Site icon Vistara News

Salman Khan: ಹುಡುಗಿ ಯಾರು ಎಂದು ರಿವೀಲ್‌ ಮಾಡಿದ ಸಲ್ಮಾನ್‌!

Salman Khan and niece Alizeh Agnihotri

ಬೆಂಗಳೂರು: ಸಲ್ಮಾನ್ ಖಾನ್ (Salman Khan) ಇದ್ದಕ್ಕಿದ್ದಂತೆ ಹುಡುಗಿ ಜತೆಗಿನ ಫೋಟೊ ಶೇರ್‌ ಮಾಡಿ ಭಾರಿ ಸಂಚಲನ ಸೃಷ್ಟಿಸಿದ್ದರು. ಸಲ್ಮಾನ್ ಕ್ಯಾಮೆರಾಗೆ ಬೆನ್ನು ಮಾಡಿ ಹುಡುಗಿಯ ಹೆಗಲಿನ ಮೇಲೆ ಕೈ ಹಾಕಿ ಪೋಸ್‌ ಕೊಟ್ಟಿದ್ದರು. ಫೋಟೊ ಜತೆಗೆ ‘ನನ್ನ ಹೃದಯದ ಚಿಕ್ಕ ಭಾಗವನ್ನು ನಿಮಗೆ ನಾಳೆ ಪರಿಚಯಿಸುತ್ತೇನೆ’ ಎಂದು ಬರೆಯಲಾಗಿತ್ತು. ಸಲ್ಮಾನ್‌ ಫ್ಯಾನ್ಸ್‌ ʻಭಾಯ್‌ ಮದುವೆʼʼಎಂದು ಕಮೆಂಟ್‌ ಮೂಲಕ ಸಂತಸ ಹೊರಹಾಕಿದ್ದರು. ಆದರೆ ಅಸಲಿ ಕಾರಣ ಬೇರೆಯೇ ಇದೆ. ಈ ಹುಡಗಿ ಬೇರೆ ಯಾರೂ ಅಲ್ಲ ಸಲ್ಮಾನ್ ಖಾನ್ ಸೊಸೆ ಅಲಿಜೆ ಅಗ್ನಿಹೋತ್ರಿ.

ಸಲ್ಮಾನ್‌ ಸಹೋದರಿ ಅಲ್ವಿರಾ ಖಾನ್ ಮತ್ತು ಪತಿ ಅತುಲ್ ಅಗ್ನಿಹೋತ್ರಿ ಅವರ ಮಗಳು. ಸಲ್ಮಾನ್ ಅವರ ಬಟ್ಟೆ ಬ್ರಾಂಡ್‌ನ ಹೊಸ ಫೋಟೊಶೂಟ್‌ ಭಾಗವಾಗಿದ್ದು , ಈ ಬ್ರ್ಯಾಂಡ್‌ ಮಹಿಳಾ ಉಡುಪುಗಳನ್ನು ಪ್ರಾರಂಭಿಸಿದೆ. ಅಲಿಜೆ ಶೀಘ್ರದಲ್ಲೇ ʻಫಾರೆʼ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಡುತ್ತಿದ್ದಾರೆ.

ಅಲಿಜೆ ಅವರೊಂದಿಗೆ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಸಲ್ಮಾನ್‌. ಮೊದಲ ಫೋಟೊದಲ್ಲಿ ಇಬ್ಬರೂ ಡೆನಿಮ್ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಂಡಿದ್ದಾರೆ. ಇನ್ನೊಂದು ಬಟ್ಟೆಯಲ್ಲಿ ‘ಪ್ರೀತಿಗಾಗಿ ವಿನ್ಯಾಸಗೊಳಿಸಲಾಗಿದೆ’ ಎಂದು ಬರೆಯಲಾಗಿದೆ. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಯೊಬ್ಬರು “ಭಾಯಿಜಾನ್ ಏಜಿಂಗ್ ಇನ್ ರಿವರ್ಸ್.” ಎಂದು ಕಮೆಂಟ್‌ ಮಾಡಿದ್ದಾರೆ. ʻʻನೀವು ತುಂಬಾ ಮುದ್ದಾಗಿದ್ದೀರಿ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಟೈಗರ್‌ 3 ಮೂಲಕ ಸಲ್ಮಾನ್‌ ತೆರೆಗೆ

ʻಟೈಗರ್‌ ಕಾ ಮೆಸೇಜ್ ಎಂಬ ವಿಡಿಯೊ ಮೂಲಕ ಸಲ್ಮಾನ್‌ ಅಬ್ಬರಿಸಿದ್ದಾಗಿದೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಸೆ. 27ರಂದು ಟೈಗರ್‌ 3 ಸಿನಿಮಾದ ಹೊಸ ಟೀಸರ್‌ ʻಟೈಗರ್‌ ಕಾ ಮೆಸೇಜ್ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ ಮತ್ತು 46 ಸೆಕೆಂಡ್‌ಗಳ ವೀಡಿಯೊವನ್ನು ಕಂಡು ಅಭಿಮಾನಿಗಳು ಸಖತ್‌ ಖುಷ್‌ ಆಗಿದ್ದಾರೆ. ಸಿನಿಮಾ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಸಲ್ಲು ಫ್ಯಾನ್ಸ್‌ಗೆ ಮತ್ತೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅಮೆಜಾನ್ ಪ್ರೈಮ್ ಟೈಗರ್ 3 ಒಟಿಟಿ ಹಕ್ಕುಗಳನ್ನು ಬರೋಬ್ಬರಿ 200 ಕೋಟಿ ರೂ.ಗೆ ಪಡೆದುಕೊಂಡಿದೆ.

ಇದನ್ನೂ ಓದಿ: Salman Khan: ʻಭಾಯ್‌ʼ ಮದುವೆಯಂತೆ? ನಾಳೆ ಹುಡುಗಿ ಪರಿಚಯಿಸಲಿದ್ದಾರೆ ಸಲ್ಮಾನ್ ಖಾನ್!

ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿಳಿ ಸಮಯದಲ್ಲಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ವರದಿಯ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೊ ಟೈಗರ್ 3 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಂತೆಯೇ ಇದೂ ಕೂಡ ಒಪ್ಪಂದವನ್ನು ಮಾಡಿದೆ. ಟೈಗರ್ 3 ಚಿತ್ರದ OTT ಹಕ್ಕನ್ನು 200 ಕೋಟಿ ರೂ. ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಮತ್ತು ಒಟಿಟಿ ಹಕ್ಕುಗಳ ಕುರಿತ ಹೆಚ್ಚಿನ ವಿವರಗಳನ್ನು ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಈ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೀಗ ಚಿತ್ರವು ಈ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌- ಕತ್ರಿನಾ ಅಭಿನಯದ ‌ʻಟೈಗರ್‌ 3ʼ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್!

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರುಖ್ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version