ಬೆಂಗಳೂರು: ಸಲ್ಮಾನ್ ಖಾನ್ (Salman Khan) ಬಿಗ್ ಬಾಸ್ 17ರ ವೀಕೆಂಡ್ನಲ್ಲಿ ಕತ್ರಿನಾ ಕೈಫ್ ಆಗಮಿಸಿದ್ದರು. ಟೈಗರ್ 3 ಚಲನಚಿತ್ರವನ್ನು ಪ್ರಚಾರ ಮಾಡಲು ಮತ್ತು ಸ್ಪರ್ಧಿಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಕಾರ್ಯಕ್ರಮದಲ್ಲಿ ಕತ್ರಿನಾ ಕಾಣಿಸಿಕೊಂಡರು. ಆಚರಣೆಯ ಭಾಗವಾಗಿ, ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ಅವರು ಕತ್ರಿನಾ ಅವರ ಚಲನಚಿತ್ರ ಬಾರ್ ಬಾರ್ ದೇಖೋದಿಂದ ಕಾಲಾ ಚಶ್ಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರು ತಮ್ಮ ಡ್ಯಾನ್ಸ್ ಮೂಲಕ ಬಿಗ್ ಬಾಸ್ ಮನೆಯನ್ನು ಕಳೆ ಬರುವಂತೆ ಮಾಡಿದರೆ, ಹಾಡಿಗೆ ಸಲ್ಮಾನ್ ಖಾನ್ ಕೂಡ ಸ್ಟೆಪ್ ಹಾಕಿದ್ದು ವಿಡಿಯೊ ವೈರಲ್ ಆಗಿದೆ.
ವೈರಲ್ ಆಗಿರುವ ಎಪಿಸೋಡ್ನ ವೀಡಿಯೊಗಳಲ್ಲಿ, ಸಲ್ಮಾನ್ ಹಾಡಿನ ಹುಕ್ಸ್ಟೆಪ್ ಪ್ರದರ್ಶಿಸುತ್ತಿರುವಾಗ ಕತ್ರಿನಾ ಅವರ ಪಕ್ಕದಲ್ಲಿ ನಿಂತಿದ್ದರು. ಅಂಕಿತಾ ಮತ್ತು ವಿಕ್ಕಿಯೊಂದಿಗೆ ತಮ್ಮ ಹೆಜ್ಜೆಯನ್ನು ಹಾಕಲು ಸಲ್ಮಾನ್ ಹಿಂದೇಟು ಹಾಕಿಲ್ಲ. ಕಾಲಾ ಚಶ್ಮಾದ ಹೊರತಾಗಿ, ಸ್ಪರ್ಧಿಗಳು ಬೇರೆ ಬೇರೆ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಕತ್ರಿನಾ ಮತ್ತು ಸಲ್ಮಾನ್ ನಾಲ್ಕು ವರ್ಷಗಳ ನಂತರ ಟೈಗರ್ 3ಗಾಗಿ ಮತ್ತೆ ಒಂದಾದರು. ಕೊನೆಯದಾಗಿ 2019ರಲ್ಲಿ ಬಿಡುಗಡೆಯಾದ ಭಾರತ್ನಲ್ಲಿ ಕಾಣಿಸಿಕೊಂಡರು. ಟೈಗರ್ 3 ಅಭಿಮಾನಿಗಳಿಂದ ಹೆಚ್ಚು ಪ್ರೀತಿಯನ್ನು ಪಡೆದಿದೆ. ಟೈಗರ್ 3 ಚಿತ್ರವು ಮೊದಲ ದಿನದಲ್ಲಿ 44.50 ಕೋಟಿ ರೂ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ರನ್ನು ನೋಡಿಯೂ ನೋಡದ ಹಾಗೆ ಹೋದ ರೊನಾಲ್ಡೊ; ಫ್ಯಾನ್ಸ್ ಕೆಂಡ!
#AnkitaLokhande and #VickyJain Awesome dance on Katrina’s kaala chashma 😍#BB17 #BiggBoss17 #AnkitaIsTheBoss #HappyDiwali2023 #Tiger3 #AnVi pic.twitter.com/VGxwW5NvZq
— ƤriήĆ𝐘 ♡ (@princy_patil) November 11, 2023
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಚಿತ್ರ ಟೈಗರ್ 3 (Tiger 3 box office collection) ಮೊದಲ ದಿನ ಒಳೆಯ ಕಲೆಕ್ಷನ್ ಮಾಡಿದೆ. ಮನೀಶ್ ಶರ್ಮಾ ಅವರು ನಿರ್ದೇಶಿಸಿದ ಸ್ಪೈ-ಥ್ರಿಲ್ಲರ್ ಸಿನಿಮಾ ನ. 12ರಂದು ರಿಲೀಸ್ ಆಗಿದ್ದು, ವರದಿಯ ಪ್ರಕಾರ ಭಾರತದಲ್ಲಿ 44.5 ಕೋಟಿ ರೂ. ಗಳಿಕೆ ಕಂಡಿದೆ. ಸಲ್ಮಾನ್ ಮತ್ತು ಕತ್ರಿನಾ ಜತೆಗೆ, ಚಿತ್ರದಲ್ಲಿ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ.ಈ ಚಿತ್ರವು 2019ರಲ್ಲಿ ಅಲಿ ಅಬ್ಬಾಸ್ ಜಾಫರ್ ಅವರ ಭಾರತ್ (42.30 ಕೋಟಿ ರೂ.) ಮತ್ತು 2015 ರಲ್ಲಿ ಸೂರಜ್ ಬರ್ಜಾತ್ಯಾ ಅವರ ಪ್ರೇಮ್ ರತನ್ ಧನ್ ಪಾಯೋ (40.35 ಕೋಟಿ ರೂ.) ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿದೆ. ಚಿತ್ರವು ಭಾನುವಾರ ಬಿಡುಗಡೆಯಾದಾಗ ಒಟ್ಟಾರೆ 41.33 ಪ್ರತಿಶತದಷ್ಟು ಹಿಂದಿ ಆಕ್ಯುಪೆನ್ಸಿಯನ್ನು ಹೊಂದಿತ್ತು.