Site icon Vistara News

Salaar Release Trailer: ʻಸಲಾರ್‌ʼ ಎರಡನೇ ಟ್ರೈಲರ್‌ ಔಟ್‌; ಪ್ರಭಾಸ್‌ ದರ್ಬಾರ್‌ ಜೋರು!

Salaar second Trailer Release

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಲಾರ್: ಭಾಗ 1-ಸೀಸ್‌ಫೈರ್‌ (Salaar: Part 1 – Ceasefire)ನ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಎರಡನೇ ಟ್ರೈಲರ್‌ (Salaar Release Trailer) ಔಟ್‌ ಆಗಿದೆ. ಸಿನಿಮಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವಾಗ ‘ಹೊಂಬಾಳೆ ಫಿಲ್ಮ್ಸ್’ ಹೊಸ ಟ್ರೈಲರ್‌ ಬಿಡುಗಡೆ ಮಾಡಿ ಹವಾ ಸೃಷ್ಟಿಸಿದೆ. ಎರಡನೇ ಟ್ರೈಲರ್‌ನಲ್ಲಿ ಪ್ರಭಾಸ್‌ ಹಾಗೂ ಪೃಥ್ವಿರಾಜ್ ಸುಕುಮಾರ್ ಸಖತ್‌ ಹೈಲೈಟ್‌ ಆಗಿದ್ದಾರೆ. ನಟಿಯರು ಮಿಂಚಿದ್ದಾರೆ. ‘ಸಲಾರ್’​ ಸಿನಿಮಾದಲ್ಲಿ ಇಬ್ಬರು ಸ್ನೇಹಿತರ ಕಥೆ ಇದೆ. ಅದೇ ರೀತಿ ಈ ಎರಡನೇ ಟ್ರೈಲರ್‌ ಮೂಡಿ ಬಂದಿದೆ.

ಕೆಜಿಎಫ್‌ (KGF) ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಪ್ಯಾನ್‌ ಇಂಡಿಯಾ ಚಿತ್ರಕ್ಕಾಗಿ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಎರಡೂ ಟ್ರೈಲರ್‌ಗಳು ಭರ್ಜರಿಯಾಗಿ ಮೂಡಿ ಬಂದಿದ್ದು, ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಇರಲಿದೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲ ಭಾಷೆಯಲ್ಲೂ ಟ್ರೈಲರ್‌ ರಿಲೀಸ್​ ಆಗಿದೆ.

ರವಿ ಬಸ್ರೂರ್‌ ಸಂಗೀತ ಮತ್ತೊಮ್ಮೆ ಮ್ಯಾಜಿಕ್‌ ಮಾಡಿದೆ. ಛಾಯಾಗ್ರಾಹಕ ಭವನ್‌ ಗೌಡ್‌ ‘ಸಲಾರ್‌’ನ ಬೇರೆಯದೇ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ. ಖಾನ್‌ಸಾರ್‌ ಸಾಮ್ರಾಜ್ಯದಲ್ಲಿ ಕಥೆ ನಡೆಯಲಿದೆ.

ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಪ್ರಶಾಂತ್‌ ನೀಲ್‌ ಸಲಾರ್‌ ಚಿತ್ರದಲ್ಲಿ ಸ್ನೇಹವೇ ಪ್ರಮುಖ ತಿರುಳು ಎಂದಿದ್ದರು. ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್‌ʼನ ಪ್ರಮುಖ ಭಾವನೆ. ಡಿಸೆಂಬರ್‌ 1ರಂದು ಬಿಡುಗಡೆಯಾಗುವ ಟ್ರೈಲರ್‌ನಲ್ಲಿ ʼಸಲಾರ್‌ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಸುಳಿವು ನೀಡಿ ಕುತೂಹಲ ಹೆಚ್ಚಿಸಿದ್ದರು.

ಇದನ್ನೂ ಓದಿ: Salaar Movie: ಸಲಾರ್‌ ಶೋ ಹೌಸ್​ಫುಲ್; ಪ್ರಿ ಬುಕ್ಕಿಂಗ್‌​ಗೆ ಭರ್ಜರಿ ರೆಸ್ಪಾನ್ಸ್

ಕೆಜಿಎಫ್‌ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್‌ ನ ವಿಜಯ್‌ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್‌, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

2014ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮುರಳಿ-ಹರಿಪ್ರಿಯಾ ಅಭಿನಯದ ʼಉಗ್ರಂʼ ಚಿತ್ರ ನಿರ್ದೇಶನದ ಮೂಲಕ ಪ್ರಶಾಂತ್‌ ನೀಲ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ಮಾಡುವ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತ್ತು. ಬಳಿಕ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಜತೆ ʼಕೆಜಿಎಫ್‌ʼ ಚಿತ್ರ ಮಾಡುವ ಮೂಲಕ ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿಸಿದ್ದರು. ʼಉಗ್ರಂʼ ಚಿತ್ರ ಕೂಡ ಸ್ನೇಹಿತರಿಬ್ಬರ ಕಥೆಯನ್ನೊಳಗೊಂಡಿತ್ತು. ಇತ್ತ ʼಕೆಜಿಎಫ್‌ʼನಲ್ಲಿ ತಾಯಿ-ಮಗನ ಸೆಂಟಿಮೆಂಟ್‌ ಗಮನ ಸೆಳೆದಿತ್ತು. ʼಸಲಾರ್‌ ಪಾರ್ಟ್‌ 1ʼ ಡಿಸೆಂಬರ್‌ 22ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ದಾಖಲೆಯ ಕಲೆಕ್ಷನ್‌ ಮಾಡುವ ನಿರೀಕ್ಷೆ ಇದೆ.

Exit mobile version