Site icon Vistara News

Salman Khan: ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್‌ರನ್ನು ಬಿಗಿದಪ್ಪಿದ ಸಲ್ಮಾನ್ ಖಾನ್!

Salman Khan and Abhishek Bachchan greet each other

ಬೆಂಗಳೂರು: ಡಿ.21ರಂದು ನಡೆದ ಚಲನಚಿತ್ರ ನಿರ್ಮಾಪಕ ಆನಂದ್ ಪಂಡಿತ್ ಅವರ 60ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್‌ ತಾರೆಗಳು ಭಾಗಿಯಾಗಿದ್ದರು. ಅಮಿತಾಭ್‌ ಬಚ್ಚನ್, ಅಭಿಷೇಕ್ ಬಚ್ಚನ್‌ನಿಂದ ಹಿಡಿದು ಸಲ್ಮಾನ್ ಖಾನ್ (Salman Khan) ಮತ್ತು ಶಾರುಖ್ ಖಾನ್‌ವರೆಗೆ ಹಲವು ದಿಗ್ಗಜರು ಪಾರ್ಟಿಯಲ್ಲಿ ಹಾಜರಾಗಿದ್ದರು. ಪಾರ್ಟಿಯಲ್ಲಿ ಸಲ್ಮಾನ್‌ ಅವರು ಅಭಿಷೇಕ್‌ ಹಾಗೂ ಅಮಿತಾಭ್‌ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ವಿಡಿಯೊ ವೈರಲ್‌ ಆಗಿದೆ.

ಆನಂದ್ ಪಂಡಿತ್ ಅವರ ಜನ್ಮದಿನದ ಸಂಭ್ರಮಾಚರಣೆಯ ಕ್ಷಣವನ್ನು ಪಾಪರಾಜಿಗಳು (ಫೋಟೊಗ್ರಾಫರ್‌ಗಳು) ಸೆರೆ ಹಿಡಿದಿದ್ದಾರೆ. ವಿಡಿಯೊದಲ್ಲಿ, ಆನಂದ್ ಪಂಡಿತ್ ಅವರಿಗೆ ಶುಭಾಶಯಗಳನ್ನು ತಿಳಿಸಲು ಸಲ್ಮಾನ್ ಖಾನ್ ವೇದಿಕೆ ಬರುತ್ತಾರೆ. ಅಮಿತಾಭ್‌ ಅವರನ್ನು ಕಂಡೊಡನೆ ಸಲ್ಮಾನ್ ಶೇಕ್‌ ಹ್ಯಾಂಡ್‌ ಕೊಟ್ಟು ಹಗ್‌ ಮಾಡುತ್ತಾರೆ. ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಅವರು ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರನ್ನು ಅಪ್ಪಿಕೊಂಡು, ನಂತರ ಸಲ್ಮಾನ್ ಅವರಿಗೆ ಅಭಿಷೇಕ್ ಬಚ್ಚನ್ ಅಪ್ಪುಗೆ ನೀಡುತ್ತಾರೆ.

ನಿರ್ಮಾಪಕ ಆನಂದ್ ಪಂಡಿತ್ ಚೆಹ್ರೆ, ದಿ ಬಿಗ್ ಬುಲ್, ಥ್ಯಾಂಕ್ ಗಾಡ್ ಮತ್ತು ಟೋಟಲ್ ಧಮಾಲ್ ಮುಂತಾದ ಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ಕಾಜೋಲ್, ಹೃತಿಕ್ ರೋಷನ್, ಕಾರ್ತಿಕ್ ಆರ್ಯನ್, ಟೈಗರ್ ಶ್ರಾಫ್, ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್ ಸೇರಿದಂತೆ ಅನೇಕ ಬಾಲಿವುಡ್‌ ತಾರೆಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Salman Khan: ಸೋಮಿ ಅಲಿ ಅಪಾರ್ಟ್‌ಮೆಂಟ್‌ನಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದ ಸಲ್ಮಾನ್‌; ಮುರಿದು ಬಿತ್ತು ಮದುವೆ!

ಐಶ್ವರ್ಯಾ ರೈ ಮತ್ತು ಸಲ್ಮಾನ್​ ಖಾನ್​ ನಡುವಿನ (Salman Khan and Aishwarya Rai Bachchan) ಪ್ರೀತಿ-ಪ್ರೇಮದಿಂದ ಹಿಡಿದು ಬ್ರೇಕಪ್​ವರೆಗಿ ಕತೆ ಎಲ್ಲರಿಗೂ ಗೊತ್ತಿದೆ. 1999ರಲ್ಲಿ ತೆರೆಕಂಡ ಸಂಜಯ್​ ಲೀಲಾ ಬನ್ಸಾಲಿ ಅವರ ‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಸೆಟ್​​ನಿಂದ ಶುರುವಾದ ಅವರ ಪ್ರೀತಿ 2002ರಲ್ಲಿ ಕೊನೆಗೊಂಡಿತು. ಸಲ್ಮಾನ್​ ಖಾನ್​ ಜತೆಗಿನ ಸಂಬಂಧ ನನ್ನ ಜೀವನದಲ್ಲೇ ಅತ್ಯಂತ ಕೆಟ್ಟ ದಿನ. ನನ್ನ ವೈಯಕ್ತಿಕ ಸುರಕ್ಷತೆ, ನನ್ನ ಕುಟುಂಬದ ಒಳಿತಿಗಾಗಿ ಇನ್ನೆಂದೂ ಸಲ್ಮಾನ್ ಖಾನ್​ ಜತೆ ನಟಿಸುವುದಿಲ್ಲ ಎಂದು ಐಶ್ವರ್ಯಾ ರೈ 2002ರಲ್ಲಿಯೇ ಘೋಷಿಸಿಬಿಟ್ಟಿದ್ದಾರೆ.

ಅದಾದ ಮೇಲೆ ಅವರೆಂದೂ ಸಲ್ಮಾನ್​ ಖಾನ್​ ಜತೆ ಕಾಣಿಸಿಕೊಳ್ಳಲಿಲ್ಲ. 2007ರಲ್ಲಿ ಅಭಿಷೇಕ್​ ಬಚ್ಚನ್​ರನ್ನು ವಿವಾಹವಾಗಿ, ಈ ಜೋಡಿಗೆ 2011ರಲ್ಲಿ ಮಗಳು ಆರಾಧ್ಯಾ ಹುಟ್ಟಿದ್ದಾಳೆ. ಹೀಗೆ ಎರಡು ದಶಕಗಳ ಕಾಲ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿರುವ ಸಲ್ಮಾನ್ ಖಾನ್​ ಮತ್ತು ಐಶ್ವರ್ಯಾ ರೈ ಬಚ್ಚನ್​ ಇತ್ತೀಚೆಗೆ ಮುಂಬಯಿಯ ಬಾಂದ್ರಾ ಕುರ್ಲಾದಲ್ಲಿರುವ ಜಿಯೊ ಸೆಂಟರ್​​ನಲ್ಲಿ ನೂತನವಾಗಿ ನಿರ್ಮಿಸಲಾದ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕಲಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದರು.  ಇದೀಗ ಅಭಿಷೇಕ್‌ ಜತೆಗೂ ಒಳ್ಳೆಯ ಸ್ನೇಹವನ್ನು ಹೊಂದಿದ್ದಾರೆ ಸಲ್ಮಾನ್‌ ಖಾನ್‌.

Exit mobile version