ಬೆಂಗಳೂರು : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ (Pathaan Movie) ಬಿಡುಗಡೆಗೊಂಡಿದೆ. ಪಠಾಣ್ ಬೇಷರಮ್ ರಂಗ್ ಹಾಡು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇದು ಒಂದು ನಿರ್ದಿಷ್ಟ ವರ್ಗದ ನೆಟಿಜನ್‌ಗಳು ಚಿತ್ರವನ್ನು ಬಹಿಷ್ಕರಿಸುವಂತೆ ಮಾಡಿತು. ಮಧ್ಯಪ್ರದೇಶದ ಸಚಿವ ಡಾ.ನರೋತ್ತಮ್ ಮಿಶ್ರಾ ಅವರು ದೀಪಿಕಾ ಧರಿಸಿದ್ದ ಹಾಡಿನಲ್ಲಿ ಕೇಸರಿ ಬಿಕಿನಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಮಧ್ಯಪ್ರದೇಶದಲ್ಲಿ ಸಿನಿಮಾ ನಿಷೇಧಿಸುವುದಾಗಿ ಬೆದರಿಕೆ ಹಾಕಿದರು. ಇದಾದ ನಂತರ ಹಲವು ರಾಜಕಾರಣಿಗಳು ಇದೇ ರೀತಿ ಮಾತನಾಡಿದ್ದಾರೆ. ಇದೀಗ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದೆ. ದೀಪಿಕಾ ಪಡುಕೋಣೆ ಅವರ ಆರೆಂಜ್ ಬಿಕಿನಿ ಒಳಗೊಂಡ ಬೇಷರಮ್ ರಂಗ್ ಹಾಡಿನಲ್ಲಿ ಕೆಲವು ಸಣ್ಣ ಬದಲಾವಣೆಗಳೊಂದಿಗೆ ತೆರೆಗೆ ಅಪ್ಪಳಿಸಿದೆ.
ಬೇಷರಮ್ ರಂಗ್ ಹಾಡು ಡಿಸೆಂಬರ್ 12 ರಂದು ಬಿಡುಗಡೆಯಾಯಿತು. ಪಠಾಣ್‌ನ ಮೊದಲ ಹಾಡು ಬೇಷರಮ್ ರಂಗ್ ಬಿಡುಗಡೆಗೆ ಮುಂಚೆಯೇ ಹೆಚ್ಚು ಹೈಪ್ ಅನ್ನು ಹುಟ್ಟುಹಾಕಿತ್ತು. ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ಸಾಕಷ್ಟು ವಿವಾದ ಉಂಟಾದಾಗ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಕೆಲವು ಬದಲಾವಣೆಗಳನನು ಮಾಡಲು ಸೂಚಿಸಿತು. ಹೊಸ ಪರಿಷ್ಕೃತ ಆವೃತ್ತಿಯನ್ನು ಥಿಯೇಟ್ರಿಕಲ್ (Pathaan movie review) ಬಿಡುಗಡೆಗೆ ಮೊದಲು ಸಲ್ಲಿಸಲು ಆದೇಶ ನೀಡಿತು. ಆದರೆ ಇದೀಗ ಫೈನಲ್ ಕಟ್‌ನಲ್ಲಿ ದೀಪಿಕಾ ಪಡುಕೋಣೆಯ ಆರೆಂಜ್ ಬಿಕಿನಿ ದೃಶ್ಯ ತೆಗೆದಿಲ್ಲ. ನಿರ್ಮಾಪಕರು ವಿವಾದಗಳಿಗೆ ಮಣಿಯದೆ ದೃಶ್ಯವನ್ನು ಹಾಗೇಯೇ ಉಳಿಸಿಕೊಂಡಿದ್ದಾರೆ. ಬೇಷರಮ್ ರಂಗಕ್ಕೆ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ.
ಇದನ್ನೂ ಓದಿ: Pathaan Movie : ʼಪಠಾಣ್ʼ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಮಾಡಲ್ಲ ಎಂದ ಗುಜರಾತ್ ಬಜರಂಗದಳ, ವಿಶ್ವ ಹಿಂದೂ ಪರಿಷತ್
ಏನಿದು ವಿವಾದ?
ಪಠಾಣ್ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ ಎನ್ನುವ ವಿವಾದ ತಾರಕಕ್ಕೇರಿತ್ತು. ಇದು ಬೇಕು ಎಂತಲೇ ಮಾಡಿದ ಹುನ್ನಾರ ಎಂದು ಹಿಂದುಪರ ಸಂಘಟನೆಗಳು ಆರೋಪಿಸಿದ್ದವು. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಮೆಂಟ್ ಕೂಡ ಮಾಡಿದ್ದಾರೆ.
ಪಠಾಣ್ ಸಿನಿಮಾ ಮೊದಲ ಶೋ ಬೆಳಗ್ಗೆ (Pathaan review) 6 ಗಂಟೆಗೆ ಶುರುವಾಗಿದೆ. ಶಾರುಖ್, ದೀಪಿಕಾ ಪಡುಕೋಣೆ ಮತ್ತು ಜಾನ್ ಹೊರತುಪಡಿಸಿ, ಅಶುತೋಷ್ ರಾಣಾ ಮತ್ತು ಡಿಂಪಲ್ ಕಪಾಡಿಯಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.