ಬೆಂಗಳೂರು: ಸಲಾರ್ ಟೀಸರ್ (Salaar teaser) ಬಿಡುಗಡೆಯಾದ ಬಳಿಕ ಯುಟ್ಯೂಬ್ನಲ್ಲಿ ಸಲಾರ್ದೇ (Salaar Movie) ಹವಾ ಎದ್ದಿದೆ. ಸಲಾರ್ ಟೀಸರ್ (Salaar movie teaser) ರಿಲೀಸ್ ಆದ 24 ಗಂಟೆಗಳಲ್ಲಿ 8.3 ಕೋಟಿ ವ್ಯೂಸ್ ಪಡೆದುಕೊಂಡಿದೆ. ಇದು ದಾಖಲೆ ಸೃಷ್ಟಿಸಿದ್ದು, ಕೆಜಿಎಫ್-2 (KGF- 2) ದಾಖಲೆಯನ್ನೂ ಉಡೀಸ್ ಮಾಡಿದೆ.
ಕೆಜಿಎಫ್- 2 ಟೀಸರ್ 24 ಗಂಟೆಗಳಲ್ಲಿ 7.8 ಕೋಟಿ ವ್ಯೂಸ್ ಗಳಿಸಿತ್ತು. ಸದ್ಯ ಕೆಜಿಎಫ್ ಅನ್ನು ಸಲಾರ್ ಟೀಸರ್ ಹಿಂದಿಕ್ಕಿದೆ. ಈಗೇನಿದ್ದರೂ ಮಾನ್ಸ್ಟರ್ ಅಲ್ಲ, ಸಲಾರ್ ಸೀಸ್ಫೈರ್ದೇ ಆರ್ಭಟ ಎಂದು ಪ್ರಭಾಸ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ಕೆಜಿಎಫ್ ಅಷ್ಟೇ ಅಲ್ಲ ರಿಲೀಸ್ ಆದ 24 ಗಂಟೆಗಳಲ್ಲಿ ಅತ್ಯಧಿಕ ವ್ಯೂಸ್ ಪಡೆದುಕೊಂಡ ಭಾರತೀಯ ಸಿನಿಮಾದ ಟೀಸರ್ ಎನಿಸಿದೆ ಸಲಾರ್. ಹೊಂಬಾಳೆ ಸಂಸ್ಥೆಯಿಂದ ಅಧಿಕೃತವಾಗಿ ವ್ಯೂಸ್ ಸ್ಟೇಟಸ್ ಬರಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಸಲಾರ್ ನಂಬರ್ ವನ್ ಎಂದು ಟ್ರೆಂಡಿಂಗ್ ಆಗುತ್ತಿದೆ. ಸಲಾರ್ ಟೀಸರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೆಜಿಎಫ್ ಹಾಗೂ ಸಲಾರ್ ನಡುವೆ ಸಂಬಂಧ ಇದೆ ಎಂದು ನಿನ್ನೆಯೇ ತರ್ಕಿಸಲಾಗಿತ್ತು. ಟೀಸರ್ನಲ್ಲಿ ಕಾಣಿಸಿಕೊಳ್ಳುವ ಲೊಕೇಶನ್, ಟ್ಯಾಂಕರ್ಗಳ ನಂಬರ್ ಇತ್ಯಾದಿಗಳನ್ನು ತೋರಿಸಿ, ಇದು ಕೆಜಿಎಫ್-2ನದೇ ಮುಂದುವರಿದ ಭಾಗ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Salaar Movie: ಕೆಜಿಎಫ್ 2 ಚಿತ್ರದ ಮುಂದುವರಿದ ಭಾಗವೇ ಸಲಾರ್? ಟ್ಯಾಂಕರ್ ನೀಡಿದ ಸುಳಿವು!