Site icon Vistara News

Saanya Iyer: ಸಾನ್ಯಾ ಅಯ್ಯರ್‌ ಬೋಲ್ಡ್‌ ಫೋಟೊಶೂಟ್‌ಗೆ ಸಂಸ್ಕೃತಿ ನೆನಪಿಸಿದ ನೆಟ್ಟಿಗರು!

Saanya Iyer New Hot Photoshoot

ಬಾಲಿವುಡ್​ನ ಖ್ಯಾತ ಫೋಟೊಗ್ರಾಫರ್ ಡಬೂ ರತ್ನಾನಿ ಬಳಿ ಸಾನ್ಯಾ ಅಯ್ಯರ್‌ (Saanya Iyer) ಫೋಟೊಶೂಟ್‌ ಮಾಡಿಸಿಕೊಂಡಿರುವ ಫೋಟೊಗಳನ್ನು ಈ ಹಿಂದೆ ಹಂಚಿಕೊಂಡಿದ್ದರು. ಇದೀಗ ಹೊಸ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಸಾನ್ಯಾ ಅಯ್ಯರ್‌ ಹೊಸ ಫೋಟೊಶೂಟ್‌ನಲ್ಲಿ ಸಖತ್‌ ಹಾಟ್‌ ಹಾಗೂ ಬೋಲ್ಡ್‌ ಆಗಿ ಪೋಸ್‌ ನೀಡಿದ್ದಾರೆ. ಇದೀಗ ನೆಟ್ಟಿಗರು ನಟಿಗೆ ಕಾಮೆಂಟ್‌ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಒಬ್ಬರು ʻʻಸಾನ್ಯಾ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ. ಆದರೆ ಅವರಿಗೇ ಈ ಜ್ಞಾನ ಇಲ್ಲ ಎನ್ನುವುದೇ ದುಃಖʼʼಎಂದು ಕರ್ನಾಟಕದ ಸಂಸ್ಕೃತಿ ನೆನಪಿಸಿದ್ದಾರೆ.

ಮತ್ತೊಬ್ಬರು ʻʻನಿಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಇದೆ. ಯಾವುದೋ ಆಫರ್‌ಗೋಸ್ಕರ ಈ ತರ ಬಟ್ಟೆ ಹಾಕಬೇಡಿʼʼಎಂದು ಕಾಮೆಂಟ್‌ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮೂಲಕ ಫೇಮಸ್ ಆದ ಸಾನ್ಯಾ ಅಯ್ಯರ್‌ ಸದ್ಯ ಯಾವುದೇ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿಲ್ಲ. ಸಾನ್ಯಾ ಅಯ್ಯರ್‌ ಆಗಾಗ ತಮ್ಮ ಖುಷಿಯ ಸನ್ನಿವೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Exit mobile version