ಕಾಗಿ ಉಪಯೋಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ನಂತರದಲ್ಲಿ ಒಲಿವಿಯಾ ಹಸ್ಸಿ ಮತ್ತು ಲಿಯೊನಾರ್ಡ್ ವೈಟಿಂಗ್‌ ಮಾನಸಿಕ ಮತ್ತು ಭಾವನಾತ್ಮಕ ಯಾತನೆ ಅನುಭವಿಸಿದ್ದಾರೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಲಾಗಿದೆ. ಒಲಿವಿಯಾ ಹಸ್ಸಿ ಅವರಿಗೆ ಈಗ 71 ಹಾಗೂ ಲಿಯೊನಾರ್ಡ್ ವೈಟಿಂಗ್‌ ಅವರಿಗೆ 72 ವರ್ಷ ವಯಸ್ಸಾಗಿದೆ.

ಇದನ್ನೂ ಓದಿ | Alia Bhatt | ಹಾಲಿವುಡ್‌ನ ʻಹಾರ್ಟ್‌ ಆಫ್ ಸ್ಟೋನ್‌ʼ ಸಿನಿಮಾ ಚಿತ್ರೀಕರಣ ಮುಗಿಸಿದ ಆಲಿಯಾ

ಒಲಿವಿಯಾ ಹಸ್ಸಿ ಹಾಗೂ ಲಿಯೊನಾರ್ಡ್ ವೈಟಿಂಗ್‌ ಈ ಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಗೋಲ್ಡನ್ ಗ್ಲೋಬ್ಸ್ ಗೆದ್ದಿದ್ದಾರೆ. ಫ್ರಾಂಕೊ ಝೆಫಿರೆಲ್ಲಿಯವರ ಚಲನಚಿತ್ರವು ಷೇಕ್ಸ್‌ಪಿಯರ್‌ ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ರೂಪಾಂತರಗಳಲ್ಲಿ ಒಂದಾಗಿದೆ. ಜತೆಗೆ ಬಾಜ್ ಲೆರ್ಮನ್ ಅವರ 1996 ಆವೃತ್ತಿಯಾಗಿದೆ. ಹಸ್ಸಿ ಮತ್ತು ವೈಟಿಂಗ್ ರೋಮಿಯೋ ಮತ್ತು ಜೂಲಿಯೆಟ್‌ನಲ್ಲಿ ನಟಿಸಿದ ನಂತರ, ಹಸ್ಸಿ ಲಾಸ್ಟ್ ಹರೈಸನ್, ಬ್ಲ್ಯಾಕ್ ಕ್ರಿಸ್‌ಮಸ್ ಮತ್ತು ಡೆತ್ ಆನ್ ದಿ ನೈಲ್‌ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇಬ್ಬರೂ 2015 ರಲ್ಲಿ ʻಸೋಷಿಯಲ್ ಸೂಸೈಡ್ʼ ಚಿತ್ರದಲ್ಲಿ ನಟಿಸಿದ್ದಾರೆ. ರೋಮಿಯೋ ಮತ್ತು ಜೂಲಿಯೆಟ್ ಚಿತ್ರಕ್ಕಾಗಿ ಫ್ರಾಂಕೊ ಝೆಫಿರೆಲ್ಲಿ ಅತ್ಯುತ್ತಮ ನಿರ್ದೇಶಕ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಇದನ್ನೂ ಓದಿ | ಪ್ಯಾರಿಸ್​ ಏರ್​ಪೋರ್ಟ್​ನಲ್ಲಿಯೇ 18ವರ್ಷ ಜೀವಿಸಿದ್ದ ಇರಾನ್​ ಪ್ರಜೆ ಅಲ್ಲೇ ಸಾವು; ಹಾಲಿವುಡ್​ ಸಿನಿಮಾಕ್ಕೂ ಸ್ಫೂರ್ತಿಯಾಗಿದ್ದರು!

Exit mobile version