Site icon Vistara News

Sai Pallavi | ರಕ್ಷಿತ್‌ ಶೆಟ್ಟಿ ಎದುರು ಬೋ… ಮಕ್ಳಾ ಎಂದ ಸಾಯಿ ಪಲ್ಲವಿ!

Sai Pallavi

ಬೆಂಗಳೂರು: ರಾಜ್ಯಾದ್ಯಂತ ಗಾರ್ಗಿ ಸಿನಿಮಾ ಶುಕ್ರವಾರ (ಜು.15) ಬಿಡುಗಡೆಗೊಂಡಿದೆ. ನಟಿ ಸಾಯಿ ಪಲ್ಲವಿ (Sai Pallavi) ಕನ್ನಡದಲ್ಲಿ ಡಬ್‌ ಮಾಡಿರುವುದಕ್ಕಾಗಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಕುರಿತು ಟ್ವೀಟ್‌ ಮೂಲಕ ಅಭಿಮಾನಿಗಳು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಗಾರ್ಗಿ ಸಿನಿಮಾವನ್ನು ವಿತರಣೆ ಮಾಡಿದ್ದಾರೆ. ಸಂದರ್ಶನ ಒಂದರಲ್ಲಿ ಸಾಯಿ ಪಲ್ಲವಿ ಅವರು ತಮಾಷೆಗೆ ರಕ್ಷಿತ್‌ ಶೆಟ್ಟಿ ಅವರ ಕಾಲೆಳೆದಿರುವುದು ಗಮನ ಸೆಳೆದಿದೆ.

ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಶೂಟಿಂಗ್‌ ನಡೆಯುವಾಗ ರಕ್ಷಿತ್‌ ಶೆಟ್ಟಿ ಅವರು ಬಳಸುವ ಫೇಮಸ್‌ ಡೈಲಾಗ್‌ ಒಂದು ಸಖತ್‌ ವೈರಲ್‌ ಆಗಿದೆ. ʻಎಂಥದಾ ಬೋ… ಮಕ್ಳಾ. ಶೂಟ್‌ ಮಾಡ್ಬೇಕಾ?ʼ ಎನ್ನುವ ರಕ್ಷಿತ್‌ ಶೆಟ್ಟಿ ಮಾತನ್ನು ನಟಿ ಸಾಯಿ ಪಲ್ಲವಿ ತಮಾಷೆಯಾಗಿ ತಿರುಗಿಸಿ ಹೇಳಿದ್ದಾರೆ. ಸಂದರ್ಶನದಲ್ಲಿ ರಕ್ಷಿತ್‌ ಶೆಟ್ಟಿ, ಸಾಯಿ ಪಲ್ಲವಿ ಹಾಗೂ ಗಾರ್ಗಿ ನಿರ್ದೇಶಕ ಗೌತಮ್‌ ಹಾಜರಿದ್ದರು. ಈ ಡೈಲಾಗ್‌ ಕೇಳಿ ಇವರೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ | 777 Charlie | ರಕ್ಷಿತ್‌ ಶೆಟ್ಟಿ ಸಿನಿಮಾ ವಿತರಣೆ ಮಾಡಲಿದೆ UFO: ಮೇ 16ಕ್ಕೆ ಟ್ರೈಲರ್‌ ಬಿಡುಗಡೆ

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

Exit mobile version