Site icon Vistara News

RRR Movie: ರಾಜಮೌಳಿ ಹಾಲಿವುಡ್‌ನಲ್ಲಿ ಚಲನಚಿತ್ರ ಮಾಡಲು ಬಯಸಿದರೆ ನನ್ನ ಬೆಂಬಲವಿದೆ ಎಂದ ಕ್ಯಾಮರೂನ್

If Rajamouli wants to make a movie in Hollywood, I will support him, Cameron said

ಬೆಂಗಳೂರು : ಆರ್‌ಆರ್‌ಆರ್‌ ಸಿನಿಮಾ (RRR Movie) ಭರ್ಜರಿ ಯಶಸ್ಸಿನ ನಂತರ ಅಮೆರಿಕನ್ ಸಿನಿಮಾ ಹಿರಿಯ ನಟ, ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸೇರಿದಂತೆ ಎಸ್‌ಎಸ್ ರಾಜಮೌಳಿ ಅವರ ನಿರ್ದೇಶನಕ್ಕೆ ಹಲವಾರು ಪ್ರಶಂಸೆಗಳು ವ್ತಕ್ತವಾಗಿದೆ. ‘ಅವತಾರ್’ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರು ರಾಜಮೌಳಿ ಕುರಿತು ಎಷ್ಟು ಪ್ರಭಾವಿತರಾಗಿದ್ದಾರೆಂದರೆ, ರಾಜಮೌಳಿ ಅವರು ಹಾಲಿವುಡ್‌ನಲ್ಲಿ ಚಲನಚಿತ್ರವನ್ನು ಮಾಡಲು ಬಯಸಿದರೆ ಅವರಿಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದಾರೆ.

ರಾಜಮೌಳಿ ಮತ್ತು “RRR” ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ (CCA) ನಲ್ಲಿ ಕ್ಯಾಮರೂನ್ ಅವರನ್ನು ಭೇಟಿಯಾದರು. ಸಂಭಾಷಣೆಯ ಸಮಯದಲ್ಲಿ, ಕ್ಯಾಮರೂನ್ ಅವರು ರಾಜಮೌಳಿಗೆ “ನೀವು ಎಂದಾದರೂ ಇಲ್ಲಿ ಚಲನಚಿತ್ರ ಮಾಡಲು ಬಯಸಿದರೆ, ಮಾತನಾಡೋಣ. ನನ್ನ ಬೆಂಬಲವಿದೆ” ಎಂದು ಹೇಳಿದ್ದಾರೆ. ಕ್ಯಾಮರೂನ್ ಅವರು ರಾಜಮೌಳಿಯವರ ಚಿತ್ರನಿರ್ಮಾಣ ಶೈಲಿಯನ್ನು ಶ್ಲಾಘಿಸಿದ್ದಾರೆ, “ಸಿನಿಮಾದಲ್ಲಿಯ ಸೆಟಪ್, ನೀರಿನ ಕಥೆ. ಇವೆಲ್ಲವೂ ಹೋಮ್ಲಿ ಸೆಟಪ್ ಇದ್ದಂತೆ. ಕಥೆಯಲ್ಲಿಯ ಹಲವು ತಿರುವುಗಳು, ಸ್ನೇಹ ಮತ್ತು ಅಂತಿಮವಾಗಿ ಅದು ಒಂದು ಹಂತಕ್ಕೆ ತಲುಪುತ್ತದೆ. ತುಂಬಾ ಶಕ್ತಿಯುತವಾಗಿದೆ.”ಎಂದು ಹೇಳಿದ್ದಾರೆ. ಈವರೆಗೆ ಎರಡು ಬಾರಿ ‘ಆರ್‌ಆರ್‌ಆರ್’ ವೀಕ್ಷಿಸಿರುವುದಾಗಿ ಕ್ಯಾಮರೂನ್‌ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:RRR Movie | BAFTA ಪ್ರಶಸ್ತಿಯನ್ನು ತಪ್ಪಿಸಿಕೊಂಡ ಆರ್‌ಆರ್‌ಆರ್‌: ಟ್ರೋಲ್‌ ಆಗಿದ್ಯಾಕೆ?

ಆರ್‌ಆರ್‌ಆರ್‌ ಸಿನಿಮಾ ಗೋಲ್ಡನ್‌ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಮತ್ತು ಸಿಯಾಟಲ್ ಕ್ರಿಟಿಕ್ಸ್ ಅವಾರ್ಡ್ ಸೇರಿದಂತೆ ಹಲವು ಪುರಸ್ಕಾರಗಳನ್ನು ಗೆಲ್ಲುವುದರೊಂದಿಗೆ, ವಿಶ್ವಾದ್ಯಂತ ಅಭಿಮಾನಿಗಳ ಪ್ರೀತಿ ಪಡೆದಿದೆ. ಅಮೆರಿಕ ಹಾಗೂ ಬ್ರಿೆಟನ್‌ನಲ್ಲಿಯೂ ತನ್ನ ಕ್ರೇಜ್‌ ಉಳಿಸಿಕೊಂಡಿದೆ.

ಇದನ್ನೂ ಓದಿ: RRR Movie | BAFTA ಪ್ರಶಸ್ತಿಯನ್ನು ತಪ್ಪಿಸಿಕೊಂಡ ಆರ್‌ಆರ್‌ಆರ್‌: ಟ್ರೋಲ್‌ ಆಗಿದ್ಯಾಕೆ?

ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಲನಚಿತ್ರವು “ನಾಟು ನಾಟು” ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯಲ್ಲಿ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ‘ಅರ್ಜೆಂಟೀನಾ 1985’, ‘ಬಾರ್ಡೋ’, ‘ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್’, ‘ಕ್ಲೋಸ್’ ಮತ್ತು ‘ಡಿಸಿಷನ್ ಟು ಲೀವ್’ ಮುಂತಾದ ಘಟಾನುಘಟಿಗಳ ಚಿತ್ರಗಳ ವಿರುದ್ಧ ‘ಆರ್‌ಆರ್‌ಆರ್’ ಸ್ಪರ್ಧಿಸಿತ್ತು. ಆಸ್ಕರ್‌ ಪ್ರಶಸ್ತಿಗೆ ಕೂಡ ಇದು ಸ್ಪರ್ಧಾರ್ಹತೆ ಗಳಿಸಿದೆ.

Exit mobile version