ಬೆಂಗಳೂರು: ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಾಯಕರಾಗಿ ನಟಿಸಿದ ಸಲಾರ್ ಸಿನಿಮಾ (Salaar Box Office) ವಿಶ್ವಾದ್ಯಂತ ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊದಲ ದಿನವೇ ಕಲೆಕ್ಷನ್‌ನಲ್ಲಿ ರಣಬೀರ್ ಕಪೂರ್ ಅವರ ʻಅನಿಮಲ್ʼ ಮತ್ತು ಶಾರುಖ್ ಖಾನ್ ಅವರ ʻಪಠಾಣ್ʼ ಮತ್ತು ʻಜವಾನ್ʼ ಸಿನಿಮಾಗಳ ದಾಖಲೆಗಳನ್ನು ಮುರಿದಿತ್ತು. ಆದರೆ ಎರಡನೇ ದಿನ ಸಿನಿಮಾ ಗಳಿಕೆಯಲ್ಲಿ ಭಾರಿ ಕುಸಿತ ಕಂಡಿದೆ. ವರದಿಯ ಪ್ರಕಾರ ಸಲಾರ್ ಸಿನಿಮಾ ಎರಡನೇ ದಿನ ಭಾರತದಲ್ಲಿ (ಡಿ. 23)ರಂದು ಕೇವಲ 55 ಕೋಟಿ ರೂ. ಗಳಿಕೆ ಕಂಡಿದೆ.
ವರದಿಯ ಪ್ರಕಾರ, ಸಲಾರ್ ಬಿಡುಗಡೆಯಾದ ಮೊದಲ ಶನಿವಾರದಂದು (ಡಿ.23) ಭಾರತದಲ್ಲಿ 55 ಕೋಟಿ ರೂಪಾಯಿ ಗಳಿದೆ. ಇದೀಗ ಎರಡೂ ದಿನಗಳ ಒಟ್ಟು ಸಂಗ್ರಹ 145.70 ರೂ. ಆಗಿದೆ. ಶನಿವಾರದಂದು (ಡಿ.23) ಒಟ್ಟಾರೆ ಶೇಕಡಾ 75.64ರಷ್ಟು ತೆಲುಗು ಆಕ್ಯುಪೆನ್ಸೀ ಮತ್ತು ಶೇಕಡಾ 66.34 ಕನ್ನಡ ಆಕ್ಯುಪೆನ್ಸೀ ಹೊಂದಿತ್ತು. ಮಲಯಾಳಂನಲ್ಲಿ ಶೇಕಡಾ 41.70ರಷ್ಟಿದೆ ಎನ್ನಲಾಗಿದೆ.
ಮೊದಲ ದಿನ ದಾಖಲೆ!
ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ ಎಂದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿತ್ತು. ಹೊಂಬಾಳೆ ಪ್ರಕಾರ ಮೊದಲ ದಿನ ವಿಧ್ವಾದ್ಯಂತ 178.7 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಗಮನಾರ್ಹ ದಾಖಲೆಯನ್ನು ನಿರ್ಮಿಸಿತ್ತು. ಮಾಸ್ಟರ್ ಪೀಸ್, ರಾಜಕುಮಾರ, ಯುವರತ್ನ, ಕೆಜಿಎಫ್. ಕಾಂತಾರಾ, ರಾಘವೇಂದ್ರ ಸ್ಟೋರ್ಸ್ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿರುವ ಕರ್ನಾಟಕದ ಸಂಸ್ಥೆ ಹೊಂಬಾಳೆ ಈ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಹೇಳಿಕೊಂಡಿತ್ತು.
ಇದನ್ನೂ ಓದಿ: Salaar Box Office: ಮೊದಲ ದಿನವೇ 178 ಕೋಟಿ ರೂ. ಗಳಿಸಿ ದಾಖಲೆ ಬರೆದ ಸಲಾರ್!
Salaar box office collection day 2
— Review Gru (@reviewgru5622) December 24, 2023
₹148 crore in India
.
.
.
.#SalaarRulingBoxOffice #SalaarBoxOffice #SalaarBlockbuster #Salaar #Prabhas𓃵 #DunkiBoxOffice #DunkiBlockbuster #vivekbindra #DunkiWinningHearts pic.twitter.com/Q4EA7VGnjA
ಇದನ್ನೂ ಓದಿ: Salaar Box Office: ಮೊದಲ ದಿನವೇ 178 ಕೋಟಿ ರೂ. ಗಳಿಸಿ ದಾಖಲೆ ಬರೆದ ಸಲಾರ್!
ಸಲಾರ್ ಎರಡನೇ ಭಾಗ ಬರಲಿದೆಯಾ ಎನ್ನುವ ಚರ್ಚೆಗಳು ಜೋರಾಗಿವೆ. ಸಿನಿಮಾ ಒಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸಾಧ್ಯವಾದಷ್ಟು ಬೇಗ ಸೀಕ್ವೆಲ್ ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ ಎನ್ನಲಾಗುತ್ತಿದೆ.ಸಲಾರ್’ ಒಟಿಟಿ ಸ್ಟ್ರೀಮಿಂಗ್ ಬಗ್ಗೆ ಹೇಳುವುದಾದರೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ ಎನ್ನಲಾಗಿದೆ. ಹೊಂಬಾಳೆ ಸಂಸ್ಥೆ ತನ್ನ ಎಲ್ಲಾ ಸಿನಿಮಾಗಳನ್ನು ಅಮೇಜಾನ್ ಪ್ರೈಂ ಕೊಡುತ್ತಾ ಬರುತ್ತಿತ್ತು. ಫೆಬ್ರವರಿಯಲ್ಲಿ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ʼಡಂಕಿʼ ಮತ್ತು ʼಸಲಾರ್ʼ ಈ ವರ್ಷ ಬಹು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳು. ಟ್ರೈಲರ್, ಹಾಡುಗಳಿಂದಲೇ ಈ ಎರಡೂ ಚಿತ್ರಗಳು ನಿರೀಕ್ಷೆ ಮೂಡಿಸಿವೆ.
ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್ ನೀಲ್ ʼಸಲಾರ್ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್ ವೃತ್ತಿ ಜೀವನಕ್ಕೆ ಇದು ತಿರುವು ನೀಡಿದ ಸಿನಿಮಾವಾಗಿ ಹೊರಹೊಮ್ಮಿದೆ. . ಪೃಥ್ವಿರಾಜ್, ಶ್ರುತಿ ಹಾಸನ್ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.