ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ʻ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ʼ ಪ್ರಚಾರಗಳು ತಡವಾಗಿ ಪ್ರಾರಂಭವಾದರೂ ಅಭಿಮಾನಿಗಳಲ್ಲಿ ತಕ್ಕಮಟ್ಟಿಗೆ ಬಝ್ ಸೃಷ್ಟಿಸಿವೆ. ಸಲ್ಮಾನ್ ಜತೆಗೆ ಅನೇಕ ನಟರು ನಟಿಸಿದ್ದಾರೆ. ವರದಿ ಪ್ರಕಾರ ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ ಸುಮಾರು 15 ಕೋಟಿ ರೂ. ಕಲೆಕ್ಷನ್ ಮಾಡಿದೆ.
ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಮೊದಲನೇ ದಿನದ ಕಲೆಕ್ಷನ್!
ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ್ದಾರೆ. ಯುಪಿ, ಬಿಹಾರ, ರಾಜಸ್ಥಾನ ಮತ್ತು ಆಂಧ್ರದಲ್ಲಿ ಸೇರಿಂದತೆ ಒಟ್ಟೂ 15 ಕೋಟಿಗೂ ಹೆಚ್ಚು ನಿವ್ವಳ ಗಳಿಸಿದೆ ಎಂದು ವರದಿಯಾಗಿದೆ. ದಬಾಂಗ್-3 ತನ್ನ ಆರಂಭಿಕ ದಿನದಂದು 24.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಜರಂಗಿ ಭಾಯಿಜಾನ್ 27.25 ಕೋಟಿ ಗಳಿಸಿತ್ತು. ಇದು ಸಲ್ಮಾನ್ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಆದರೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಅಷ್ಟಾಗಿ ಕಲೆಕ್ಷನ್ ಮಾಡಿಲ್ಲ.
ರಿಲೀಸ್ ಆಗುವ ಮೊದಲೇ 23000 ಟಿಕೆಟ್ ಸೋಲ್ಡ್
2021ರಲ್ಲಿ ತೆರೆಗೆ ಬಂದಿದ್ದ ʻರಾಧೆʼ ಸಿನಿಮಾದ ಬಳಿಕ ಸಲ್ಮಾನ್ ಖಾನ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ʻಅಂತಿಮ್ʼ, ಗಾಡ್‌ಫಾದರ್, ವೇದ್, ಪಠಾಣ್ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದನ್ನು ಬಿಟ್ಟರೆ, ಇದೀಗ ಈ ಚಿತ್ರದ ಮೂಲಕ ಅವರ ಆಗಮನವಾಗಿದೆ. ಪಿವಿಆರ್, ಸಿನೆಪೊಲಿಸ್ ಇನ್ನಿತರೆ ಕೆಲವು ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್‌ಗೂ ಮೊದಲೇ ಈ ಸಿನಿಮಾದ 23000 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.
ಇದನ್ನೂ ಓದಿ: Salman Khan: ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದ ನೈಯೋ ಲಗ್ಡಾ ಸಾಂಗ್ ಟೀಸರ್ ಔಟ್
ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೊಡಕ್ಷನ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ವೆಂಕಟೇಶ್ ದಗ್ಗುಬಾಟಿ, ಪೂಜಾ ಹೆಗ್ಡೆ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.