Site icon Vistara News

RRR Movie : ಆಸ್ಕರ್‌, ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳ ಅಭಿಯಾನಕ್ಕೆಂದೇ 83 ಕೋಟಿ ರೂ. ವೆಚ್ಚ ಮಾಡಿದ ಆರ್‌ಆರ್‌ಆರ್‌ ತಂಡ!

#image_title

ಹೈದರಾಬಾದ್‌: ನಿರ್ದೇಶಕ ಎಸ್‌. ಎಸ್. ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ (RRR Movie) ಈಗಾಗಲೇ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಹಾಲಿವುಡ್‌ ಕ್ರಿಟಿಕ್ಸ್‌ ಚಾಯ್ಸ್‌ ಪ್ರಶಸ್ತಿಯೂ ಆರ್‌ಆರ್‌ಆರ್‌ ಪಾಲಾಗಿದೆ. ಅದಲ್ಲದೆ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ ರೇಸ್‌ನಲ್ಲಿಯೂ ಇದೆ. ಅಂದ ಹಾಗೆ ಈ ರೀತಿಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಲು ಅಭಿಯಾನ ನಡೆಸುವುದಕ್ಕೇ ಚಿತ್ರತಂಡ ಬರೋಬ್ಬರಿ 83 ಕೋಟಿ ರೂ. ಖರ್ಚು ಮಾಡಿದೆ ಎನ್ನುವ ವರದಿಯೊಂದಿದೆ.

ಇದನ್ನೂ ಓದಿ: Ram Charan: ಅಮೆರಿಕದಲ್ಲಿ ಆರ್‌ಆರ್‌ಆರ್‌ ಪ್ರದರ್ಶನ ವೇಳೆ ಪ್ರೇಕ್ಷಕರ ಜತೆ ಸೆಲ್ಫಿ ಹಂಚಿಕೊಂಡ ರಾಮ್‌ ಚರಣ್‌
ಆರ್‌ಆರ್‌ಆರ್‌ ಸಿನಿಮಾ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿರಲಿಲ್ಲ. ಆದರೆ ರಾಜಮೌಳಿ ಅವರೇ ತಮ್ಮ ಸಿನಿಮಾವನ್ನು ಆಸ್ಕರ್‌ಗೆ ನೋಂದಣಿ ಮಾಡಿಕೊಂಡಿದ್ದರು. ಹಾಗೆಯೇ ಬೇರೆಲ್ಲ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಚಿತ್ರತಂಡ ಸ್ವತಃ ತಾವೇ ನೋಂದಣಿ ಮಾಡಿಕೊಂಡಿದೆ. ಹಾಗೆಯೇ ಸಿನಿಮಾಕ್ಕೆ ಪ್ರಶಸ್ತಿಗೆ ಹೆಚ್ಚು ಪ್ರಚಾರ ಬೇಕೆಂದು ಬೇರೆ ಬೇರೆ ರಾಷ್ಟ್ರಗಳಲ್ಲಿ ಹಲವಾರು ಪ್ರಚಾರ ಅಭಿಯಾನವನ್ನು ನಡೆಸಿವೆ. ಅದಕ್ಕೆಂದು ಭಾರೀ ಹಣ ಖರ್ಚಾಗಿದೆ. ಅದರಲ್ಲಿ ಬಹುಪಾಲು ಹಣವನ್ನು ರಾಜಮೌಳಿ ಅವರು ತಮ್ಮ ವೈಯಕ್ತಿಕ ಉಳಿತಾಯದಿಂದಲೇ ಹಾಕಿದ್ದಾರೆ. ಹಾಗೇ ಸ್ವಲ್ಪ ಹಣವನ್ನು ಆರ್‌ಆರ್‌ಆರ್‌ ಸಿನಿಮಾಕ್ಕೆ ರಷ್ಯಾ ಮತ್ತು ಜಪಾನ್‌ನಲ್ಲಿ ಬಂದ ಹಣದಿಂದ ಬಳಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಕೊಟ್ಟಿಲ್ಲ.

ಇದನ್ನೂ ಓದಿ: Oscars 2023 Nominations: ಆಸ್ಕರ್‌ ಸನಿಹಕ್ಕೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು, ಪ್ರಶಸ್ತಿ ಆಯ್ಕೆ ಹೇಗೆ?
ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ಇದೇ ತಿಂಗಳ 12ನೇ ತಾರೀಕಿನಂದು ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ ಈ ಹಾಡಿನ ಗಾಯಕರಾದ ರಾಹುಲ್‌ ಸಿಪ್ಲಿಗುಂಜ್‌ ಮತ್ತು ಕಾಲ ಭೈರವ ಅವರು ಈ ಕಾರ್ಯಕ್ರಮದಲ್ಲಿ ಹಾಡನ್ನು ಹಾಡಿ ಮನೋರಂಜನೆ ನೀಡಲಿದ್ದಾರೆ.

Exit mobile version