ಬೆಂಗಳೂರು : ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (RRR Movie) ಸಿನಿಮಾ ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ವರ್ಷದ ಅತ್ಯುತ್ತಮ ಚಲನಚಿತ್ರ ಎಂದು ಖ್ಯಾತಿ ಪಡೆದಿತ್ತು. ‘ಆರ್‌ಆರ್‌ಆರ್’ ಚಿತ್ರ ಭಾರಿ ಯಶಸ್ಸಿನ ಹೊರತಾಗಿಯೂ ಆಸ್ಕರ್ 2023ಕ್ಕೆ ಆಯ್ಕೆ ಮಾಡಲಾಗಿಲ್ಲ. ಇದೀಗ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಆರ್‌ಆರ್‌ಆರ್ ಆಸ್ಕರ್ ಪ್ರಶಸ್ತಿ ಪಡೆಯಲಿದೆ ಎಂದು ಜನಪ್ರಿಯ ನಿಯತಕಾಲಿಕೆ ಒಂದು ಭವಿಷ್ಯ ನುಡಿದಿದೆ.
ಎಸ್ ಎಸ್ ರಾಜಮೌಳಿ ಅವರು ಆರ್‌ಆರ್‌ಆರ್‌ಗಾಗಿ ಆಸ್ಕರ್ ನಾಮನಿರ್ದೇಶನವನ್ನು ಪಡೆಯಲು ಪ್ರಚಾರ ಮಾಡುತ್ತಿದ್ದಾರೆ. ಅವರು ಇತ್ತೀಚೆಗೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದರು. ಇದು ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತು. ಇತ್ತೀಚಿನ ವರದಿ ಪ್ರಕಾರ ಆರ್‌ಆರ್‌ಆರ್ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ ಎಂದು ಜನಪ್ರಿಯ ಮ್ಯಾಗಜಿನ್ ಒಂದು ಭವಿಷ್ಯ ನುಡಿದಿದೆ. ಅದರಲ್ಲಿಯೂ ʻಟಾಪ್ ಗನ್ 2ʼ, ‘ಅವತಾರ್ 2’, ‘ಬ್ಲ್ಯಾಕ್ ಪ್ಯಾಂಥರ್ 2’ ಮತ್ತು ‘ದಿ ಬ್ಯಾಟ್‌ಮ್ಯಾನ್’ ಸಿನಿಮಾಗಳು ಕೂಡ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ ಎಂದು ವರದಿ ಆಗಿದೆ.
ಇದನ್ನೂ ಓದಿ | ʻಆರ್‌ಆರ್‌ಆರ್ʼಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್.. ʻಬಾಹುಬಲಿ-2ʼ ಚಿತ್ರವನ್ನೇ ಮೀರಿಸುತ್ತೆ ಈ ಸಿನಿಮಾ..!
RRR ಸಿನಿಮಾ ವಿದೇಶಿ ಮಾರುಕಟ್ಟೆಗಳಲ್ಲಿ ಸಖತ್ ಸೌಂಡ್ ಮಾಡಿತ್ತು. ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದೆ.
‘ಆರ್‌ಆರ್‌ಆರ್’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮತ್ತು ಇತರೆ ಸಹಕಲಾವಿದರು ನಟಿಸಿದ್ದಾರೆ. ಮಾರ್ಚ್ 2022ರಲ್ಲಿ ಬಿಡುಗಡೆಯಾದ ‘RRR’ ಚಿತ್ರ ಇಬ್ಬರು ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಪಾತ್ರಗಳನಿಟ್ಟುಕೊಂಡು ಮಾಡಿದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ.
ವಿಶ್ವಾದ್ಯಂತ 1200 ಕೋಟಿ ರೂ. ಹೆಚ್ಚು ಗಳಿಕೆ ಕಂಡು ಭಾರತದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು. ಭಾರತೀಯ ಚಲನಚಿತ್ರ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆಯಿತು.
ಇದನ್ನೂ ಓದಿ | Rajamouli | ರಾಜಮೌಳಿ ಕಿರೀಟಕ್ಕೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ