Site icon Vistara News

Salman Khan: ಬರ್ತ್‌ ಡೇ ಪಾರ್ಟಿಯಲ್ಲಿ ಸಲ್ಮಾನ್‌ ಸಖತ್ ಡ್ಯಾನ್ಸ್! ಅಭಿಮಾನಿಗಳಿಗೆ ನಟನ ಆರೋಗ್ಯದ್ದೇ ಚಿಂತೆ

salman

salman

ನವ ದೆಹಲಿ: ಇತ್ತೀಚೆಗೆ ಉದ್ಯಮಿಯೊಬ್ಬರ ಮೊಮ್ಮಗುವಿನ ಬರ್ತ್‌ ಡೇ ಪಾರ್ಟಿಯ ವೇಳೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಡ್ಯಾನ್ಸ್‌ ಮಾಡಿದ್ದಾರೆ. ಈ ಕಾರ್ಯಕ್ರಮ ಫೋಟೊ ಮತ್ತು ವಿಡಿಯೊ ಈಗ ವೈರಲ್‌ (Viral Video) ಆಗಿದೆ. ಈ ವೇಳೆ ಸಲ್ಮಾನ್‌ ಖಾನ್‌ ತಮ್ಮ ಸೂಪರ್‌ ಹಿಟ್‌ ಚಿತ್ರಗಳಾದ ‘ದಬಾಂಗ್‌’ನ ‘ಹಮ್‌ಕ ಪೀನಿ ಹೆ’ ಮತ್ತು ‘ವಾಂಟೆಡ್‌’ ಚಿತ್ರದ ʼಜಲ್ವʼ ಮುಂತಾದ ಹಾಡುಗಳಿಗೆ ಹೆಜ್ಜೆ ಹಾಕಿದರು.

ಸಲ್ಮಾನ್‌ ಖಾನ್‌ ಅಭಿಮಾನಿಗಳು ಈ ವಿಡಿಯೊವನ್ನು ವಿವಿಧ ಸೋಷಿಯಲ್‌ ಮಿಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ. ಈ ವೇಳೆ ಕೆಲವರು ನಟನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊದಲ್ಲಿ ಅವರು ಸ್ವಲ್ಪ ಅಸ್ವಸ್ಥರಂತೆ ಕಂಡು ಬರುತ್ತಿದ್ದುದೇ ಫ್ಯಾನ್ಸ್‌ ಆತಂಕಕ್ಕೆ ಕಾರಣ. ಆರಂಭದಲ್ಲಿ ಸಲ್ಮಾನ್‌ ಖಾನ್‌ ಅವರ ಈ ಡ್ಯಾನ್ಸ್‌ ಮದುವೆಯೊಂದರಲ್ಲಿ ನಡೆದಿತ್ತು ಎಂದು ಕೆಲವರು ಭಾವಿಸಿದ್ದರು. ಬಳಿಕ ಇದು ಬರ್ತ್‌ ಡೇ ಪಾರ್ಟಿ ಎಂದು ಖಚಿತವಾಗಿದೆ.

ಅಭಿಮಾನಿಗಳಿಗೆ ಆತಂಕ

ವೈರಲ್ ಆಗಿರುವ ವಿಡಿಯೊದಲ್ಲಿ ಸಲ್ಮಾನ್ ಖಾನ್ ಕಪ್ಪು ಪ್ಯಾಂಟ್ ಮತ್ತು ಮ್ಯಾಚಿಂಗ್ ಶೂಗಳೊಂದಿಗೆ ಕಪ್ಪು ಟೀ ಶರ್ಟ್ ಧರಿಸಿದ್ದಾರೆ. ಟ್ಯೂಬ್ ಲೈಟ್ ಚಿತ್ರದ ‘ಸಾಜನ್ ರೇಡಿಯೋ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಅವರು ಬೆಳ್ಳಿಯ, ಹೊಳೆಯುವ ಜಾಕೆಟ್‌ನೊಂದಿಗೆ ಪ್ರತ್ಯಕ್ಷರಾದರು. ವಿಡಿಯೊ ನೋಡಿದ ಅನೇಕರು ಸಲ್ಮಾನ್‌ ಖಾನ್‌ ಫಿಟ್ ಮತ್ತು ಆರೋಗ್ಯವಂತವಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಒಬ್ಬರು ಕಮೆಂಟ್ ಮಾಡಿ, ʼʼಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಲ್ಮಾನ್ ಖಾನ್ ಅಮೇರಿಕಾಕ್ಕೆ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವ್ಯಾಯಾಮವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಜತೆಗೆ ಸಲ್ಮಾನ್‌ ಖಾನ್‌ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಇನ್ನೊಬ್ಬರು ʼʼಇದು ಸಲ್ಮಾನ್ ಖಾನ್ ಅವರ ನಿಜವಾದ ವಯಸ್ಸನ್ನು ತೋರಿಸುತ್ತಿದೆ, ಈ ರೀತಿ ಕಾಣಿಸುವುದು ಅನಾರೋಗ್ಯದಿಂದಲ್ಲʼʼ ಎಂದಿದ್ದಾರೆ. ಸಲ್ಮಾನ್ ಖಾನ್ ಫಿಟ್ನೆಸ್ ಮತ್ತು ನಿಯಮಿತ ವ್ಯಾಯಾಮಗಳಿಗೆ ಪ್ರಾಮುಖ್ಯತೆ ಕೊಡುವುದರಿಂದ ಅಭಿಮಾನಿಗಳಿಗೆ ಈ ರೀತಿಯ ಬದಲಾವಣೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಷ್ಟು ಬೇಗ ಮೊದಲಿನಂತಾಗಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: Boney Kapoor: ನಟಿ ಶ್ರೀದೇವಿ ಸಾವಿನ ಹಿಂದಿನ ಸತ್ಯ ಬಿಚ್ಚಿಟ್ಟ ಪತಿ ಬೋನಿ ಕಪೂರ್! ಅಂದು ಆಗಿದ್ದೇನು?

ಸಲ್ಮಾನ್ ಖಾನ್ ಇತ್ತೀಚೆಗೆ ತಮ್ಮ ಬಹು ನಿರೀಕ್ಷಿತ ʼಟೈಗರ್ 3ʼ ಚಿತ್ರದ ಟೀಸರ್ ಅನಾವರಣಗೊಳಿಸಿದ್ದಾರೆ. ಸಲ್ಮಾನ್ ಈ ವರ್ಷದ ಮೇ ತಿಂಗಳಲ್ಲಿ ಅಬುಧಾಬಿಯಲ್ಲಿ ʼಟೈಗರ್ 3ʼ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಶೂಟಿಂಗ್‌ ಪೂರ್ಣಗೊಳಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ಕಳೆದ ರಾತ್ರಿ ʼಟೈಗರ್ 3ʼ ಚಿತ್ರವನ್ನು ಪೂರ್ಣಗೊಳಿಸಿದ್ದೇನೆ. ದೀಪಾವಳಿಯಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ ಬಿಡುವಿಲ್ಲದೆ ದುಡಿದಿದ್ದೇವೆ. ಇದೊಂದು ಅದ್ಭುತ ಅನುಭವ” ಎಂದು ಅವರು ಹೇಳಿಕೊಂಡಿದ್ದರು.

ʼಟೈಗರ್ 3ʼ ಟೈಗರ್ ಸೀರಿಸ್‌ನ ಮೂರನೇ ಕಂತು. 2012ರಲ್ಲಿ ಬಿಡುಗಡೆಗೊಂಡ ʼಏಕ್ ಥಾ ಟೈಗರ್‌ʼ, 2017ರಲ್ಲಿ ತೆರೆಕಂಡ ʼಟೈಗರ್ ಜಿಂದಾ ಹೈʼ ಬಳಿಕ ಇದೀಗ ʼಟೈಗರ್ 3ʼ ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version