ಬೆಂಗಳೂರು: ದೊಡ್ಡ ಪರದೆ ಮೇಲೆ RSS (RSS Movie) ಯಶೋಗಾಥೆ ಬರಲಿದೆ. ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈಗಾಗಲೇ ಕಥೆ ಬರೆಯುತ್ತಿದ್ದು, ಆರ್‌ಎಸ್‌ಎಸ್ ಕಥೆ ಕೇಳುತ್ತಲೇ ನಿರ್ದೇಶಕ ರಾಜಮೌಳಿ ಕೆಲವು ದಿನಗಳ ಹಿಂದೆ ಕಣ್ಣೀರಿಟ್ಟಿದ್ದರು. ಆರ್‌ಎಸ್‌ಎಸ್ ಸಿನಿಮಾ ಮಾಡುವ ಐಡಿಯಾ ಲಹರಿ ವೇಲು ಅವರದ್ದಾಗಿದೆ. ಇದೀಗ ಆರ್‌ಎಸ್‌ಎಸ್ ಸಿನಿಮಾ ಕುರಿತು ವಿಸ್ತಾರ ನ್ಯೂಸ್‌ಗೆ ಲಹರಿ ಸಂಸ್ಥೆಯ ವೇಲು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಲಹರಿ ವೇಲು ಮಾತನಾಡಿ ʻʻRSS ಕಥೆ ಬರೆಯಲು ಬರೆಯಲು ನಾನು ಹೇಳಿದ್ದೆ. ಕಥೆ ಈಗಾಗಲೇ ತಯಾರಿದೆ. ಒಳ್ಳೆಯ ನಿರ್ದೇಶಕರಿಗಾಗಿ ಹುಡುಕಾಟ ನಡೆಯುತ್ತಿದೆ. ಆರ್ ಎಸ್ ಎಸ್ ಸಿನಿಮಾ ನನ್ನ ಬ್ಯಾನರ್‌ನಲ್ಲಿಯೇ ಮೂಡಿ ಬರಲಿದೆ. ಈಗಾಗಲೇ ಎಲ್ಲ ಕಡೆ ಟೈಟಲ್ ರಿಜಿಸ್ಟರ್ ಆಗಿದೆʼʼ ಎಂದರು.
ವಿಜಯೇಂದ್ರ ಪ್ರಸಾದ್ ಬರೆದ ಕಥೆಗೆ ರಾಜಮೌಳಿ ನಿರ್ದೇಶನ?
ರಾಜಮೌಳಿ ಅವರು ಒಪ್ಪಿದರೆ ಚಿತ್ರವನ್ನು ಈ ಕೂಡಲೇ ಮಾಡುವುದಕ್ಕೂ ರೆಡಿ ಇರುವುದಾಗಿ ಲಹರಿ ವೇಲು ಹೇಳಿದ್ದಾರೆ. ಆದರೆ ಸದ್ಯ ರಾಜಮೌಳಿ ಅವರು ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸ್ಪೈ ಚಿತ್ರ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ.
ರಾಜಮೌಳಿ ತಂದೆ ನಡೆಗೆ ಲಹರಿ ವೇಲು ಬೇಸರ ಹೊರ ಹಾಕಿದ್ರಾ?
ಲಹರಿ ವೇಲು ಅವರು ತಮ್ಮ RSS ಕಥೆಯನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತೆರೆಗೆ ತರಬೇಕು ಎನ್ನುವ ಇರಾದೆಯಲ್ಲಿ ಇದ್ದರೂ, ರಾಜಮೌಳಿ ಅವರಾಗಲಿ, ಅವರ ತಂದೆಯವರಾಗಲಿ ಎಲ್ಲೂ ತಮ್ಮ ಸಂಸ್ಥೆ ಹೆಸರೂ ಹೇಳಲಿಲ್ಲ ಎಂದು ಲಹರಿ ವೇಲು ಬೇಸರದಲ್ಲೂ ಇದ್ದಾರೆ ಎನ್ನಲಾಗುತ್ತಿದೆ.