Site icon Vistara News

RRR ಒಟಿಟಿಯಲ್ಲಿ ಬರ್ತಾ ಇದೆ! ಮೇ 20ರಿಂದ ಝೀ 5ನಲ್ಲಿ ನೋಡಿ

RRR Cinema

ಬೆಂಗಳೂರು : ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು. ಬಾಹುಬಲಿ ನಂತರ ಅವರು ನಿರ್ದೇಶಿಸಿದ ಆರ್‌ಆರ್‌ಆರ್‌ (RRR) ಸಿನಿಮಾ ವಿಶ್ವಾದ್ಯಂತ ಹೆಸರು ಪಡೆದುಕೊಂಡಿತು. ಮಾರ್ಚ್‌ 24ರಂದು ವಿಶ್ವಾದ್ಯಂತ ತೆರೆ ಕಂಡ ಈ ಸಿನಿಮಾ ರಾಜಮೌಳಿ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿ ಮಹಾ ಗೆಲುವನ್ನು ಪಡೆಯಿತು. ಸಿನಿಮಾವನ್ನು ಥಿಯೇಟರ್‌ನಲ್ಲಿ ಜನ ಮುಗಿಬಿದ್ದು ನೋಡಿದ್ದರು. ಆದರೆ, ಕೆಲವೊಂದು ಸಿನಿಮಾ ಪ್ರಿಯರು ಇದು ಓಟಿಟಿಗೆ ಯಾವಾಗ ಬರುತ್ತೋ ಅಂತ ತುದಿಗಾಲಲ್ಲಿ ಕಾಯ್ತಾ ಇದ್ದರು.

ಇದನ್ನೂ ಓದಿ | RRR: ರೌದ್ರಂ.. ರಣಂ.. ರುಧಿರಂ.. ಒಂದು ಹೈ ವೊಲ್ಟೇಜ್‌ ಮೂವಿ

ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು ಆರ್‌ ಆರ್‌ ಆರ್‌ ಟೀಮ್‌ ಜನರಿಗೆ ಒಳ್ಳೆ ಸುದ್ದಿಯೊಂದನ್ನು ನೀಡಿದೆ ಆರ್‌ಆರ್‌ಆರ್‌.. ಇದೇ ಮೇ 20 ರಂದು ಜೀ 5ನಲ್ಲಿ ಬಿಡುಗಡೆಗೊಳ್ಳುತ್ತಿದೆ.

ಸಾವಿರ ಕೋಟಿ ಕಲೆಕ್ಷನ್‌ ಆದ ಸಿನಿಮಾ ಕನ್ನಡ ತೆಲುಗು, ಮಲಯಾಳಂ, ತಮಿಳುನಲ್ಲಿ ಒಟಿಟಿ ಪ್ರಸಾರ ಹಕ್ಕುಗಳನ್ನು ಜೀ 5 ಖರೀದಿಸಿದೆ. ಜ್ಯೂ..ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ಅವರು ಸಖತ್‌ ಆಕ್ಷನ್ ಮೆರೆದಿರೋ ಈ ಸಿನಿಮಾದಲ್ಲಿ ಆಲಿಯಾ ಭಟ್‌ ಮತ್ತು ಅಜಯ್‌ ದೇವಗನ್‌  ನಟಿಸಿರೋದು ಇನ್ನೂ ವಿಶೇಷ.

ಇದನ್ನೂ ಓದಿ| ʻಆರ್‌ಆರ್‌ಆರ್‌ʼಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್‌.. ʻಬಾಹುಬಲಿ-2ʼ ಚಿತ್ರವನ್ನೇ ಮೀರಿಸುತ್ತೆ ಈ ಸಿನಿಮಾ..!

Exit mobile version