Site icon Vistara News

Salaar Twitter Review: ಹಿನ್ನೆಲೆ ಸಂಗೀತ ಕಿರಿಕಿರಿ, ಹಾಡು ಇರ್ಬೇಕಿತ್ತು! ನೆಟ್ಟಿಗರ ವಿಮರ್ಶೆ ಮತ್ತೇನಿದೆ?

Salaar prabhas

ಬೆಂಗಳೂರು: ಪ್ರಶಾಂತ್ ನೀಲ್ ಅವರ ಮಹತ್ವಾಕಾಂಕ್ಷೆಯ ಚಿತ್ರ ʼಸಲಾರ್‌ʼ ಕೊನೆಗೂ ಥಿಯೇಟರ್‌ಗೆ ಬಂದಿದೆ. ಚಿತ್ರವನ್ನು ವೀಕ್ಷಿಸಿದ ನೆಟ್ಟಿಗರು, ನೋಡಲೇಬೇಕಾದ ಸಿನಿಮಾ ಎಂದು ಕಮೆಂಟ್‌ ಮಾಡಿದ್ದಾರೆ. ಪ್ರಭಾಸ್‌ ಅವರ ನಟನೆಗೆ ವ್ಯಾಪಕವಾಗಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ ʼಸಲಾರ್‌ʼ ಆರ್ಭಟ ಜೋರಾಗಿತ್ತು. ಥಿಯೇಟರ್ ಅಂಗಳದಲ್ಲಿ ಸಲಾರ್ ಕಟೌಟ್‌ಗಳು ರಾರಾಜಿಸುತ್ತಿವೆ. ಕೆಜಿಎಫ್ 2ಗಿಂತಲೂ ಅತ್ಯಧಿಕ ಸ್ಕ್ರೀನ್‌ಗಳಲ್ಲಿ ಸಲಾರ್ ರಿಲೀಸ್ ಆಗಿದೆ. ಕರ್ನಾಟಕದ 350 ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿದೆ. ವಿಶ್ವಾದ್ಯಂತ 15 ಸಾವಿರ ಶೋಗಳು ಪ್ರದರ್ಶನ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದೀಗ ಪ್ರೇಕ್ಷಕರು (Salaar Twitter Review) ಸಿನಿಮಾ ನೋಡಿ ಸೋಷಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನೆಟ್ಟಿಗರು ಟ್ವೀಟ್‌ನಲ್ಲಿ ಸಿನಿಮಾ ಬಗ್ಗೆ ಹೊಗಳಿದ್ದಾರೆ ʻʻಮೂಲ ವಿಷಯವೆಂದರೆ ಪ್ರತಿ ನೋವು ಮತ್ತು ಅವಮಾನವನ್ನು ಸಹಿಸಿಕೊಳ್ಳುವ ಹಿಂಸಾತ್ಮಕ ವ್ಯಕ್ತಿ ಆತ. ಆದರೆ ಮಹಿಳೆಗೆ ಅವಮಾನವಾದರೆ ಅವನು ಸಹಿಸಲ್ಲ. ಈ ಥೀಮ್‌ ಬಹಳಷ್ಟು ಇಷ್ಟವಾಯ್ತುʼʼ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ.

ʻʻಇದೊಂದು ಬ್ಲಾಕ್ ಬಸ್ಟರ್ ಸಿನಿಮಾ. ಪ್ರಭಾಸ್ ಅಭಿನಯ, ನೀಲ್‌ ನಿರ್ದೇಶನವು ಉನ್ನತ ಮಟ್ಟದಲ್ಲಿದೆ. ದಿ ರೆಬೆಲ್ ಈಸ್ ಬ್ಯಾಕ್ʼʼ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ʻʻಇಡೀ ಥಿಯೇಟರ್ ಬೆಚ್ಚಿಬಿದ್ದ ಈ ದೃಶ್ಯ ವಾವ್ ಎಂಬಂತೆ ಇತ್ತುʼʼ ಎಂದು ಮತ್ತೊಬ್ಬರು ವಿಡಿಯೊ ಹಂಚಿಕೊಂಡು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Salaar FIRST Review Out: ಪ್ರಭಾಸ್‌ ಅಭಿನಯ ಸೂಪರ್‌ ಡೂಪರ್‌ ಅಂದ್ರು ಫ್ಯಾನ್ಸ್‌!

ʻʻಸಲಾರ್‌ ಸಿನಿಮಾ ಅತ್ಯುತ್ತಮವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಚಿತ್ರವು ಆಕ್ಷನ್ ಮಾಸ್ಟರ್‌ಪೀಸ್ ಆಗಿದೆ. ಪ್ರಭಾಸ್‌ , ಸ್ಟೈಲ್, ಮಾಸ್ ಆಕ್ಷನ್, ಪಂಚ್ ಡೈಲಾಗ್ ಅಮೋಘʼʼ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ʻʻಇವತ್ತು ದಕ್ಷಿಣ ಭಾರತದಲ್ಲಿ ಹಬ್ಬ. ʼಡಂಕಿʼ ಖಂಡಿತ ಭಯ ಬೀಳೋದು ಗ್ಯಾರಂಟಿʼʼ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

“2 ಗಂಟೆ 55 ನಿಮಿಷದ ಸಿನಿಮಾದಲ್ಲಿ ಕೇವಲ ನಾಲ್ಕು ಫೈಟ್‌ಗಳಿವೆ. ಹಾಗೆಯೇ ಸಿಕ್ಕಾಪಟ್ಟೆ ಡ್ರಾಮಾ ಇದೆ. ಆದರೂ ಇಡೀ ಡ್ರಾಮಾದಲ್ಲಿ ಒಂದೇ ಒಂದು ಬೇಸರ ಮೂಡಿಸುವ ದೃಶ್ಯವಿಲ್ಲ. ಈ ಸಿನಿಮಾದಲ್ಲಿರುವ ಫೈಟ್ಸ್ ಹಾಗೂ ಎಲಿವೇಷನ್ ಸೀನ್‌ಗಳು ಬೋರ್ ಹೊಡೆಸುವುದಿಲ್ಲ. ನಿಮ್ಮ ದುಡ್ಡಿಗೆ ಮೋಸವಿಲ್ಲ” ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.

” ಸಲಾರ್ ಸಿನಿಮಾದ ಪಾಸಿಟಿವ್ ಅಂಶಗಳು, ಆಕ್ಷನ್ ಸೀನ್‌ಗಳು, ಕಲ್ಲಿದ್ದಲು ಗಣಿಯಲ್ಲಿ ಪ್ರಭಾಸ್ ಎಲೆವೇಷನ್ ಸೀನ್‌ಗಳು, ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಸೀನ್‌ಗಳು ಅದ್ಭುತವಾಗಿವೆ. ಹಾಗೆಯೇ ನೆಗೆಟಿವ್ ಅಂಶಗಳು ಏನಂದ್ರೆ, ಹಾಡುಗಳಿಲ್ಲ. ಕೆಜಿಎಫ್‌ನಲ್ಲಿ ಇರುವಂತೆ ಒಂದಾದರೂ ಎಲೆವೆಷನ್ ಸಾಂಗ್ ಇರಬೇಕಿತ್ತು. ಹಿನ್ನೆಲೆ ಸಂಗೀತ ಕಿರಿಕಿರಿ ಮಾಡುತ್ತೆ. ಪ್ರಶಾಂತ್ ನೀಲ್ ಟ್ರೇಡ್ ಮಾರ್ಕ್‌ ಡೈಲಾಗ್ ಮಿಸ್ ಆಗಿದೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ʼಕೆಜಿಎಫ್‌ʼ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್‌ ವೃತ್ತಿ ಜೀವನಕ್ಕೆ ʼಸಲಾರ್‌ʼ ಈ ವರ್ಷ ಬಹು ನಿರೀಕ್ಷೆ ಸಿನಿಮಾ. ಪೃಥ್ವಿರಾಜ್‌, ಶ್ರುತಿ ಹಾಸನ್‌ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

Exit mobile version