ಬೆಂಗಳೂರು: ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ (RRR Movie) ಈಗಾಗಲೇ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಲವು ದಾಖಲೆಗಳನ್ನು ನಿರ್ಮಿಸಿರುವ ಸಿನಿಮಾ ಇದೀಗ ಮತ್ತೊಂದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇತ್ತೀಚೆಗೆ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ (HCA) (Hollywood Critics Association Awards) ಪ್ರಶಸ್ತಿಗಳಲ್ಲಿ RRR ಬಹು ವಿಭಾಗಗಳಲ್ಲಿ ಗೆದ್ದಿದೆ. ಇದು ಮಾರ್ಚ್ 12ರಂದು ನಡೆಯಲಿರುವ ಅಕಾಡೆಮಿ ಪ್ರಶಸ್ತಿಗಳಿಗೆ ಕೆಲವು ದಿನಗಳ ಮೊದಲು ಬರುತ್ತದೆ. ಇದೀಗ ಆರ್‌ಆರ್‌ಆರ್ ಬೆಸ್ಟ್ ಸ್ಟಂಟ್ಸ್, ಬೆಸ್ಟ್ ಆ್ಯಕ್ಷನ್ ಫಿಲ್ಮ್, ಬೆಸ್ಟ್ ಒರಿಜಿನಲ್ ಸಾಂಗ್, ಬೆಸ್ಟ್ ಇಂಟರ್ ನ್ಯಾಷನಲ್ ಫಿಲ್ಮ್ಸ್ ಸೇರಿ ನಾಲ್ಕು ಕ್ಯಾಟಗರಿಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.
ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್
ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್‌ನಲ್ಲಿ ಆರ್‌ಆರ್‌ಆರ್ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ಆ್ಯಕ್ಷನ್ ಫಿಲ್ಮ್, ಅತ್ಯುತ್ತಮ ಸಾಹಸ ಮತ್ತು ಅತ್ಯುತ್ತಮ ಹಾಡು (ನಾಟು ನಾಟು) ವಿಭಾಗಗಳಲ್ಲಿ ಗೆದ್ದಿದೆ. ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಎಂಬ ಪ್ರಶಸ್ತಿಯನ್ನೂ ಪಡೆದಿದೆ. 2023ರ ಆಸ್ಕರ್‌ಗೆ ಮುಂಚಿತವಾಗಿ ಇದು ಒಂದು ದೊಡ್ಡ ಸಾಧನೆಯಾಗಿದೆ. ಆಸ್ಕರ್‌ಗೆ ನಾಟು ನಾಟು ಅತ್ಯುತ್ತಮ ಮೂಲ ಗೀತೆಯಲ್ಲಿ ನಾಮನಿರ್ದೇಶನಗೊಂಡಿದೆ.
ಇದನ್ನೂ ಓದಿ: Oscars 2023 Nominations: ಆಸ್ಕರ್ ಸನಿಹಕ್ಕೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು, ಪ್ರಶಸ್ತಿ ಆಯ್ಕೆ ಹೇಗೆ?
ಇದನ್ನೂ ಓದಿ: RRR Movie | BAFTA ಪ್ರಶಸ್ತಿಯನ್ನು ತಪ್ಪಿಸಿಕೊಂಡ ಆರ್‌ಆರ್‌ಆರ್: ಟ್ರೋಲ್ ಆಗಿದ್ಯಾಕೆ?
ಆರ್‌ಆರ್‌ಆರ್ ಚಿತ್ರವನ್ನು ಡಿವಿವಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ದಾನಯ್ಯ ನಿರ್ಮಿಸಿದ್ದು ರಾಜಮೌಳಿ ಆಕ್ಷನ್ ಕಟ್ ಹೇಳಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮಚರಣ್ ಜತೆಗೆ ಅಜಯ್ ದೇವಗನ್, ಒಲಿವಿಯಾ ಮೋರಿಸ್ ಮತ್ತು ಆಲಿಯಾ ಭಟ್ , ಶ್ರಿಯಾ ಸರನ್ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಂ.ಎಂ. ಕೀರವಾಣಿ, ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ‘ಆರ್‌ಆರ್‌ಆರ್’ ಚಿತ್ರದ ಕಥೆ ಬರೆದಿದ್ದಾರೆ.