ಬೆಂಗಳೂರು : ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್ (RRR Movie ) ಚಲನಚಿತ್ರವು “ನಾಟು ನಾಟು” ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು. ಎಸ್‌ಎಸ್ ರಾಜಮೌಳಿ ಮತ್ತು ಎಂಎಂ ಕೀರವಾಣಿ ಅವರ ಪ್ರಶಸ್ತಿ ಸ್ವೀಕಾರ ಭಾಷಣ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರ ನಿರ್ದೇಶಕ-ಸಂಗೀತ ನಿರ್ದೇಶಕ ಜೋಡಿ ದೊಡ್ಡ ಗೆಲುವು ಸಾಧಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.
ಎಸ್ ಎಸ್ ರಾಜಮೌಳಿ ಅವರು ತಮ್ಮ ಪ್ರಶಸ್ತಿಯನ್ನು ತಮ್ಮ ಜೀವನದ ಎಲ್ಲ ಮಹಿಳೆಯರಿಗೆ ಅರ್ಪಿಸಿದ್ದಾರೆ. ಅವರ ಸ್ವೀಕಾರ ಭಾಷಣದಲ್ಲಿ, “‘ನನ್ನ ಜೀವನದಲ್ಲಿ ಬಂದ ಮಹಿಳೆಯರಿಗೆ ಧನ್ಯವಾದ ಹೇಳುತ್ತೇನೆ. ಮುಖ್ಯವಾಗಿ ನನ್ನ ತಾಯಿ, ಅವರು ಶಾಲಾ ಶಿಕ್ಷಣವನ್ನು ನನಗೆ ನೀಡಿದ್ದಾರೆ. ಅವರು ಕಾಮಿಕ್ಸ್ ಮತ್ತು ಕಥೆಪುಸ್ತಕಗಳನ್ನು ಓದಲು ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಅವರು ನನ್ನ ಸೃಜನಶೀಲತೆಯನ್ನು ಪ್ರೋತ್ಸಾಹಿಸಿದರು,” ಎಂದಿದ್ದಾರೆ. ʻʻನನ್ನ ಅತ್ತಿಗೆ ನನಗೆ ಯಾವಾಗಲೂ ಪ್ರೋತ್ಸಾಹಿಸುತ್ತಾರೆ. ನನ್ನ ಹೆಂಡತಿ ರಮಾ, ಅವಳು ನನ್ನ ಚಲನಚಿತ್ರಗಳ ವಸ್ತ್ರ ವಿನ್ಯಾಸಕಿ, ಅವಳು ನನ್ನ ಜೀವನದ ವಿನ್ಯಾಸಕಿ ಕೂಡ. ನನ್ನ ಹೆಣ್ಣುಮಕ್ಕಳಿಗೆ, ಅವರು ಏನನ್ನೂ ಮಾಡುವುದಿಲ್ಲ. ಆದರೆ ಅವರ ನಗು ನನ್ನ ಜೀವನವನ್ನು ಬೆಳಗಿಸಲು ಸಾಕು. ಅಂತಿಮವಾಗಿ ನನ್ನ ಮಾತೃಭೂಮಿ ಭಾರತ, ʻಮೇರಾ ಭಾರತ್ ಮಹಾನ್, ಜೈ ಹಿಂದ್ʼ ಎಂದು ರಾಜಮೌಳಿ ತಮ್ಮ ಭಾಷಣವನ್ನು ಮುಗಿಸಿದರು.
ಇದನ್ನೂ ಓದಿ | RRR Movie | ಎರಡು ಬಾರಿ ಆರ್‌ಆರ್‌ಆರ್ ಸಿನಿಮಾ ವೀಕ್ಷಿಸಿದ ಜೇಮ್ಸ್ ಕ್ಯಾಮರೂನ್: ಪೋಸ್ಟ್ ಹಂಚಿಕೊಂಡ ರಾಜಮೌಳಿ!
ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ‘ಅತ್ಯುತ್ತಮ ಗೀತೆ’ ಪ್ರಶಸ್ತಿಯನ್ನು ಸ್ವೀಕರಿಸಿ ‘ಆರ್‌ಆರ್‌ಆರ್’ನ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಅವರು ತಮ್ಮ ಭಾಷಣದಲ್ಲಿ, “ತುಂಬಾ ಧನ್ಯವಾದಗಳು. ವಿಮರ್ಶಕರಿಂದ ಈ ಅದ್ಭುತ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ಇಲ್ಲಿದ್ದೇನೆ. ಎಲ್ಲಾ ವಿಮರ್ಶಕರಿಗೆ, ನನ್ನ ನೃತ್ಯ ಸಂಯೋಜಕ, ಸಾಹಿತ್ಯ ಬರಹಗಾರ, ನನ್ನ ಗಾಯಕರ ಪರವಾಗಿ ಧನ್ಯವಾದಗಳುʼʼಎಂದಿದ್ದಾರೆ
RRR ಚಲನಚಿತ್ರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಸೋಮವಾರ ಸಂಗೀತ ನಿರ್ದೇಶಕರ ಸ್ವೀಕಾರ ಭಾಷಣದ ವಿಡಿಯೊವನ್ನು ಹಂಚಿಕೊಂಡಿದೆ.
ಕಳೆದ ರಾತ್ರಿ ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಲನಚಿತ್ರವು “ನಾಟು ನಾಟು” ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯಲ್ಲಿ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ‘ಅರ್ಜೆಂಟೀನಾ 1985’, ‘ಬಾರ್ಡೋ’, ‘ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್’, ‘ಕ್ಲೋಸ್’ ಮತ್ತು ‘ಡಿಸಿಷನ್ ಟು ಲೀವ್’ ಮುಂತಾದ ಘಟಾನುಘಟಿಗಳ ಚಿತ್ರಗಳ ವಿರುದ್ಧ ‘ಆರ್‌ಆರ್‌ಆರ್’ ಸ್ಪರ್ಧಿಸಿತ್ತು. ಆಸ್ಕರ್ ಪ್ರಶಸ್ತಿಗೆ ಕೂಡ ಇದು ಸ್ಪರ್ಧಾರ್ಹತೆ ಗಳಿಸಿದೆ.
ಇದನ್ನೂ ಓದಿ | RRR Movie | ಮತ್ತೆ 2 ಪ್ರಶಸ್ತಿ | ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ | ಅತ್ಯುತ್ತಮ ವಿದೇಶಿ ಚಿತ್ರ ಮತ್ತು ಅತ್ಯುತ್ತಮ ಹಾಡು