ಬೆಂಗಳೂರು: ಪ್ರಶಾಂತ್ ನೀಲ್-ಪ್ರಭಾಸ್ ಕಾಂಬಿನೇಶನ್‌ನ ‘ಸಲಾರ್’ (Salaar Cast Fees) ನಾಳೆ (ಡಿ.22) ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಕರ್ನಾಟಕದಲ್ಲಿ ಸಲಾರ್ ಕ್ರೇಜ್ ಈಗಾಗಲೇ ಶುರುವಾಗಿದೆ. ಥಿಯೇಟರ್ ಅಂಗಳದಲ್ಲಿ ಸಲಾರ್ ಕಟೌಟ್ಸ್ ರಾರಾಜಿಸುತ್ತಿವೆ. ಪ್ಯಾನ್ (Salaar Movie) ಇಂಡಿಯಾ ಭಾಷೆಯಲ್ಲಿ ಸಲಾರ್ ರಿಲೀಸ್ ಆಗುತ್ತಿವೆ. ಸಲಾರ್ ಕನ್ನಡ ವರ್ಷನ್ ಸಂತೋಷ್ ಥಿಯೇಟರ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ.
ಸಲಾರ್ ಸ್ವಾಗತಕ್ಕೆ ಸಿದ್ಧತೆ ಜೋರಾಗಿದ್ದು 54 ಅಡಿಯ ಕಟೌಟ್ ಹಾಕಲಾಗಿದೆ. ಕರ್ನಾಟಕದಲ್ಲಿ 19 ಕಟೌಟ್‌ಗಳು ರಾಜ್ಯಾದಂತ ಥಿಯೇಟರ್ ಮುಂದೇ ಪ್ರೇಕ್ಷಕರನ್ನ ಸೆಳೆಯಲಿವೆ. ಕೆಜಿಎಫ್ 2 ಗಿಂತಲೂ ಅತ್ಯಧಿಕ ಸ್ಕ್ರೀನ್‌ಗಳಲ್ಲಿ ಸಲಾರ್ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ 2500 ಹೆಚ್ಚು ಶೋಗಳಲ್ಲಿ ಸಲಾರ್ ತೆರೆಗೆ ಬರುತ್ತಿದೆ. ವರ್ಲ್ಡ್ ವೈಡ್ 15 ಸಾವಿರ ಶೋಗಳು ಪ್ರದರ್ಶನ ಕಾಣಲಿವೆ. ನಗರದ ಸಂಧ್ಯಾ ಥಿಯೇಟರ್‌ನಲ್ಲಿ ಸಲಾರ್ ತೆಲುಗು ವರ್ಷನ್ ರಿಲೀಸ್ ಆಗುತ್ತಿದೆ. ನಾಳೆ ಬೆಳಗ್ಗೆ 5 ಗಂಟೆಯಿದಲೇ ನಗರದಲ್ಲಿ ಸಲಾರ್ ಶೋಗಳು ಶುರುವಾಗುತ್ತಿವೆ.
ಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Salaar Movie: ಎಷ್ಟೇ ಪ್ಲಾಪ್ ಆದರೂ ಒಂದು ಹಿಟ್ ಸಾಕು; ಶಾರುಖ್‌ರಂತೆ ಪ್ರಭಾಸ್ ಎಂದ ನೀಲ್!
2014ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮುರಳಿ-ಹರಿಪ್ರಿಯಾ ಅಭಿನಯದ ʼಉಗ್ರಂʼ ಚಿತ್ರ ನಿರ್ದೇಶನದ ಮೂಲಕ ಪ್ರಶಾಂತ್ ನೀಲ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತ್ತು. ಬಳಿಕ ಅವರು ರಾಕಿಂಗ್ ಸ್ಟಾರ್ ಯಶ್ ಜತೆ ʼಕೆಜಿಎಫ್ʼ ಚಿತ್ರ ಮಾಡುವ ಮೂಲಕ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಿದ್ದರು. ʼಉಗ್ರಂʼ ಚಿತ್ರ ಕೂಡ ಸ್ನೇಹಿತರಿಬ್ಬರ ಕಥೆಯನ್ನೊಳಗೊಂಡಿತ್ತು. ಇತ್ತ ʼಕೆಜಿಎಫ್ʼನಲ್ಲಿ ತಾಯಿ-ಮಗನ ಸೆಂಟಿಮೆಂಟ್ ಗಮನ ಸೆಳೆದಿತ್ತು. ʼಸಲಾರ್ ಪಾರ್ಟ್ 1ʼ ಡಿಸೆಂಬರ್ 22ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ದಾಖಲೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.