Site icon Vistara News

UPSC Exam: ಸ್ಯಾಂಡಲ್‌ವುಡ್‌ನ ಖ್ಯಾತ ಬಾಲನಟಿ ಈಗ ಐಎಎಸ್‌ ಅಧಿಕಾರಿ!

keerthana h s IAS

ಬೆಂಗಳೂರು: ದೇಶದ ಮೂಲೆಮೂಲೆಯ ಲಕ್ಷಾಂತರ ಪ್ರಜೆಗಳು (ಯುಪಿಎಸ್‌ಸಿ) UPSC ಪರೀಕ್ಷೆ ಬರೆದರೂ ಪಾಸಾಗುವುದು, ಐಎಎಸ್‌ ಅಧಿಕಾರಿಯಾಗುವುದು ನೂರಾರು ಅಭ್ಯರ್ಥಿಗಳು ಮಾತ್ರ. ಇವರ ಪೈಕಿ ಕೆಲವರು ತಮ್ಮ ಸತತ ಪ್ರಯತ್ನದಿಂದಾಗಿ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇದೀಗ ಸಿನೆಮಾ ಕ್ಷೇತ್ರವನ್ನು ತೊರೆದು ಆಡಳಿತಾತ್ಮಕ ಉದ್ಯೋಗಗಳನ್ನು ಪಡೆದು ಮಾದರಿಯಾದ ಬಾಲನಟಿ ನಮ್ಮೊಂದಿಗೆ (Former child artist H S Keerthana) ಇದ್ದಾರೆ. ಅನೇಕ ಚಲನಚಿತ್ರಗಳಲ್ಲಿ ಖ್ಯಾತಿ ಪಡೆದ ಬಾಲನಟಿ ಎಚ್ ಎಸ್ ಕೀರ್ತನಾ ಮಂಡ್ಯದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಶುರು ಮಾಡಿದ್ದಾರೆ. ಶಿವರಾಜ್‌ಕುಮಾರ್ ನಟನೆಯ ‘ದೊರೆ’ ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದ್ದ ಎಚ್ ಎಸ್ ಕೀರ್ತನಾ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಭರವಸೆ ಕಳೆದುಕೊಳ್ಳದ ನಟಿ

ಬಾಲನಟಿಯಾಗಿದ್ದ ಕೀರ್ತನಾ ಐದು ಬಾರಿ UPSC ಪರೀಕ್ಷೆಯಲ್ಲಿ ಎದುರಿಸಿ ವಿಫಲಗೊಂಡಿದ್ದರು. ಆದರೆ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ತಮ್ಮ ಆರನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಪಾಸಾದರು. ನಂದಿನಿ ಲೇಔಟ್ ಅಣ್ಣಮ್ಮ ಉತ್ಸವವೊಂದರಲ್ಲಿ ನೃತ್ಯ ಮಾಡುತ್ತಿದ್ದ ಬಾಲಕಿ ನಂತರ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೇ ಅಚ್ಚರಿ. ಕರ್ಪೂರದ ಗೊಂಬೆ ಸಿನಿಮಾ, ಗಂಗಾ-ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ ಮತ್ತು ಟಿವಿ ಧಾರಾವಾಹಿಗಳಾದ ಜನನಿ, ಚಿಗುರು ಮತ್ತು ಪುಟಾಣಿ ಏಜೆಂಟ್‌ ಹೀಗೆ 32ಕ್ಕೂ ಅಧಿಕ ಸಿನಿಮಾ, ಧಾರಾವಾಹಿಗಳಲ್ಲಿ ಕೀರ್ತನಾ ನಟಿಸಿದ್ದರು. ಮಾತ್ರವಲ್ಲ ರಾಷ್ಟ್ರೀಯ ಬಾಲ ಪುರಸ್ಕಾರ, ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇದನ್ನೂ ಓದಿ:  UPSC Exam: ಒಂದೇ ಹೆಸರು, ಒಂದೇ ರೋಲ್‌ ನಂಬರ್‌, ಒಂದೇ ರ‍್ಯಾಂಕ್‌! ಯುಪಿಎಸ್‌ಸಿ ಪರೀಕ್ಷೆಯಲ್ಲೊಂದು ಎಡವಟ್ಟು

ತನ್ನ UPSC ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಕೀರ್ತನಾ 2011ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಗೆ ಹಾಜರಾಗಿದ್ದರು. ಮಾತ್ರವಲ್ಲ ಅದರಲ್ಲಿ ತೇರ್ಗಡೆಯಾಗಿ. ಎರಡು ವರ್ಷಗಳ ಕಾಲ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಆರನೇ ಬಾರಿಗೆ ಪರೀಕ್ಷೆ ಬರೆದು ಅಖಿಲ ಭಾರತ ಶ್ರೇಣಿ (AIR)ಯಲ್ಲಿ 167ನೇ ರ‍್ಯಾಂಕ್ ಪಡೆದುಕೊಂಡು IAS ಅಧಿಕಾರಿಯಾದರು. ಮಗಳು ಸಿವಿಲ್ ಅಧಿಕಾರಿಯಾಗಬೇಕು ಎಂದು ಕೀರ್ತನಾ ತಂದೆ ಅಂದುಕೊಂಡಿದ್ದರಂತೆ. ಮೈಸೂರು ಲ್ಯಾಂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೀರ್ತನಾ ತಂದೆ 2013ರಲ್ಲಿ ಕೊನೆಯುಸಿರೆಳೆದಿದ್ದಾರೆ.

Exit mobile version