Site icon Vistara News

Actor Dwarakish: ದ್ವಾರಕೀಶ್ ನಿವಾಸದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಹೋಮ

Actor Dwarakish

ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ (Actor Dwarakish) ಆಗಸ್ಟ್‌ 19ರಂದು 80ನೇ ವಸಂತಕ್ಕೆ ಕಾಲಿಟ್ಟರು. 80ನೇ ವರ್ಷದ ಜನುಮದಿನದ ಪ್ರಯುಕ್ತ ಸಹಸ್ರ ಚಂದ್ರ ದರ್ಶನ ಶಾಂತಿ ಹೋಮ ಆಗಸ್ಟ್‌ 23ರಂದು ದ್ವಾರಕೀಶ್ ನಿವಾಸದಲ್ಲಿ ನಡೆಯಿತು. 81 ವರ್ಷದ ಬಳಿಕ ಮಾಡುವ ಹೋಮ (ahashra Chandra Darshana Shanthi Homa) ಇದಾಗಿದ್ದು, ದ್ವಾರಕೀಶ್ ನಿವಾಸದಲ್ಲಿ ಈ ಸಹಸ್ರ ಹೋಮ ಆಯೋಜಿಸಲಾಗಿದೆ.

ಹಿರಿಯ ನಟ ರಮೇಶ್ ಭಟ್, ನಟ ಶ್ರಿನಾಥ್ , ಸಂಗೀತ ನಿರ್ದೇಶಕರಾದ ವಿ ಮನೋಹರ್, ಹಿರಿಯ ನಿರ್ದೇಶಕರಾದ ಭಾರ್ಗವ ಹಾಗೂ ಇತರ ಗಣ್ಯ ವ್ಯಕ್ತಿಗಳು ಹೋಮದಲ್ಲಿ ಭಾಗಿಯಾಗಿದ್ದರು. ದ್ವಾರಕೀಶ್ ಕುಟುಂಬ ಸಮ್ಮುಖದಲ್ಲಿ ಹೋಮ ನೆರವೇರಿತು.

ದ್ವಾರಕೀಶ್‌ ಅವರ ಜನುಮ ದಿನದಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ (ba ma harish) ಹಾಗೂ ತಂಡದವರು ನಟನನ್ನು ಗೌರವಿಸಿ ಕೇಕ್ ಕಟ್ (Dwarakish Birthday) ಮಾಡಿ ಸಂಭ್ರಮಾಚರಣೆ ಮಾಡಿದ್ದರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ (Bungle Shama Rao Dwarakanath) ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು. ‘ದ್ವಾರಕೀಶ್​ ಚಿತ್ರ’ ನಿರ್ಮಾಣ (Dwarakish Chitra) ಸಂಸ್ಥೆ ಮೂಲಕ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 

ನಟ ದ್ವಾರಕೀಶ್‌ 2019ರಲ್ಲಿ ತೆರೆಕಂಡ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಅಭಿನಯದ ‘ಆಯುಷ್ಮಾನ್‌ ಭವ’ ಚಿತ್ರವನ್ನು ಕೊನೆಯದಾಗಿ ನಿರ್ಮಾಣ ಮಾಡಿದ್ದರು. ಇತ್ತೀಚಿಗೆ ಚಿತ್ರರಂಗದಿ೦ದ ದೂರ ಉಳಿದಿದ್ದಾರೆ.

ಇದನ್ನೂ ಓದಿ: Actor Dwarakish: ಹಿರಿಯ ನಟ ದ್ವಾರಕೀಶ್‌ ಸಾವಿನ ಬಗ್ಗೆ ಅಪಪ್ರಚಾರ: ಸ್ಪಷ್ಟನೆ ಕೊಟ್ಟ ನಟ

ಮಮತೆಯ ಬಂಧನ(Mamatheya Bandhana), ಮೇಯರ್ ಮುತ್ತಣ್ಣ (Mayor Muthanna), ಭಾಗ್ಯವಂತರು, ಕಿಟ್ಟು ಪುಟ್ಟು, ಕುಳ್ಳ ಕುಳ್ಳಿ (Kulla Kulli), ಗುರು ಶಿಷ್ಯರು, ಪ್ರಚಂಡ ಕುಳ್ಳ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ & ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿದರು. ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. 1985ರಲ್ಲಿ ಸಿನಿಮಾ ನಿರ್ದೇಶನಕ್ಕಿಳಿದ ದ್ವಾರಕೀಶ್, ಮೊದಲ ಬಾರಿ ʼನೀ ಬರೆದ ಕಾದಂಬರಿʼ ಎಂಬ ಚಿತ್ರವನ್ನು ನಿರ್ದೇಶಿಸಿದರು.

ಈ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತು. ʼರಾಯರು ಬಂದರು ಮಾವನ ಮನೆಗೆʼ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ‘ದ್ವಾರಕೀಶ್ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಈಗಲೂ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ.

Exit mobile version