Site icon Vistara News

RRR Movie: ನನ್ನ ಸಿನಿಮಾಗಳು ರಾಮಾಯಣ ಮತ್ತು ಮಹಾಭಾರತದಿಂದ ಪ್ರಭಾವಿತವಾಗಿವೆ: ಎಸ್‌ಎಸ್ ರಾಜಮೌಳಿ

ss rajamouli

ಬೆಂಗಳೂರು: ಆರ್‌ಆರ್‌ಆರ್ (RRR Movie) ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಆಸ್ಕರ್ ಪ್ರಶಸ್ತಿಗಾಗಿ ಅಮೆರಿಕದಲ್ಲಿದ್ದು, ಕಾರ್ಯಕ್ರಮಕ್ಕೂ ಮುನ್ನ ಅವರು ಅಮೆರಿಕನ್ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಪ್ರಕಟಣೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ನಿರ್ದೇಶಕ ರಾಜಮೌಳಿ ಅವರು ʻರಾಮಾಯಣ ಮತ್ತು ಮಹಾಭಾರತಗಳು ತಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿವೆ ಮತ್ತು ಅದನ್ನು ಹೇಗೆ ತಾನು ಸಿನಿಮಾಗಳಿಗೆ ಅಳವಡಿಸಿಕೊಂಡೆʼʼಎಂಬುದರ ಬಗ್ಗೆ ಮಾತನಾಡಿದರು.

SS ರಾಜಮೌಳಿ ಅವರು ದಿ ನ್ಯೂಯಾರ್ಕರ್‌ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ, “ನಾನು ಬಾಲ್ಯದಿಂದಲೂ ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು ಓದಿದ್ದೇನೆ. ಮತ್ತು ಆರಂಭದಲ್ಲಿ ಅವು ಕೇವಲ ಒಳ್ಳೆಯ, ಆಕರ್ಷಕವಾದ ಕಥೆಗಳಾಗಿದ್ದವು. ನಾನು ಬೆಳೆಯಲು ಪ್ರಾರಂಭಿಸಿದಾಗ, ನಾನು ಪಠ್ಯದ ವಿವಿಧ ಆವೃತ್ತಿಗಳನ್ನು ಓದುತ್ತ ಬಂದೆ. ಮತ್ತು ಕಥೆಯು ನನಗೆ ಪ್ರಭಾವ ಬೀರಲು ಶುರುವಾಯಿತು. ನಾನು ಪಾತ್ರಗಳು, ಪಾತ್ರಗಳೊಳಗಿನ ಸಂಘರ್ಷಗಳು ಮತ್ತು ಅವರ ಪ್ರೇರೇಪಿಸುವ ಭಾವನೆಗಳನ್ನು ನೋಡಿದೆ. ನಾನು ಈ ಪಠ್ಯಗಳನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಮತ್ತು ಪ್ರೀತಿಸಲು ಪ್ರಾರಂಭಿಸಿದೆ. ನನ್ನಿಂದ ಹೊರಬರುವ ಯಾವುದಾದರೂ ಪ್ರಭಾವಿತವಾಗಿರುವ ಅಂಶಗಳಿಗೆ ಕಾರಣ ಅಂದರೆ ರಾಮಾಯಣ ಮತ್ತು ಮಹಾಭಾರತ. ಪ್ರತಿ ಬಾರಿ ನಾನು ಓದಿದಾಗ ಹೊಸದನ್ನು ಕಂಡುಕೊಳ್ಳುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: RSS Movie: RSS ಯಶೋಗಾಥೆಯ ಸಿನೆಮಾ: ವಿಜಯೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ ನಿರ್ದೇಶನ?

ಇದನ್ನೂ ಓದಿ : RRR Movie: ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್‌ನಲ್ಲಿ ಸಾಲು ಸಾಲು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ RRR!

ಆಸ್ಕರ್‌ನಲ್ಲಿ RRR

ಆರ್‌ಆರ್‌ಆರ್‌ನ ʻನಾಟು ನಾಟುʼ ಹಾಡು ಈ ವರ್ಷದ ಆಸ್ಕರ್‌ನಲ್ಲಿನಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಆಯ್ಕೆಯಾಗಿದೆ. ಮಾರ್ಚ್ 12ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರಿಂದ ವೇದಿಕೆಯಲ್ಲಿ ನಾಟು ನಾಟು ಲೈವ್ ಪ್ರದರ್ಶನಗೊಳ್ಳಲಿದೆ. ಕಾಲ ಭೈರವನ ತಂದೆ ಎಂಎಂ ಕೀರವಾಣಿ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ಪ್ರದರ್ಶನದ ಸಮಯದಲ್ಲಿ ಅವರು ಸಹ ಇರುತ್ತಾರೆ. ಈ ಹಾಡು ಜನವರಿಯಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಂತರ ವಿಮರ್ಶಕರ ಆಯ್ಕೆ ಪ್ರಶಸ್ತಿಗಳು ಮತ್ತು ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಪ್ರಶಸ್ತಿಗಳು ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತು.

Exit mobile version