Site icon Vistara News

Salman Khan Video : ಕರೀನಾ ಕಪೂರ್‌ಳನ್ನು ತಬ್ಬಿಕೊಂಡು ಮುತ್ತನ್ನಿಟ್ಟ ಸಲ್ಮಾನ್!ಬೇರೆಡೆಗೆ ಕರೆದೊಯ್ದ ನಟಿ!

salman khan and Kareena Kapoor dance

ಮುಂಬೈ: ಸಲ್ಮಾನ್‌ ಖಾನ್‌ (Salman Khan) ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಸಲ್ಮಾನ್‌ ಬಾಲಿವುಡ್‌ನ ಬಹುತೇಕ ಎಲ್ಲ ನಾಯಕಿಯರ ಜತೆ ತೆರೆ ಮೇಲೆ ಜೋಡಿಯಾಗಿ ಮಿಂಚಿದ್ದಾರೆ. ಇದೇ ಸಲ್ಮಾನ್‌ ಅವರು ವೇದಿಕೆಯೊಂದರ ಮೇಲೆ ಕರೀನಾ ಕಪೂರ್‌ ಅವರನ್ನು ತಬ್ಬಿಕೊಂಡು, ಮುತ್ತನ್ನಿಟ್ಟಿದ್ದಾರೆ. ರೊಮ್ಯಾಂಟಿಕ್‌ ಹಾಡಿಗೆ ಲಿಪ್‌ ಸಿಂಕ್‌ ಕೂಡ ಮಾಡಿದ್ದಾರೆ. ಅದರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

ಸಲ್ಮಾನ್‌ ಖಾನ್‌ ಅವರು ವೇದಿಕೆ ಮೇಲೆ ಮ್ಯಾಂಡೋಲಿನ್‌ ಹಿಡಿದು ನಿಂತಿರುತ್ತಾರೆ. ಹಿನ್ನೆಲೆಯಲ್ಲಿ ಶಾರುಖ್‌ ಖಾನ್‌ ಅವರ ʼತುಜೆ ದೇಕಾ ಯೆ ತೊ ಜಾನಾ ಸಲಂʼ ಹಾಡು ಪ್ಲೇ ಆಗುತ್ತಿರುತ್ತದೆ. ಅಷ್ಟರಲ್ಲಿ ಕರೀನಾ ಅವರು ಬೆಳ್ಳಿ ಬಣ್ಣದ ಲೆಹೆಂಗಾ ಧರಿಸಿಕೊಂಡು ವೇದಿಕೆ ಮೇಲೆ ಬರುತ್ತಾರೆ. ಆಗ ಸಲ್ಮಾನ್‌ ಅವರು ಹಾಡಿಗೆ ಲಿಪ್‌ ಸಿಂಕ್‌ ಮಾಡುತ್ತಾ ಕರೀನಾ ಬಳಿ ಹೋಗುತ್ತಾರೆ. ಮೊಣಕಾಲೂರಿ ಕುಳಿತುಕೊಂಡು ಕರೀನಾರ ಕೈಗೆ ಮುತ್ತನ್ನಿಡುತ್ತಾರೆ. ಕುಳಿತುಕೊಂಡೇ ಅವರನ್ನು ತಬ್ಬಿಕೊಳ್ಳುತ್ತಾರೆ. ನಂತರ ಕರೀನಾ ಸಲ್ಮಾನ್‌ರನ್ನು ನಿಲ್ಲಿಸಿಕೊಂಡು ತಮ್ಮೊಂದಿಗೆ ವೇದಿಕೆಯಿಂದ ಹೊರಗೆ ಕರೆದೊಯ್ಯುತ್ತಾರೆ!

ಇದನ್ನೂ ಓದಿ: Viral News : ಹಿಂದು ದೇವತೆಗಳಿಗೆ ಸೂ.. ಮಗನ್‌ ಎಂದು ಪೋಸ್ಟ್ ಮಾಡಿದ ಸ್ವಾಭಿಮಾನಿ ಸ್ವಾಮಿ!‌
ಈ ದೃಶ್ಯವಿರುವ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಳೆಯಾಗಿರುವ ಈ ವಿಡಿಯೊದಲ್ಲಿ ಸಲ್ಮಾನ್‌ ಅವರು ಬೂದು ಬಣ್ಣದ ಟೈಟ್‌ ಟಿ ಶರ್ಟ್‌ ಜತೆ ಜೀನ್ಸ್‌ ಪ್ಯಾಂಟ್‌ ತೊಟ್ಟಿರುವುದನ್ನು ಕಾಣಬಹುದು.


ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಆಗುತ್ತಿದ್ದಂತೆಯೇ ಸಾವಿರಾರು ಮಂದಿ ಇದನ್ನು ನೋಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದು, ತಮ್ಮ ಸ್ನೇಹಿತರೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಕೂಡ. “ಅಬ್ಬಾ, ಒಳ್ಳೆಯ ಜೋಡಿ”, “ಇಬ್ಬರೂ ದಿ ಬೆಸ್ಟ್‌. ನಟನೆಯಲ್ಲೂ ಸೂಪರ್‌”, “ಸೈಫ್‌ ಅಲಿ ಖಾನ್‌ ಅವರು ಈ ವಿಡಿಯೊವನ್ನು ನೋಡಿಲ್ಲವೇ” ಎನ್ನುವಂತಹ ನೂರಾರು ಕಮೆಂಟ್‌ಗಳು ವಿಡಿಯೊಗೆ ಬಂದಿವೆ.
ಸಲ್ಮಾನ್‌ ಮತ್ತು ಕರೀನಾ ಅವರು ಬಾಡಿಗಾರ್ಡ್‌ ಸೇರಿ ಹಲವಾರು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಈ ಇಬ್ಬರು ಕೊನೆಯದಾಗಿ ಬಜರಂಗಿ ಭಾಯಿಜಾನ್‌ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಆ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಬಜರಂಗಿ ಭಾಯಿಜಾನ್‌ ಸಿನಿಮಾದ ಎರಡನೇ ಭಾಗ ಬರಲಿದೆ ಎಂದು 2021ರಲ್ಲೇ ಘೋಷಣೆ ಮಾಡಲಾಗಿದೆ. ಆದರೆ ಆ ಸಿನಿಮಾದಲ್ಲಿ ಕರೀನಾ ಅವರ ಬದಲಾಗಿ ಪೂಜಾ ಹೆಗ್ಡೆ ಅವರು ನಾಯಕ ನಟಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಗಳಿವೆ.

ಇದನ್ನೂ ಓದಿ: Viral Video: ಮಹಿಳೆಯ ಕಸದ ಚೀಲ ಒಯ್ಯಲು ನೆರವಾದ ಶ್ವಾನ, ‘ಸಾಕು’ನಾಯಿ ಪ್ರೀತಿಗೆ ‘ಸಾಕು’ ಎಂಬುದೆಲ್ಲಿ?
ಸಲ್ಮಾನ್‌ ಅವರು ಸದ್ಯ ಟೈಗರ್‌ 3 ಸಿನಿಮಾದಲ್ಲಿ ಬಿಜಿ ಇದ್ದಾರೆ. ಇದು YRF ಸ್ಪೈ ಸಿನಿಮಾಗಳ ಒಂದು ಭಾಗವಾಗಿದೆ. ಹಾಗೆಯೇ ಏಕ್‌ ಥಾ ಟೈಗರ್‌, ಟೈಗರ್‌ ಜಿಂದಾ ಹೈ ಸಿನಿಮಾದ ಮೂರನೇ ಭಾಗವಾಗಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಕೂಡ ನಟಿಸುತ್ತಿದ್ದಾರೆ. ಹಾಗೆಯೇ ಶಾರುಖ್‌ ಖಾನ್‌ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ಸಿನಿಮಾ ದೀಪಾವಳಿ ಸಮಯದಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ. ಇನ್ನೊಂದತ್ತ ಕರೀನಾ ಕಪೂರ್‌ ಅವರು ಕೃತಿ ಸನೋನ್‌ ಅವರೊಂದಿಗೆ ದಿ ಕ್ರೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Exit mobile version