Site icon Vistara News

Salman Khan : ಮೆದುಳಿನ ಪಾರ್ಶ್ವವಾಯುವಾಗಿದ್ದ ನಟ ರಾಹುಲ್‌ರ ಆಸ್ಪತ್ರೆ ಬಿಲ್‌ ಅನ್ನು ಕಟ್ಟಿದ್ದೇ ಸಲ್ಮಾನ್‌ ಖಾನ್‌!

Salman Khan and rahul roy

ಮುಂಬೈ: ಆಶಿಕಿ ಸಿನಿಮಾ ಖ್ಯಾತಿಯ ನಟ ರಾಹುಲ್‌ ರಾಯ್‌ ಅವರು 2020ರಲ್ಲಿ ಸಿನಿಮಾ ಚಿತ್ರೀಕರಣ ವೇಳೆಯೇ ಮೆದುಳಿನ ಪಾರ್ಶ್ವವಾಯುಗೆ ಸಿಲುಕಿದ್ದರು. ಅದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆಸ್ಪತ್ರೆಯ ಬಿಲ್‌ ಅನ್ನು ನಟ ಸಲ್ಮಾನ್‌ ಖಾನ್‌ (Salman Khan) ಅವರೇ ಭರಿಸಿದ್ದರಂತೆ. ಈ ವಿಚಾರವಾಗಿ ರಾಹುಲ್‌ ಅವರು ಇತ್ತೀಚೆಗೆ ಮಾತನಾಡಿದ್ದಾರೆ.


ಸಂದರ್ಶನವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್‌ ರಾಯ್‌ ಅವರು ಸಲ್ಮಾನ್‌ ಖಾನ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ನಾನು ಎಲ್‌ಎಸಿ ಸಿನಿಮಾ ಚಿತ್ರೀಕರಣ ವೇಳೆಯಲ್ಲೇ ಮೆದುಳಿನ ಪಾರ್ಶ್ವವಾಯುಗೆ ಸಿಲುಕಿದೆ. ನನ್ನನ್ನು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ನಾವು ಸಾಕಷ್ಟು ಹಣವನ್ನು ಬಿಲ್‌ ಆಗಿ ಕಟ್ಟಿದ್ದೆವಾದರೂ ಇನ್ನೂ ಸಾಕಷ್ಟು ಬಿಲ್‌ ಕಟ್ಟುವುದು ಬಾಕಿಯುಳಿದುಕೊಂಡಿತ್ತು. ಅದನ್ನೆಲ್ಲವನ್ನೂ ಸಲ್ಮಾನ್‌ ಖಾನ್‌ ಅವರೇ ಕಟ್ಟಿದರು. ಅವರಿಗೆ ನಾನು ಎಂದೆಂದಿಗೂ ಅಭಾರಿಯಾಗಿರುತ್ತೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Lawrence Bishnoi: ಸಲ್ಮಾನ್ ಖಾನ್​​ ಹತ್ಯೆಗೆ ಕಾದು ಕುಳಿತಿರುವ ಲಾರೆನ್ಸ್​ ಬಿಷ್ಣೋಯಿ​​ಗೆ ತೀವ್ರ ಅನಾರೋಗ್ಯ
ಈ ವಿಚಾರವಾಗಿ ರಾಹುಲ್‌ ಅವರ ಸಹೋದರಿ ಪ್ರಿಯಾಂಕಾ ರಾಯ್‌ ಕೂಡ ಮಾತನಾಡಿದ್ದಾರೆ. “ಎಲ್‌ಎಸಿ ಸಿನಿಮಾದ ನಿರ್ಮಾಪಕರು ನಮಗೆ ಆಸ್ಪತ್ರೆಯ ಬಿಲ್‌ ಕಟ್ಟುವುದಕ್ಕೆ ಸಾಕಷ್ಟು ಹಣವನ್ನು ಕೊಟ್ಟಿದ್ದರು. ಆದರೆ ಅದು ಸಾಕಾಗಿರಲಿಲ್ಲ. ಸಲ್ಮಾನ್‌ ಅವರು ರಾಹುಲ್‌ ಅನ್ನು ನೋಡಲು ಬಂದಾಗ ಏನಾದರೂ ಸಹಾಯ ಬೇಕೇ ಎಂದು ಕೇಳಿದರು. ಆಗ ಅವರಿಗೆ ಬಿಲ್‌ ಬಾಕಿಯಿರುವ ವಿಚಾರ ಗೊತ್ತಾಗಿ ಅವರೇ ಹಣವನ್ನು ಕಟ್ಟಿದರು” ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಪ್ರಿಯಾಂಕಾ ಅವರು, “ಕೆಲವು ಜನರು ಸಲ್ಮಾನ್‌ ಅವರ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಆದರೆ ನಾನು ನೋಡಿದಂತೆ ಅವರು ತುಂಬಾನೇ ಒಳ್ಳೆಯ ವ್ಯಕ್ತಿ. ನಮಗೆ ಅಷ್ಟೊಂದು ಸಹಾಯ ಮಾಡಿದರೂ ಅದರ ಬಗ್ಗೆ ಮಾಧ್ಯಮದ ಎದುರು ಒಂದೇ ಒಂದು ಮಾತನ್ನೂ ಹೇಳಿಕೊಳ್ಳಲಿಲ್ಲ. ಇದನ್ನೇ ಒಬ್ಬ ವ್ಯಕ್ತಿ ಜತೆ ನಿಜವಾಗಿಯೂ ಸಹಾಯಕ್ಕೆ ನಿಲ್ಲುವುದು ಎನ್ನುತ್ತಾರೆ.


ರಾಹುಲ್‌ ರಾಯ್‌ ಅವರು ಕಾನು ಬೆಹ್ಲ್‌ ಅವರ ಆಗ್ರಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಬೋಸ್, ಮೋಹಿತ್ ಅಗರ್ವಾಲ್, ರುಹಾನಿ ಶರ್ಮಾ, ವಿಭಾ ಚಿಬ್ಬರ್, ಸೋನಾಲ್ ಝಾ ಮತ್ತು ಆಂಚಲ್ ಗೋಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ರಾಹುಲ್‌ ದೊಡ್ಡ ಸಿನಿಮಾವೊಂದರ ಸೀಕ್ವೆಲ್‌ನಲ್ಲಿ ನಟಿಸಲಿದ್ದಾರೆ ಎಂದೂ ಸುದ್ದಿಗಳಿವೆ.

Exit mobile version