Site icon Vistara News

Salaar Movie: ಬೆಳ್ಳಂಬೆಳಿಗ್ಗೆ ಸುನಾಮಿ ಎಬ್ಬಿಸಿದ ಸಲಾರ್ ಟೀಸರ್!‌ 15 ನಿಮಿಷದಲ್ಲಿ 1 ಲಕ್ಷ ವ್ಯೂ!

Salaar Movie Release Date

ಬೆಂಗಳೂರು: ಪ್ರಭಾಸ್‌ ನಟನೆಯ ಬಹು ನಿರೀಕ್ಷಿತ ʼಸಲಾರ್‌ʼ ಸಿನಿಮಾದ ಟೀಸರ್‌ ಅನ್ನು ಇಂದು ಮುಂಜಾನೆ 05.12ಕ್ಕೆ ರಿಲೀಸ್‌ ಮಾಡಲಾಗಿದೆ. ಟೀಸರ್ ರಿಲೀಸ್ ಆಗಿ 15 ನಿಮಿಷಕ್ಕೇ 1 ಲಕ್ಷಕ್ಕೂ ಅಧಿಕ ವ್ಯೂಸ್‌ ಕಂಡುಬಂದಿದೆ.

ಸೂರ್ಯೋದಯಕ್ಕೂ ಮುನ್ನವೇ ಸಲಾರ್ ದರ್ಶನವಾಗಿದ್ದು, 05.12ಕ್ಕೆ ಸಲಾರ್ ಟೀಸರ್ ರಿಲೀಸ್ ಆಯಿತು. ಇದರಲ್ಲಿ ಪ್ರಭಾಸ್- ಪ್ರಶಾಂತ್ ನೀಲ್ ಜೋಡಿ ಮೋಡಿ ಮಾಡಿದ್ದು, ಆಕ್ಷನ್‌ ಪ್ಯಾಕ್‌ ಫಿಲಂನ ಮೊದಲ ದರ್ಶನ ಎಲ್ಲರನ್ನೂ ಮೋಡಿ ಮಾಡಿದೆ.

ಬೆಳಿಗ್ಗೆಯೇ ಒಳ್ಳೆಯ ಗಳಿಗೆ ಎಂಬ ಕಾರಣಕ್ಕೆ ರಿಲೀಸ್ ಮಾಡಲಾಗಿದೆ. ಹಲವು ಫ್ಲಾಪ್ ಸಿನಿಮಾಗಳ ನಂತರ ಪ್ರಭಾಸ್‌ಗೆ ಈ ಸಲಾರ್ ಸಕ್ಸಸ್ ನೀಡಲಿದೆಯೇ ಎಂದು ನೋಡಬೇಕಿದೆ. ಪ್ರಭಾಸ್ ಅಭಿಮಾನಿಗಳು ಮುಂಜಾನೆ ಎದ್ದ ತಕ್ಷಣ ಸಲಾರ್ ಮಂತ್ರ ಹೇಳುತ್ತಿದ್ದಾರೆ. ಹೊತ್ತಲ್ಲದ ಹೊತ್ತಲ್ಲಿ ಟೀಸರ್ ರಿಲೀಸ್ ಮಾಡಿರುವ ಹೊಂಬಾಳೆ ನಿರ್ಮಾಣ ಸಂಸ್ಥೆಗೆ ಈ ಬಗ್ಗೆ ಭಾರಿ ವಿಶ್ವಾಸವಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದ್ದು, ಸೆನ್ಸೇಶನ್ ಕ್ರಿಯೇಟ್ ಮಾಡೋದು ಪಕ್ಕಾ ಅಂತಿವೆ ಸಂಸ್ಥೆಯ ಮೂಲಗಳು. ಟೀಸರ್ ರಿಲೀಸ್ ಆಗಿ 15 ನಿಮಿಷಕ್ಕೇ 1 ಲಕ್ಷಕ್ಕೂ ಅಧಿಕ ವ್ಯೂಸ್‌ ಕಂಡುಬಂದಿದೆ. ಇದೇ ವರ್ಷ ಸೆಪ್ಟೆಂಬರ್ 28ಕ್ಕೆ ವಿಶ್ವಾದ್ಯಂತ ತೂಫಾನ್ ಎಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿದೆ. ʼಪಾರ್ಟ್ 1 ಕದನ ವಿರಾಮʼ ಎಂದು ಹೊಂಬಾಳೆ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Salaar Movie : ಸಲಾರ್​ಗೂ ಕೆಜಿಎಫ್​​ ಚಾಪ್ಟರ್​ 2ಗೂ ಉಂಟು ನಂಟು; ಏಪ್ರಿಲ್​ 6ಕ್ಕೆ ಗೊತ್ತಾಗಲಿದೆ ಗುಟ್ಟು!

Exit mobile version