Site icon Vistara News

Roopesh Shetty: ರೂಪೇಶ್ ಶೆಟ್ಟಿ ಅಭಿನಯದ ತುಳು ಸಿನಿಮಾ ಕಿರುತೆರೆಯಲ್ಲಿ; ಪ್ರಸಾರ ಯಾವಾಗ?

Roopesh Shetty Circus Tulu cinema

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ‘ತುಳು’ ಭಾಷೆಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತ ಬಂದಿರುವ ಕನ್ನಡದ ಮೊದಲ ವಾಹಿನಿ ‘ಸ್ಟಾರ್ ಸುವರ್ಣ’. 2010ರಲ್ಲಿ ಸುವರ್ಣ ವಾಹಿನಿಯು “ಗೊತ್ತಾನಗ ಪೊರ್ತಾಂಡ್” ಎಂಬ ‘ತುಳು’ ಧಾರಾವಾಹಿಯನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿತ್ತು. ತದನಂತರ ದೇಶದಾದ್ಯಂತ ಇತಿಹಾಸ ಸೃಷ್ಟಿಸಿದ “ಕಾಂತಾರ” ಸಿನಿಮಾವನ್ನು ‘ತುಳು’ ಭಾಷೆಯಲ್ಲಿ ಪ್ರಸಾರಮಾಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೀಗ (roopesh shetty) ಈ ವರ್ಷದ ಸೂಪರ್ ಹಿಟ್ ತುಳು ಸಿನಿಮಾ “ಸರ್ಕಸ್” ಪ್ರಸಾರ ಮಾಡಲು ಸಜ್ಜಾಗಿದೆ ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’.

‘ಸರ್ಕಸ್’ ಇದೊಂದು ಹಾಸ್ಯಮಯ ತುಳು ಸಿನಿಮಾ, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ಈ ಸಿನಿಮಾ ಕೋಸ್ಟಲ್‌ವುಡ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಅಂದರೆ ಬರೋಬ್ಬರಿ 13 ದೇಶಗಳಲ್ಲಿ ಬಿಡುಗಡೆಗೊಂಡ ಮೊಟ್ಟ ಮೊದಲ ತುಳು ಸಿನಿಮಾ ಇದಾಗಿದೆ. ತುಳುನಾಡಿನ ಹಾಸ್ಯ ದಿಗ್ಗಜರಾದ ಕುಸಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್ ಹಾಗು ಉಮೇಶ್ ಮಿಜಾರ್ ರವರ ಕಾಮಿಡಿ ಪಂಚ್ ಗೆ ಪ್ರೇಕ್ಷಕರು ಎದ್ದು ಬಿದ್ದು ನಗೋದಂತು ಖಚಿತ.

ಇನ್ನು ಸರ್ಕಸ್ ಸಿನಿಮಾದ ಟೈಟಲ್ ಸಾಂಗ್ ಅಂತೂ ಯುವ ಜನತೆಯ ಮನಗೆದ್ದು ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ವೈರಲ್ ಆಗಿತ್ತು. ತುಳು ಭಾಷೆಗೆ ಪ್ರಾಮುಖ್ಯತೆ ನೀಡುತ್ತಾ ಬರುತ್ತಿರುವ ಕಾರಣ ‘ಸ್ಟಾರ್ ಸುವರ್ಣ’ ವಾಹಿನಿಯು ಕರಾವಳಿ ಜನತೆಗೆ ಇನ್ನಷ್ಟು ಹತ್ತಿರವಾಗುತ್ತಿದೆ. ತುಳುನಾಡಿನ ಸುಂದರ ಕತೆಯನ್ನು ಒಳಗೊಂಡಿರುವ ಸೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ಹೆಮ್ಮೆ ಪಡುತ್ತದೆ.

ಇದನ್ನೂ ಓದಿ: Roopesh Shetty : ರೂಪೇಶ್ ಶೆಟ್ಟಿಗೆ ಜೋಡಿಯಾಗಿ ಎಂಟ್ರಿ ಕೊಟ್ಟ ಗಿಚ್ಚಿ ಗಿಲಿಗಿಲಿ ಜಾಹ್ನವಿ

ಮೊಟ್ಟ ಮೊದಲ ಬಾರಿಗೆ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗುತ್ತಿದೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸುವರ್ಣ ವರ್ಲ್ಡ್ ಪ್ರೀಮಿಯರ್ ತುಳು ಮೂವಿ ‘ಸರ್ಕಸ್’ ಇದೇ ಸೆಪ್ಟೆಂಬರ್ 10 ರಂದು ಸಂಜೆ 6 ಗಂಟೆಗೆ ಪ್ರಸಾರ ಕಾಣುತ್ತಿದೆ.

Exit mobile version