Site icon Vistara News

Salman Khan: ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಮೆಚ್ಚಿದ ಪ್ರೇಕ್ಷಕರು: ʻಪಠಾಣ್‌ʼಗಿಂತ ಬೆಸ್ಟ್‌ ಅಂದ್ರು ಫ್ಯಾನ್ಸ್‌!

Kisi Ka Bhai Kisi Ki Jaan Twitter review

ಬೆಂಗಳೂರು: ಸಲ್ಮಾನ್ ಖಾನ್ (salman khan) ಅವರು 2014ರಲ್ಲಿ ರಿಲೀಸ್ ಆದ ತಮಿಳಿನ ‘ವೀರಂ’ ಚಿತ್ರವನ್ನು ರಿಮೇಕ್ ಮಾಡಿದ್ದಾರೆ. ಇದೀಗ ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್​’ ಸಿನಿಮಾʼ ಏಪ್ರಿಲ್ 21ರಂದು ಬಿಡುಗಡೆಯಾಗಿದೆ, ಸಲ್ಲು ಹೋಂ ಬ್ಯಾನರ್​ನಲ್ಲಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ನೋಡುಗರು ಇಷ್ಟಪಟ್ಟಿದ್ದಾರೆ. ಇಲ್ಲಿವೆ ಟ್ವಿಟರ್‌ ವಿಮರ್ಶೆಗಳು.

ಒಬ್ಬರು ʻʻಫೈಟ್‌ ದೃಶ್ಯದಲ್ಲಿನ ಬಿಜಿಎಂ ಸಖತ್‌ ಆಗಿದೆʼʼಎಂದು ಟ್ವೀಟ್‌ ಮಾಡಿದ್ದಾರೆ.

ಸಲ್ಮಾನ್‌ ಅವರ ರೊಮ್ಯಾಂಟಿಕ್‌ ದೃಶ್ಯಗಳು, ಪ್ರೀತಿ ಮತ್ತು ಸಹೋದರತ್ವ ಅಕ್ಷರಶಃ ಅದ್ಭುತವಾಗಿದೆ! ಫುಲ್ ಮಾಸ್ ಎಂಟರ್ಟೈನಿಂಗ್ ಸಿನಿಮಾ ಎಂದು ಬರೆದುಕೊಂಡಿದ್ದಾರೆ.

”ಸುಪರ್ಬ್ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ. ನಿರೀಕ್ಷೆಗೂ ಮಿಗಿಲಾಗಿದೆ. ನೋಡಲೇಬೇಕಾದ ಸಿನಿಮಾʼʼ ಎಂದು ಬರೆದುಕೊಂಡಿದ್ದಾರೆ.

ತರಣ್‌ ಆದರ್ಶ್‌ ಟ್ವೀಟ್‌ ಮಾಡಿ ʻ ಅತ್ಯುತ್ತಮ ಚಲನಚಿತ್ರ, ನಾಲ್ಕು ರೇಟಿಂಗ್‌ ನೀಡಿ, ಸಲ್ಮಾನ್ ಖಾನ್ ಅವರ ಮಾಸ್ ಅವತಾರ್‌ನೊಂದಿಗೆ ಹಿಂತಿರುಗಿದ್ದಾರೆ. ಎಮೋಷನ್ಸ್, ಆ್ಯಕ್ಷನ್, ಕಾಮಿಡಿ ಮಸಾಲಾ ಎಲ್ಲವೂ ಈ ಸಿನಿಮಾದಲ್ಲಿದೆ. ನೋಡಲೇಬೇಕಾದ ಸಿನಿಮಾʼʼ ಎಂದು ಬರೆದುಕೊಂಡಿದ್ದಾರೆ. ‌

ಮತ್ತೊಬ್ಬರು ʻʻಒಂದು ಬಾರಿ ನೋಡಬಹುದಾದ ಚಿತ್ರ. ಸಲ್ಮಾನ್ ಖಾನ್ ಅವರು ಹೊಸ ಅವತಾರದೊಂದಿಗೆ ಹಿಂತಿರುಗಿದ್ದಾರೆ. ಭಾವನೆಗಳ ದೃಶ್ಯವು ಹಾಸ್ಯ ದೃಶ್ಯದಂತೆ ಕಾಣುತ್ತದೆ. ಶೆಹನಾಝ್‌ ಗಿಲ್‌ ಮತ್ತು ಇತರ ಪಾತ್ರವರ್ಗದವರು ನಟನೆ ಅದ್ಭುತ. ಈ ಸಿನಿಮಾ ಸಲ್ಮಾನ್‌ ಅವರ ಹಿಂದಿನ ಸಿನಿಮಾ ರಾಧೆಗಿಂತ ಉತ್ತಮವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ʻʻಪ್ರಾಮಾಣಿಕವಾಗಿ ಮನರಂಜನೆಯ ವಿಷಯದಲ್ಲಿ ಪಠಾಣ್‌ ಸಿನಿಮಾಗಿಂತ ಉತ್ತಮವಾಗಿದೆ. ಒಟ್ಟಾರೆಯಾಗಿ ಇದು ವೀಕ್ಷಿಸಬಹುದಾದ ಒಂದೊಳ್ಳೆ ಸಿನಿಮಾ. ಅದ್ಭುತ ಹಿನ್ನೆಲೆ ಸಂಗೀತ ಮತ್ತು ಹಾಡುಗಳುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ರಿಂದ ಜೀವನದ ಪಾಠ ಕಲಿತೆ ಎಂದ ಪೂಜಾ ಹೆಗ್ಡೆ! ಅದೇನು?

ಸಲ್ಮಾನ್‌ ಖಾನ್‌ (Salman Khan) ಅವರೊಂದಿಗೆ ನಟಿ ಪೂಜಾ ಹೆಗ್ಡೆ (Pooja Hegde) ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಪೂಜಾ ಸಲ್ಮಾನ್‌ ಪ್ರೇಯಸಿ ಪಾತ್ರದಲ್ಲಿ ನಟಿಸಿದ್ದಾರೆ. ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ.‌

Exit mobile version