ಬೆಂಗಳೂರು: ಸಲಾರ್ ಸಿನಿಮಾ (Salaar Movie) ಬಿಡುಗಡೆಯಾದ ಮೊದಲ ದಿನವೇ ಅಬ್ಬರಿಸುತ್ತಿದೆ. ಇದೀಗ ಸಲಾರ್ ಎರಡನೇ ಭಾಗ ಬರಲಿದೆಯಾ ಎನ್ನುವ ಚರ್ಚೆಗಳು ಜೋರಾಗಿವೆ. ಮೊದಲ ದಿನವೇ ಸಿನಿಮಾ 100 ಕೋಟಿ ರೂ. ಗಡಿ ದಾಟುವ ಅಂದಾಜಿದೆ. ಸಿನಿಮಾ ಒಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸಾಧ್ಯವಾದಷ್ಟು ಬೇಗ ಸೀಕ್ವೆಲ್ ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ ಎನ್ನಲಾಗುತ್ತಿದೆ.
‘ಸಲಾರ್’ ಒಟಿಟಿ ಸ್ಟ್ರೀಮಿಂಗ್ ಬಗ್ಗೆ ಹೇಳುವುದಾದರೆ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರಲಿದೆ ಎನ್ನಲಾಗಿದೆ. ಹೊಂಬಾಳೆ ಸಂಸ್ಥೆ ತನ್ನ ಎಲ್ಲಾ ಸಿನಿಮಾಗಳನ್ನು ಅಮೇಜಾನ್ ಪ್ರೈಂ ಕೊಡುತ್ತಾ ಬರುತ್ತಿತ್ತು. ಫೆಬ್ರವರಿಯಲ್ಲಿ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. . ‘ಉಗ್ರಂ’ ಕಥೆಯನ್ನೇ ಸಾಕಷ್ಟು ಬದಲಾವಣೆಯೊಂದಿಗೆ ಬಹಳ ದೊಡ್ಡಮಟ್ಟದಲ್ಲಿ ನೀಲ್ ಕಟ್ಟಿಕೊಟ್ಟಿದ್ದಾರೆ.
‘ಸಲಾರ್’ ಚಿತ್ರದ ಟೈಟಲ್ ಕಾರ್ಡ್ ಆರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್‌ಗೆ ಚಿತ್ರತಂಡ ಧನ್ಯವಾದ ತಿಳಿಸಿದೆ. ಇದು ಸಾಕಷ್ಟು ಚರ್ಚೆ ಹುಟ್ಟಾಕ್ಕಿದೆ. ಹೊಂಬಾಳೆ ಸಂಸ್ಥೆ ‘ಸಲಾರ್’ ಚಿತ್ರದಲ್ಲಿ ಯಾಕೆ ನಟ ಯಶ್‌ಗೆ ಥ್ಯಾಂಕ್ಸ್ ಹೇಳಿದ್ರು ಎನ್ನುವ ಕುತೂಹಲ ಕೆಲವರಲ್ಲಿದೆ. ಮುಂದಿನ ಭಾಗದಲ್ಲಿ ಯಶ್ ಇರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿವೆ.
ಇದನ್ನೂ ಓದಿ: Salaar Movie: ʻಸಲಾರ್ʼ ಸಿನಿಮಾದಲ್ಲಿ ಕನ್ನಡಿಗರದ್ದೇ ಹವಾ!
#SalaarCeaseFire gets saved because of the second half as it gets more interesting and violent. #PrashantNeel sets the tone right for the second part
— Nakul Arora (@Nakul1616) December 22, 2023
The action gets better
Prabhas is presented just the way his fans want him to see#SalaarReview#salaar pic.twitter.com/JPc04hLouD
‘ಡಂಕಿ’ (Dunki) ಚಿತ್ರ ಒಂದು ದಿನ ಮೊದಲು ಅಂದರೆ ಡಿಸೆಂಬರ್ 21ರಂದು ಬಿಡುಗಡೆಯಾಗಿದೆ. ಈ ಎರಡೂ ಚಿತ್ರಗಳೂ ಜಿದ್ದಾಜಿದ್ದಿಗೆ ಬಿದ್ದಿವೆ. ʼಡಂಕಿʼ ಮತ್ತು ʼಸಲಾರ್ʼ ಈ ವರ್ಷ ಬಹು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳು. ಟ್ರೈಲರ್, ಹಾಡುಗಳಿಂದಲೇ ಈ ಎರಡೂ ಚಿತ್ರಗಳು ನಿರೀಕ್ಷೆ ಮೂಡಿಸಿವೆ. ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್ ನೀಲ್ ʼಸಲಾರ್ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್ ವೃತ್ತಿ ಜೀವನಕ್ಕೆ ಇದು ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಪೃಥ್ವಿರಾಜ್, ಶ್ರುತಿ ಹಾಸನ್ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.