Site icon Vistara News

Salaar Movie: ಕಿರುತೆರೆಯಲ್ಲಿ ‘ಸಲಾರ್’ಗೆ ಕಡಿಮೆ ಟಿಆರ್‌ಪಿ: ಪ್ಲಾಪ್‌ ಆಗಲು ಕಾರಣವೇನು?

Salaar Movie Fails To Get Expected TRP Star Suvarna

ಬೆಂಗಳೂರು: ವಿಶ್ವ-ವಿಖ್ಯಾತಿ ಪಡೆದ ʻಕಾಂತಾರʼ, ʻಹೊಯ್ಸಳʼ, ʻಜೇಮ್ಸ್ʼ ನಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದ ಸುವರ್ಣ ವಾಹಿನಿ (Star Suvarna)ಯಲ್ಲಿ 2023ರ ಬ್ಲಾಕ್ ಬಸ್ಟರ್ ಹಿಟ್ “ಸಲಾರ್” ಸಿನಿಮಾ (Salaar Movie) ಪ್ರಸಾರ ಕಂಡಿತ್ತು. ಆದರೆ ಸಿನಿಮಾ ಟಿವಿಯಲ್ಲಿ ನೀರಸ ಪ್ರತಿಕ್ರಿಯೆ ನೀಡಿದೆ. ಸಿನಿಮಾ ಟಿವಿಯಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆಯಿತ್ತು. ಕೇವಲ 6.5 ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಈ ಮೂಲಕ ಕಿರುತೆರೆಯಲ್ಲಿ ದೊಡ್ಡ ಫ್ಲಾಪ್ ಆಗಿದೆ ಸಲಾರ್‌.

ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂ. ಕಮಾಯಿ ಮಾಡಿತ್ತು.  ಇದಾದ ಬಳಿಕ ಒಟಿಟಿಗೂ ಲಗ್ಗೆ ಇಟ್ಟಿತ್ತು. ಇದಾದ ಮೇಲೆ ಈ ಸಿನಿಮಾವು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗಿದೆ. ಆದರೆ ಅಷ್ಟಾಗಿ ಕಿರುತೆರೆಯಲ್ಲಿ ರೆಸ್ಪಾನ್ಸ್‌ ಸಿಕ್ಕಿಲ್ಲ. ಥಿಯೇಟರ್‌ನಲ್ಲಿ ಬಹುತೇಕ ಮಂದಿ ‘ಸಲಾರ್’ ಸಿನಿಮಾ ವೀಕ್ಷಣೆ ಮಾಡಿದ್ದರು. ಇನ್ನೊಂದು ಕಡೆ ಒಟಿಟಿಯಲ್ಲೂ ‘ಸಲಾರ್’ ರಿಲೀಸ್ ಆದ ಬಹಳ ದಿನಗಳ ಬಳಿಕ ಟಿವಿಯಲ್ಲಿ ರಿಲೀಸ್ ಆಗಿತ್ತು. ಈ ಕಾರಣಕ್ಕೆ ಟಿವಿಯಲ್ಲಿ ಜನ ನೋಡಲು ಮನಸ್ಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಐಪಿಎಲ್ ಪಂದ್ಯಗಳು ನಡೆಯುತ್ತಿರುವುದರಿಂದ ಕ್ರಿಕೆಟ್ ಪಂದ್ಯಗಳನ್ನೇ ಹೆಚ್ಚು ನೋಡುತ್ತಿದ್ದಾರೆ. ಇನ್ನೊಂದು ಕಡೆ ಆಂಧ್ರದಲ್ಲಿ ಚುನಾವಣೆಯಿದೆ. ಈ ಕಾರಣಕ್ಕೆ ಜನರ ಗಮನ ಬೇರೆ ಕಡೆಗೆ ಇದೆ ಎಂದೂ ವರದಿಯಾಗಿದೆ. ಆದರೆ ಮಹೇಶ್‌ ಬಾಬು ಅವರ ʻಗುಂಟೂರು ಖಾರಂʼ ಹಾಗೂ ನಾಗಾರ್ಜು ನಟನೆಯ ‘ನಾ ಸಾಮಿ ರಂಗ’ ಸಿನಿಮಾಗಳಿಗೆ ಥಿಯೇಟರ್‌ಗಳಲ್ಲಿ ಅಷ್ಟಾಗಿ ರೆಸ್ಲಾನ್ಸ್‌ ಇಲ್ಲವಿದ್ದರೂ ಕಿರುತೆರೆಯಲ್ಲಿ ಒಳ್ಳೆಯ ಟಿಆರ್‌ಪಿ ಕಂಡಿತ್ತು.

ಇದನ್ನೂ ಓದಿ: Salaar Movie: ಕಿರುತೆರೆಗೆ ಬಂದೇ ಬಿಡ್ತು ಬ್ಲಾಕ್ ಬಸ್ಟರ್ ಸಿನಿಮಾ ‘ಸಲಾರ್’!

ʻಸಲಾರ್‌ʼವನ್ನು ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು.

ಸಲಾರ್‌ʼ ಒಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್‌ ಬರೋಬ್ಬರಿ 160 ಕೋಟಿ ರೂ.ಗೆ ಪಡೆದುಕೊಂಡಿತ್ತು. ಈ ಚಿತ್ರದಲ್ಲಿ ಮಾಲಿವುಡ್‌ ಸೂಪರ್‌ ಸ್ಟಾರ್‌, ಬಹುಭಾಷಾ ನಟ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ರವಿ ಬಸ್ರೂರು ಸಂಗೀತ ನೀಡಿದ್ದಾರೆ. ʼಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಬಹುದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್‌ ʼಸಲಾರ್‌ʼ ಮೂಲಕ ಇನ್ನೊಂದು ಗೆಲುವು ದಾಖಲಿಸಿತ್ತು. ‘ಉಗ್ರಂ’ ಕಥೆಯನ್ನೇ ಸಾಕಷ್ಟು ಬದಲಾವಣೆಯೊಂದಿಗೆ ಬಹಳ ದೊಡ್ಡಮಟ್ಟದಲ್ಲಿ ನೀಲ್ ಕಟ್ಟಿಕೊಟ್ಟಿದ್ದರು ಆದರೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ: Salaar Movie: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಸಲಾರ್‌ʼ; 625 ಕೋಟಿ ಗಳಿಕೆ

ಎರಡನೇ ಪಾರ್ಟ್‌ ಯಾವಾಗ?

ʼಸಲಾರ್‌ʼ ಎರಡು ಭಾಗಗಳಲ್ಲಿ ತಯಾರಾಗಿದೆ. ನೋಡುಗರಲ್ಲಿ ಕುತೂಹಲದ ಬೀಜ ಬಿತ್ತಿ ಮೊದಲ ಪಾರ್ಟ್‌ ಕೊನೆಗೊಂದಿದೆ. ಹೀಗಾಗಿ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಎರಡನೇ ಭಾಗ ಯಾವಾಗ ತೆರೆಗೆ ಬರಲಿದೆ ಎನ್ನುವ ಬಗ್ಗೆ ಚಿತ್ರತಂಡ ಇದುವರೆಗೆ ಘೋಷಿಸಿಲ್ಲ.

Exit mobile version