ಬೆಂಗಳೂರು : ಜನವರಿ 19ರಂದು, BAFTA (ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್) ಪ್ರಶಸ್ತಿಗಳ ಶಾರ್ಟ್‌ಲಿಸ್ಟ್ ಅನ್ನು ಘೋಷಿಸಲಾಗಿದ್ದು, ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ (RRR Movie) ಸ್ಥಾನ ಪಡೆಯಲಿಲ್ಲ. ಶೌನಕ್ ಸೇನ್ ಅವರ ʻಆಲ್ ದಟ್ ಬ್ರೀತ್ಸ್ʼ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗಕ್ಕೆ ಆಯ್ಕೆಯಾಗಿದ್ದು, ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಆರ್‌ಆರ್‌ಆರ್ ಸಿನಿಮಾ ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ಮತ್ತು ಸಿಯಾಟಲ್ ಕ್ರಿಟಿಕ್ಸ್ ಅವಾರ್ಡ್ ಸೇರಿದಂತೆ ಹಲವು ಪುರಸ್ಕಾರಗಳನ್ನು ಗೆಲ್ಲುವುದರೊಂದಿಗೆ, ವಿಶ್ವಾದ್ಯಂತ ಅಭಿಮಾನಿಗಳ ಪ್ರೀತಿ ಪಡೆದಿದೆ. ಅಮೆರಿಕ ಹಾಗೂ ಯುನೈಟೆಡ್ ಕಿಂಗ್‌ಡಮ್‌ನಲ್ಲಿಯೂ ತನ್ನ ಕ್ರೇಜ್ ಉಳಿಸಿಕೊಂಡಿದೆ. ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಆರ್ಟ್ಸ್ ಟೆಲಿವಿಷನ್ ಪ್ರಶಸ್ತಿಗಳ ವಿಚಾರಕ್ಕೆ ಆರ್‌ಆರ್‌ಆರ್ ಸಖತ್ ಟ್ರೋಲ್ ಆಗಿದೆ. ಕೆಲವರು ʻನಂಬಲು ಅಸಾಧ್ಯʼ ಎಂದು ಕಮೆಂಟ್ ಮಾಡಿದರೆ, ಇನ್ನು ಕೆಲವರು, ʻಪರವಾಗಿಲ್ಲ, ಆಯ್ಕೆಯಾಗದಿದ್ದರೇನು, ಹೃದಯ ಗೆದ್ದಿದ್ದೀರಿʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ | RRR Movie | ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ: ಅರ್ಜುನ್ ಸರ್ಜಾ ನೆನೆದ ಎಂ. ಎಂ. ಕೀರವಾಣಿ
ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಮರ್ಶಕರ ಆಯ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಚಲನಚಿತ್ರವು “ನಾಟು ನಾಟು” ಎಂಬ ಅತ್ಯುತ್ತಮ ಮೂಲ ಗೀತೆಗಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು, ಅಲ್ಲದೆ ವಿದೇಶಿ ಭಾಷೆಯ ಅತ್ಯುತ್ತಮ ಪ್ರಶಸ್ತಿ ಕೂಡ ತನ್ನದಾಗಿಸಿಕೊಂಡಿತು. ಈ ಸ್ಪರ್ಧೆಯಲ್ಲಿ ‘ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್’, ‘ಅರ್ಜೆಂಟೀನಾ 1985’, ‘ಬಾರ್ಡೋ’, ‘ಫಾಲ್ಸ್ ಕ್ರಾನಿಕಲ್ ಆಫ್ ಎ ಹ್ಯಾಂಡ್‌ಫುಲ್ ಆಫ್ ಟ್ರೂತ್ಸ್’, ‘ಕ್ಲೋಸ್’ ಮತ್ತು ‘ಡಿಸಿಷನ್ ಟು ಲೀವ್’ ಮುಂತಾದ ಘಟಾನುಘಟಿಗಳ ಚಿತ್ರಗಳ ವಿರುದ್ಧ ‘ಆರ್‌ಆರ್‌ಆರ್’ ಸ್ಪರ್ಧಿಸಿತ್ತು. ಆಸ್ಕರ್ ಪ್ರಶಸ್ತಿಗೆ ಕೂಡ ಇದು ಸ್ಪರ್ಧಾರ್ಹತೆ ಗಳಿಸಿದೆ.
ಇದನ್ನೂ ಓದಿ | RRR Movie | ʻಮೇರಾ ಭಾರತ್ ಮಹಾನ್, ಜೈ ಹಿಂದ್ ʼ ಎಂದ ರಾಜಮೌಳಿ: ಸ್ವೀಕಾರ ಭಾಷಣ ಹೇಗಿತ್ತು?