ಬೆಂಗಳೂರು: ಬಹು ನಿರೀಕ್ಷಿತ ಕನ್ನಡ ಕೌಟುಂಬಿಕ ಚಿತ್ರ ‘ಸಕುಟುಂಬ ಸಮೇತ’ (Sakutumba Sametha) ಎಕ್ಸ್‌ಕ್ಲೂಸಿವ್ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಅನ್ನು ವೂಟ್ ಸೆಲೆಕ್ಟ್ ಸೆ.2 ಸೋಮವಾರ ಪ್ರಸಾರವಾಗುತ್ತಿದೆ.
ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರೆ, ರಾಹುಲ್ ಪಿ.ಕೆ. ಕಥೆ-ಸಂಭಾಷಣೆ-ನಿರ್ದೇಶನವನ್ನು ಮಾಡಿದ್ದಾರೆ. ‘ಸಕುಟುಂಬ ಸಮೇತ’ ಹಾಸ್ಯದ ಜತೆಗೆ ಸಂಬಂಧಗಳ ಕುರಿತ ಕಥಾಹಂದರವನ್ನು ಹೊಂದಿದೆ. ಪ್ರತಿ ಮನೆಯಲ್ಲೂ ಇರಬಹುದಾದ ಪಾತ್ರಗಳು, ಸಂಭವಿಸಬಹುದಾದ ಸನ್ನಿವೇಶಗಳ ಮೂಲಕ ಕೌಟುಂಬಿಕ ಟಚ್ ಕೊಡಲಾಗಿದೆ.
ಇದನ್ನೂ ಓದಿ | ರಕ್ಷಿತ್ ಶೆಟ್ಟಿ ನೇತೃತ್ವದ ಪರಂವಃ ಸ್ಟುಡಿಯೋಸ್‌ನಿಂದ ಹೊಸ ಚಿತ್ರ; ಪಂಚತಂತ್ರದ ವಿಹಾನ್‌ಗೆ ಮತ್ತೆ ಅವಕಾಶ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ, “ಸಕುಟುಂಬ ಸಮೇತ ಸರಳವಾದ ಚಿತ್ರವಾಗಿದ್ದು, ಕೊನೆಯವರೆಗೂ ನಿಮ್ಮನ್ನು ನಗಿಸುತ್ತದೆ. ಲಾಕ್‌ಡೌನ್ ಸಮಯದಲ್ಲಿ ಈ ಪರಿಕಲ್ಪನೆ ಹುಟ್ಟಿಕೊಂಡಿತು. ಪ್ರತಿ ಪಾತ್ರವೂ ನೈಜವಾಗಿದೆ. ಅಂತಹ ಪಾತ್ರಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆʼʼಎಂದರು.
ನಿರ್ದೇಶಕ ರಾಹುಲ್ ಪಿ.ಕೆ. ಮಾತನಾಡಿ,”ಸಕುಟುಂಬ ಸಮೇತ ಮದುವೆ ಮತ್ತು ಕುಟುಂಬದ ಕುರಿತು ನನ್ನ ವೈಯಕ್ತಿಕ ದೃಷ್ಟಿಕೋನವಾಗಿದೆ. ಸಂಬಂಧಗಳು ಹೇಗೆ ನಿರಂತರ ಬೆಳೆಯುತ್ತಿರುತ್ತವೆ ಮತ್ತು ಬದಲಾಗುತ್ತಿರುತ್ತವೆ ಎಂಬದನ್ನು ಈ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆʼʼ ಎಂದು ಹೇಳಿದರು.
“ಸಕುಟುಂಬ ಸಮೇತ”ದಲ್ಲಿ ಭರತ್ ಜಿ.ಬಿ. ಅಚ್ಯುತ್ ಕುಮಾರ್, ಪುಷ್ಪಾ ಬೆಳವಾಡಿ, ಕೃಷ್ಣ ಹೆಬ್ಬಾಳೆ ಮತ್ತು ಸಿರಿ ರವಿಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇದನ್ನೂ ಓದಿ | Movie Review | ಭಾವಗಳ ತೀವ್ರತೆ ನೋಡಲು ‘ಸಕುಟುಂಬ ಸಮೇತ’ ರಾಗಿ ಹೋಗಬಹುದು