ಬೆಂಗಳೂರು : ಗೋಲ್ಡನ್ ಗ್ಲೋಬ್ಸ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಪ್ಯಾನ್-ಇಂಡಿಯಾ ಚಲನಚಿತ್ರ ಆರ್‌ಆರ್‌ಆರ್ ಸಿನಿಮಾ (RRR Movie) ಪ್ರಶಸ್ತಿಗಳನ್ನು ಪಡೆದ ನಂತರ ಟಾಲಿವುಡ್ ಸ್ಟಾರ್ ಮತ್ತು ‘ಆರ್‌ಆರ್‌ಆರ್’ ನಾಯಕ ನಟ ಜೂನಿಯರ್ ಎನ್‌ಟಿಆರ್ ಜಾಗತಿಕವಾಗಿ ಗಮನ ಸೆಳೆಯುತ್ತಿದ್ದಾರೆ. ಇದೀಗ USA ಟುಡೆ ಮಾರ್ಚ್ 12ರಂದು ನೀಡಲಾಗುವ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಜೂನಿಯರ್ ಎನ್‌ಟಿಆರ್ ನಾಮನಿರ್ದೇಶಿತರಾಗುತ್ತಾರೆ ಎಂದು ಭವಿಷ್ಯ ನುಡಿದಿದೆ.
ಅಮೆರಿಕದ ‘ಯುಎಸ್‌ಎ ಟುಡೆ’ ವೆಬ್‌ಸೈಟ್, ಎಸ್‌ಎಸ್ ರಾಜಮೌಳಿ ಅವರ ‘ಆರ್‌ಆರ್‌ಆರ್’ ಸಿನಿಮಾದಲ್ಲಿನ ಜೂ. ಎನ್ ಟಿ ಆರ್ ಅವರು ಅಭಿನಯಕ್ಕಾಗಿ ಅವರನ್ನು 2023ರ ಆಸ್ಕರ್‌ನಲ್ಲಿ ಹಾಟೆಸ್ಟ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ | RRR Movie | BAFTA ಪ್ರಶಸ್ತಿಯನ್ನು ತಪ್ಪಿಸಿಕೊಂಡ ಆರ್‌ಆರ್‌ಆರ್: ಟ್ರೋಲ್ ಆಗಿದ್ಯಾಕೆ?
ಜೂನಿಯರ್ ಎನ್‌ಟಿಆರ್ ಅವರ ‘ಕೊಮರಂ ಭೀಮ್’ ಪಾತ್ರವು ಈ ವರ್ಷದ ಆಸ್ಕರ್ ರೇಸ್‌ನಲ್ಲಿ ವರ್ಷದ ಪ್ರಮುಖ ಪ್ರದರ್ಶನಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ವೆಬ್‌ಸೈಟ್ ಭವಿಷ್ಯ ನುಡಿದಿದೆ. ಯುಎಸ್‌ಎ ಟುಡೆಯ ಔಟ್‌ಲುಕ್ ಈ ವರ್ಷದ ಅಕಾಡೆಮಿ ಪ್ರಶಸ್ತಿಗಳಲ್ಲಿ ‘ಆರ್‌ಆರ್‌ಆರ್’ ಬಗ್ಗೆ ಒಟ್ಟಾರೆ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸದ್ಯ ಜೂನಿಯರ್ ಎನ್‌ಟಿಆರ್ ಶೀರ್ಷಿಕೆ ಇಡದ ‘NTR30’ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಇದನ್ನು ‘ಜನತಾ ಗ್ಯಾರೇಜ್’ ಖ್ಯಾತಿಯ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಚಿತ್ರವು ಏಪ್ರಿಲ್ 5, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘KGF’ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿರ್ದೇಶಿಸಲಿರುವ ಶಿರ್ಷಿಕೆ ಇಡದ ‘NTR31’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.
ಇದನ್ನೂ ಓದಿ | RRR Movie | ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ: ಅರ್ಜುನ್ ಸರ್ಜಾ ನೆನೆದ ಎಂ. ಎಂ. ಕೀರವಾಣಿ