Site icon Vistara News

Tiger 3 new poster: ಕತ್ರಿನಾ ಕೈಫ್ ,ಸಲ್ಮಾನ್ ಕೈಯಲ್ಲಿ ಗನ್‌; ‘ಟೈಗರ್ 3’ ಹೊಸ ಪೋಸ್ಟರ್‌ ಔಟ್‌!

Tiger 3 new poster

ಬೆಂಗಳೂರು: ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಒಳಗೊಂಡ ‘ಟೈಗರ್ 3’ ಟ್ರೈಲರ್‌ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ನಂತರ, ಅಭಿಮಾನಿಗಳು ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿದ್ದರು. ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ದೀಪಾವಳಿಯ ನವೆಂಬರ್ 12ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ‘ಟೈಗರ್ 3’ ಸಿನಿಮಾದ ಹೊಸ ಪೋಸ್ಟರ್ ಔಟ್‌ ಆಗಿದೆ. ಇದರಲ್ಲಿ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಗನ್‌ ಹಿಡಿದಿದ್ದಾರೆ. ಇಮ್ರಾನ್ ಮಧ್ಯದಲ್ಲಿ ಕುರ್ಚಿಯ (Tiger 3 new poster) ಮೇಲೆ ಕುಳಿತಿರುವುದನ್ನು ಕಾಣಬಹುದು.

3 ನಿಮಿಷದ ಟ್ರೈಲರ್‌ನಲ್ಲಿ ಆ್ಯಕ್ಷನ್ ಪ್ಯಾಕ್ಡ್‌ ಸಿಕ್ವೆನ್ಸ್‌ ಹೊಂದಿದೆ. ಟ್ರೈಲರ್‌ನಲ್ಲಿ ಸಲ್ಮಾನ್ ದೇಶವನ್ನು ಉಳಿಸುವತ್ತ ಹೋರಾಟ ಮತ್ತು ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಕತ್ರಿನಾ ಕೈಫ್ ಬಗ್ಗೆ ಇರುವಂತಿದೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಅಮೆಜಾನ್ ಪ್ರೈಮ್ ಟೈಗರ್ 3 ಒಟಿಟಿ ಹಕ್ಕುಗಳನ್ನು ಬರೋಬ್ಬರಿ 200 ಕೋಟಿ ರೂ.ಗೆ ಪಡೆದುಕೊಂಡಿದೆ. ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿ ಸಮಯದಲ್ಲಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ವರದಿಯ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೊ ಟೈಗರ್ 3 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಂತೆಯೇ ಇದೂ ಒಪ್ಪಂದವನ್ನು ಮಾಡಿದೆ. ಟೈಗರ್ 3 ಚಿತ್ರದ OTT ಹಕ್ಕನ್ನು 200 ಕೋಟಿ ರೂ. ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಮತ್ತು ಒಟಿಟಿ ಹಕ್ಕುಗಳ ಕುರಿತ ಹೆಚ್ಚಿನ ವಿವರಗಳನ್ನು ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ: Tiger 3 Trailer Out: ಇಮ್ರಾನ್ ಹಶ್ಮಿ-ಸಲ್ಮಾನ್‌ ಮುಖಾಮುಖಿ; ‘ಟೈಗರ್ 3’ ಟ್ರೈಲರ್ ಔಟ್‌

ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version