ಸಲಾರ್ ಟೀಸರ್ (Salaar Teaser) ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ಸುದ್ದಿಯಾಗುತ್ತಲೇ ಇದೆ. ಕೆಲವರು ಈ ಟೀಸರ್ ನೋಡಿ ಕೆಜಿಎಫ್ ಸಿನಿಮಾದ ಮುಂದುವರಿದ ಭಾಗ ಎಂದರೆ ಇನ್ನು ಕೆಲವರು ಇದು ಬಹುತೇಕ ಉಗ್ರಂ ರಿಮೇಕ್ ಎನ್ನುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪ್ರಭಾಸ್ ಎರಡು ಗನ್ ಹಿಡಿದು ನಡೆದು ಬರುತ್ತಿರುವ ದೃಶ್ಯ ಉಗ್ರಂ ಚಿತ್ರದಲ್ಲಿಯೂ ಇದೆ. ಉಗ್ರಂ ಚಿತ್ರದಲ್ಲಿ ಅಗಸ್ತ್ಯ ಹೇಗೆ ತನ್ನ ಕೈನಲ್ಲಿನ ಟ್ಯಾಟ್ಯೂವನ್ನು ಬಟ್ಟೆಯಿಂದ ಮರೆಮಾಚಿ ಗನ್ ಹಿಡಿದು ಹೋರಾಡುತ್ತಾನೋ ಅದೇ ರೀತಿ ಇಲ್ಲಿ ಸಲಾರ್ ಕೈಗೆ ಬಟ್ಟೆ ಕಟ್ಟಿಕೊಂಡು ಟ್ಯಾಟ್ಯೂವನ್ನು ಮರೆಮಾಚಿದ್ದಾನೆ. ಇದಲ್ಲದೇ ಟೀಸರ್ ಕೊನೆಯಲ್ಲಿ ಪಾರ್ಟ್ 1 ಸೀಸ್ಫೈರ್ ಎಂದು ಶೀರ್ಷಿಕೆಯನ್ನು ರಿವೀಲ್ ಮಾಡಲಾಗಿದೆ. ಇದರ ಅರ್ಥದ ಬಗ್ಗೆ ಸಿನಿಮಾ ಅಭಿಮಾನಿಗಳು ಸರ್ಚ್ ಮಾಡುತ್ತಿದ್ದಾರೆ.
ಟೀಸರ್ ಜುಲೈ 6ರ ಮುಂಜಾನೆ 05.12ಕ್ಕೆ ರಿಲೀಸ್ ಮಾಡಲಾಗಿದೆ. ಟೀಸರ್ ರಿಲೀಸ್ ಆದ 15 ನಿಮಿಷಕ್ಕೇ 1 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡುಬಂದಿದೆ. ವಿಶೇಷ ಎಂದರೆ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ ಚಿತ್ರಕ್ಕೂ ಟೀಸರ್ನಲ್ಲಿ ಲಿಂಕ್ ನೀಡಲಾಗಿದೆ. ಇದನ್ನು ಗಮನಿಸಿದ ಅನೇಕರು ಥ್ರಿಲ್ ಆಗಿದ್ದಾರೆ. ಓಹ್! ಇದು ಕೆಜಿಎಫ್ 2 ಚಿತ್ರದ ಮುಂದುವರಿದ ಭಾಗವೇ ಎಂದು ಉದ್ಗರಿಸಿದ್ದಾರೆ.
ಟೀಸರ್ ಕೊನೆಯಲ್ಲಿ ಪಾರ್ಟ್ 1 ಸೀಸ್ಫೈರ್ ಎಂದು ಶೀರ್ಷಿಕೆಯನ್ನು ರಿವೀಲ್ ಮಾಡಲಾಗಿದೆ. ಸೀಸ್ಫೈರ್ ಎಂದರೆ ಕನ್ನಡದಲ್ಲಿ ‘ಕದನ ವಿರಾಮ’ ಎಂದರ್ಥ. ಈ ಮೂಲಕ ಸಲಾರ್ ಮೊದಲ ಭಾಗ ಹೊಡೆದಾಟವೊಂದರ ಮಧ್ಯಂತರಕ್ಕೆ ಅಂತ್ಯಗೊಳ್ಳಲಿದೆ ಎಂದು ಊಹಿಸಲಾಗುತ್ತಿದೆ.
ಇದನ್ನೂ ಓದಿ: Salaar Teaser: ಟೀಸರ್ನಲ್ಲಿ ʻಪುಷ್ಪಕ ವಿಮಾನʼದ ಟಿನು ಅವರೇ ಪ್ರಮುಖ ಹೈಲೈಟ್!
ಈ ದೃಶ್ಯದಲ್ಲಿ ಪ್ರಭಾಸ್ ಎಡಗೈ ಗಮನಿದರೆ ಅಲ್ಲಿ ಉಗ್ರಂ ಸಿನಿಮಾದಲ್ಲಿ ಅಗಸ್ತ್ಯ ತನ್ನ ಕೈಗೆ ಹಾಕಿಸಿದ್ದ ಟ್ಯಾಟ್ಯೂವನ್ನೇ ಹೋಲುವ ಟ್ಯಾಟ್ಯೂ ಇದೆ. ಈ ಎರಡೂ ಅಂಶಗಳಿಂದ ಸಲಾರ್ ಚಿತ್ರ ಉಗ್ರಂ ಚಿತ್ರದ ರಿಮೇಕ್ ಎನ್ನಲಾಗುತ್ತಿದೆ.
ಇದೇ ವರ್ಷ ಸೆಪ್ಟೆಂಬರ್ 28ಕ್ಕೆ ವಿಶ್ವಾದ್ಯಂತ ಈ ಚಿತ್ರ ತೂಫಾನ್ ಎಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿದೆ. ʼಪಾರ್ಟ್ 1: ಕದನ ವಿರಾಮʼ ಎಂದು ಹೊಂಬಾಳೆ ಪ್ರಕಟಿಸಿದೆ.