Site icon Vistara News

Salaar Cast Fees: ‘ಸಲಾರ್’ ಸಿನಿಮಾ ಸ್ಟಾರ್‌ಗಳು ಪಡೆದ ಸಂಭಾವನೆ ಇಷ್ಟೊಂದಾ!

Salaar of Prabhas

ಬೆಂಗಳೂರು: ಪ್ರಶಾಂತ್‌ ನೀಲ್‌-ಪ್ರಭಾಸ್‌ ಕಾಂಬಿನೇಷನ್‌ನ ‘ಸಲಾರ್‌’ (Salaar Cast Fees) ನಾಳೆ (ಡಿ.22) ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ʼಸಲಾರ್‌ʼ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಡಿಸೆಂಬರ್ 15ರಂದು ಶುರುವಾಗಿತ್ತು. ಪ್ರಭಾಸ್‌ ಚಿತ್ರ ತನ್ನ ಆರಂಭಿಕ ದಿನದಂದು 5.99 ಕೋಟಿ ರೂ. ಗಳಿಸಿದೆ. ಇದೆಲ್ಲರ ಜತೆಗೆ ಭಾರಿ ಚರ್ಚೆಯಲ್ಲಿರುವುದು ಕಲಾವಿದರ ಸಂಭಾವನೆ. ಚಿತ್ರದ ಬಜೆಟ್ ಬರೋಬ್ಬರಿ 400 ಕೋಟಿ ರೂ. ಎಂಬ ವರದಿಯಿದೆ. ಈ ಸಿನಿಮಾಗೆ ಪಾತ್ರವರ್ಗ ಎಷ್ಟು ಸಂಭಾವನೆ ಪಡೆದಿದೆ ಎಂದು ತಿಳಿಯಲು ಮುಂದೆ ಓದಿ!

ಸಲಾರ್‌ನಲ್ಲಿ ಪ್ರಭಾಸ್, ಪ್ರಶಾಂತ್ ನೀಲ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಟರಲ್ಲಿ ಪ್ರಭಾಸ್ ಕೂಡ ಒಬ್ಬರು. ಸಲಾರ್‌ನಲ್ಲಿ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿ ಎಂದು ವರದಿಯಾಗಿದೆ. ಸಲಾರ್‌ಗಾಗಿ ಪ್ರಭಾಸ್‌ ಅವರು 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಚಿತ್ರದ ಲಾಭದಲ್ಲಿ ಶೇ.10ರಷ್ಟು ಲಾಭ ಕೂಡ ಪ್ರಭಾಸ್‌ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಶಾಂತ್ ನೀಲ್ ಸದ್ಯ ದೇಶದಾದ್ಯಂತ ಬೇಡಿಕೆಯಿರುವ ಚಲನಚಿತ್ರ ನಿರ್ದೇಶಕ. 2018ರಲ್ಲಿ ತೆರೆ ಕಂಡ ಕೆಜಿಎಫ್‌ ಸಿನಿಮಾ ಮೂಲಕ ಖ್ಯಾತಿ ಗಳಿಸಿದರು. ವರದಿಗಳ ಪ್ರಕಾರ, ಪ್ರಶಾಂತ್ ನೀಲ್ ʼಸಲಾರ್ʼ ಸಿನಿಮಾದ ಚಿತ್ರಕಥೆ ಮತ್ತು ನಿರ್ದೇಶನಕ್ಕಾಗಿ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Salaar Movie: ಎಷ್ಟೇ ಪ್ಲಾಪ್‌ ಆದರೂ ಒಂದು ಹಿಟ್‌ ಸಾಕು; ಶಾರುಖ್‌ರಂತೆ ಪ್ರಭಾಸ್‌ ಎಂದ ನೀಲ್‌!

ಪ್ರಭಾಸ್ ಅವರ ಪಾತ್ರದಷ್ಟೇ ಪ್ರಾಮುಖ್ಯತೆ ಹೊಂದಿರುವ ಪೃಥ್ವಿರಾಜ್ ಸುಕುಮಾರನ್ ಅವರು 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ವರದಿಗಳ ಪ್ರಕಾರ, ನಟಿ 8 ಕೋಟಿ ರೂ. ಪಡೆದರೆ, ಜಗಪತಿ ಬಾಬು ಅವರು 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್‌ ವೃತ್ತಿ ಜೀವನಕ್ಕೆ ಇದು ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಪೃಥ್ವಿರಾಜ್‌, ಶ್ರುತಿ ಹಾಸನ್‌ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

Exit mobile version