ಬೆಂಗಳೂರು: ರಾಜಮೌಳಿ ನಿರ್ದೇಶನದ RRR ಸಿನಿಮಾ (RRR Movie ) ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ʼಅತ್ಯುತ್ತಮ ಒರಿಜಿನಲ್ ಹಾಡುʼ ವಿಭಾಗದಲ್ಲಿ ಪುರಸ್ಕಾರ ಪಡೆದಿದೆ. ಆರ್‌ಆರ್‌ಆರ್ ಬಾಲಿವುಡ್ ಚಲನಚಿತ್ರವಲ್ಲ ಎಂದು ಹೇಳುವ ಮೂಲಕ ರಾಜಮೌಳಿ ಸುದ್ದಿಯಲ್ಲಿದ್ದಾರೆ. ರಾಜಮೌಳಿ ಇತ್ತೀಚೆಗೆ ಅಮೆರಿಕದ ಡೈರೆಕ್ಟರ್ಸ್ ಗಿಲ್ಡ್ ಜತೆಗಿನ ತಮ್ಮ ಸಿನಿಮಾದ ಪ್ರದರ್ಶನ ವೇಳೆ ಆರ್‌ಆರ್‌ಆರ್ ಬಾಲಿವುಡ್ ಚಿತ್ರವಲ್ಲ ಎಂದಿದ್ದಾರೆ.
ರಾಜಮೌಳಿ ಮಾತನಾಡಿ ʻʻಆರ್‌ಆರ್‌ಆರ್ ಬಾಲಿವುಡ್ ಚಿತ್ರವಲ್ಲ. ಇದು ದಕ್ಷಿಣ ಭಾರತದ ತೆಲುಗು ಚಿತ್ರ, ಆದರೆ ಚಿತ್ರವನ್ನು ನಿಲ್ಲಿಸಿ ನಿಮಗೆ ಸಂಗೀತ ಮತ್ತು ನೃತ್ಯವನ್ನು ನೀಡುವುದಕ್ಕಿಂತ ಕಥೆಯನ್ನು ಮುಂದಕ್ಕೆ ಸಾಗಿಸಲು ನಾನು ಹಾಡನ್ನು ಬಳಸಿದ್ದೇನೆ” ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ “ಕಥೆಯು ಮುಂದಕ್ಕೆ ಹೋಗಲು ನಾನು ಆ ಅಂಶಗಳನ್ನು ಬಳಸುತ್ತೇನೆ . ಚಿತ್ರದ ಕೊನೆಯಲ್ಲಿ, ನೀವು ಮೂರು ಗಂಟೆಗಳ ಕಾಲ ನನಗೆ ಏನೂ ಅನಿಸಲಿಲ್ಲ ಎಂದು ನೀವು ಹೇಳಿದರೆ, ನಾನು ಯಶಸ್ವಿ ಚಲನಚಿತ್ರ ನಿರ್ದೇಶಕ ಎನ್ನಬಲ್ಲೇʼʼಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನೂ ಓದಿ | RRR Movie | RRR ತಂಡವನ್ನು ಅಭಿನಂದಿಸಲು ಟೈಗರ್ ಶ್ರಾಫ್ ವಿಶೇಷ ವಿಡಿಯೊ: ಇದು ವಿಜಯದ ನೃತ್ಯ!
80ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಮಿಂಚಿದ RRR, ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿತ್ತು. ಅವು ʼಅತ್ಯುತ್ತಮ ಆಂಗ್ಲೇತರ ಚಿತ್ರʼ ಹಾಗೂ ʼಅತ್ಯುತ್ತಮ ಹಾಡುʼ ವಿಭಾಗಗಳು. ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಆರ್‌ಆರ್‌ಆರ್‌ನ ʼನಾಟು ನಾಟುʼ ಗೆದ್ದುಕೊಂಡಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ನಿರ್ದೇಶಕ ಎಸ್.ಎಸ್ ರಾಜಮೌಳಿ, ಜೂ.ಎನ್‌ಟಿಆರ್, ರಾಮ್‌ಚರಣ್ ಜತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಭಾಗಿಯಾಗಿದ್ದರು. ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದರು.
ಇದನ್ನೂ ಓದಿ | RRR Movie | ʼತೆಲುಗು ಧ್ವಜʼಕ್ಕೆ ಕ್ಯಾತೆ ತೆಗೆದ ಅದ್ನಾನ್ ಸಾಮಿಗೆ ʼವಿವಿಧತೆಯಲ್ಲಿ ಏಕತೆʼಯ ಪಾಠ ಮಾಡಿದ ನಟಿ ರಮ್ಯಾ