Site icon Vistara News

Salaar Movie: ಸಲಾರ್‌ ಶೋ ಹೌಸ್​ಫುಲ್; ಪ್ರಿ ಬುಕ್ಕಿಂಗ್‌​ಗೆ ಭರ್ಜರಿ ರೆಸ್ಪಾನ್ಸ್

Salaar Movie Ticket Advance Booking Opened

ಬೆಂಗಳೂರು: ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾ ಚಿತ್ರದ ಅಡ್ವಾನ್ಸ್ ಬುಕಿಂಗ್ ಶುಕ್ರವಾರ (ಡಿಸೆಂಬರ್ 15) ಸಂಜೆ ಓಪನ್ ಆಗಿದೆ. ಸಲಾರ್ ಮೊದಲ ಟಿಕೇಟ್ ರಾಜಮೌಳಿ ಪಾಲಾಗಿದೆ. ಕನ್ನಡಕ್ಕೆ ಕೇವಲ ಒಂದು ಶೋ ನೀಡಲಾಗಿದೆ. ಡಿಸೆಂಬರ್ 16, ಮಧ್ಯಾಹ್ನ 12 ಗಂಟೆ ತೆಲುಗು ವರ್ಷನ್​ಗೆ 100 ಶೋ ಸಿಕ್ಕಿದೆ. ಮುಂಜಾನೆ 5 ಗಂಟೆ ಶೋಗಳು ಅನೇಕ ಕಡೆಗಳಲ್ಲಿ ಹೌಸ್​ಫುಲ್ ಆಗಿವೆ. ಹಂತ ಹಂತವಾಗಿ ಇನ್ನೂ ಹಲವು ಶೋಗಳು ಸೇರ್ಪಡೆ ಆಗಲಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಡಿಸೆಂಬರ್‌ 22ರಂದು ಸಲಾರ್‌ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಬೆಳಗ್ಗೆ 5 ಗಂಟೆಯಿಂದಲೇ ಬೆಂಗಳೂರಿನ ಹಲವೆಡೆ ಸಲಾರ್ ಪ್ರದರ್ಶನ ಶುರುವಾಗಲಿದೆ. ಈಗಾಗಲೇ ಹಲವು ಥಿಯೇಟರ್‌ಗಳ ಬುಕ್ಕಿಂಗ್ ಓಪನ್ ಆಗಿದೆ. ಬುಕ್ಕಿಂಗ್ ಓಪನ್ ಆಗಿ ಕೆಲವೇ ಗಳಟೆಗಳಲ್ಲಿ ಟಿಕೆಟ್‌ಗಳು ಸೇಲ್ ಆಗಿವೆ. ಮುಂಜಾನೆ ಶೋಗಳು ಹೌಸ್​ಫುಲ್ ಕಂಡಿವೆ.

ಈಗ ‘ಸಲಾರ್​’ (Salaar) ಸಿನಿಮಾಗೆ ಸೆನ್ಸಾರ್​ ಬೋರ್ಡ್​ನಿಂದ ‘ಎ’ ಸರ್ಟಿಫಿಕೇಟ್​ (A certificate) ನೀಡಲಾಗಿದೆ. ಹಾಗಾಗಿ ಈ ಸಿನಿಮಾದಲ್ಲೂ ಕ್ರೌರ್ಯ ಅಬ್ಬರಿಸಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.

ಕಥೆ ಏನು?

ʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್‌ʼನ ಪ್ರಮುಖ ಭಾವನೆ. ಡಿಸೆಂಬರ್‌ 1ರಂದು ಟ್ರೈಲರ್‌ ಬಿಡುಗಡೆಯಾಗಲಿದ್ದು, ಇದರಲ್ಲಿ ʼಸಲಾರ್‌ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಹೇಳಿ ಪ್ರಶಾಂತ್‌ ಕುತೂಹಲ ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿ: Salaar Movie: ʻಸಲಾರ್‌ʼ ಫಸ್ಟ್‌ ಸಾಂಗ್‌ ಔಟ್‌; ಗೆಳೆತನ ಸಂಭ್ರಮಿಸುವ ಹೊತ್ತಿದು!

ʼಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಮೊದಲ ಬಾರಿ ಪ್ರಭಾಸ್‌ ಮತ್ತು ಪ್ರಶಾಂತ್‌ ನೀಲ್‌ ಒಂದಾಗುತ್ತಿದ್ದು, ಸಿನಿಮಾದ ಇತರ ಮುಖ್ಯ ಪಾತ್ರಗಳಲ್ಲಿ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಕಾಣಿಸಿಕೊಂಡಿದ್ದಾರೆ. ಸದ್ಯ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Exit mobile version