Site icon Vistara News

Salaar Movie : ಅಮೆರಿಕದಲ್ಲಿ ದಾಖಲೆ ಬರೆಯಲಿದೆ ಪ್ರಭಾಸ್‌ನ ಸಲಾರ್‌; ಶುರುವಾಗಿದೆ 1979 ಲೆಕ್ಕಾಚಾರ!

salaar movie to create record

ಹೈದರಾಬಾದ್‌: ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್‌ ಮಿಂಚಿದ್ದು ಈಗಲೂ ಎಲ್ಲರ ಕಣ್ಣಮುಂದಿದೆ. ಆದರೆ, ಅದಾದ ಮೇಲೆ ಪ್ರಭಾಸ್‌ ಅವರ ಮೂರು ಸಿನಿಮಾಗಳು ಬಿಡುಗಡೆಯಾದವಾದರೂ ಯಾವುದರಲ್ಲೂ ಯಶಸ್ಸು ಸಿಗಲಿಲ್ಲ. ಇದೀಗ ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ನಿರ್ದೇಶನದ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್‌ ಮಿಂಚಲು ಸಿದ್ಧವಾಗಿದ್ದು, ಈ ಸಿನಿಮಾ ಅಮೆರಿಕದಲ್ಲಿ ಬಿಡುಗಡೆ ಮೂಲಕವೇ ದಾಖಲೆ ಬರೆಯುತ್ತಿದೆ.

ಸಲಾರ್‌ ಸಿನಿಮಾ ಸೆಪ್ಟೆಂಬರ್‌ 28ರಂದು ಬಿಡುಗಡೆಯಾಗಲಿದೆ. ವಿಶೇಷವೆಂದರೆ ನಾರ್ತ್‌ ಅಮೆರಿಕ ಒಂದೇ ದೇಶದಲ್ಲಿ ಬರೋಬ್ಬರಿ 1979 ಥಿಯೇಟರ್‌ನಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಈವರೆಗೆ ಯಾವುದೇ ಭಾರತೀಯ ಸಿನಿಮಾ ಅಮೆರಿಕದಲ್ಲಿ ಇಷ್ಟೊಂದು ಸ್ಥಳಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಪ್ರಭಾಸ್‌ ಅವರು 1979ರಲ್ಲಿ ಜನಿಸಿದವರಾದ್ದರಿಂದ ಅಷ್ಟೇ ಸ್ಥಳಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ ಚಿತ್ರತಂಡ.

ಇದನ್ನೂ ಓದಿ: Viral Video: ಮಗನ ಸ್ಕೂಲ್​ ಫೀಸ್​ಗೆ ಹಣ ಹೊಂದಿಸುವ ಸಲುವಾಗಿ ಬಸ್​​ಗೆ ಡಿಕ್ಕಿ ಹೊಡೆದ ಮಹಿಳೆ!

ಇನ್ನು ಸಲಾರ್‌ ಸಿನಿಮಾದ ವಿತರಣೆ ಹಕ್ಕನ್ನು ಪ್ರತ್ಯಾಂಗೀರ್‌ ಸಿನಿಮಾಸ್‌ ಪಡೆದುಕೊಂಡಿದೆ. ಸಿನಿಮಾವನ್ನು ಭರ್ಜರಿಯಾಗಿ ಬಿಡುಗಡೆ ಮಾಡುವುದಕ್ಕೆ ಪ್ರತ್ಯಾಂಗೀರ್‌ ಸಿನಿಮಾಸ್‌ ಭಾರೀ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಲ್ಲೆಡೆ ಸಿನಿಮಾ ಬಿಡುಗಡೆಗೆ ಮೊದಲೇ ಭಾರೀ ಸದ್ದು ಮಾಡುತ್ತಿದ್ದು, ಈ ಸಿನಿಮಾ ಪ್ರಭಾಸ್‌ಗೆ ಮತ್ತೆ ಒಳ್ಳೆಯ ಫೇಮ್‌ ಒಂದನ್ನು ತಂದುಕೊಡುವ ನಿರೀಕ್ಷೆಯಿದೆ.

ಸಲಾರ್‌ ಸಿನಿಮಾದ ಟೀಸರ್‌ ಅನ್ನು ಜುಲೈ 6ರಂದು ಬಿಡುಗಡೆ ಮಾಡಲಾಗಿತ್ತು. ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ಈ ಟೀಸರ್‌ನಲ್ಲಿ ಪ್ರಭಾಸ್‌ ಹತ್ತು ಸೆಕೆಂಡುಗಳಷ್ಟು ಕೂಡಾ ಕಾಣಿಸಿಕೊಂಡಿಲ್ಲ. ಆದರೆ ಇದರಲ್ಲಿ ತಮ್ಮ ನೆಚ್ಚಿನ ನಾಯಕ ಕಾಣಿಸಿಕೊಂಡ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಹುಡುಗರ ತಮಾಷೆ ಸಹಿಸಲಾಗದೆ ಮೂವರನ್ನು ಕೊಂದ; ಭಾರತೀಯನಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

ಬಹು ನಿರೀಕ್ಷೆಯ ಸಲಾರ್‌ ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್‌ ಅವರು ನಾಯಕ ನಟಿಯಾಗಿದ್ದಾರೆ. ಪೃಥ್ವಿರಾಜ್‌ ಸುಕುಮಾರನ್‌, ಜಗಪತಿ ಬಾಬು, ಈಶ್ವರಿ ರಾವ್‌ ಸೇರಿ ಅನೇಕರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ಅವರು ನಿರ್ಮಾಣ ಜವಾಬ್ದಾರಿ ಹೊತ್ತಿರುವ ಸಿನಿಮಾಕ್ಕೆ ಕೆಜಿಎಫ್‌ ಖ್ಯಾತಿಯ ರವಿ ಬಸ್ರೂರು ಅವರು ಸಂಗೀತ ನಿರ್ದೇಶಕರಾಗಿದ್ದಾರೆ.

Exit mobile version