ಬೆಂಗಳೂರು: ನಟ ಜಗಪತಿ ಬಾಬು ಅವರು ಸಲ್ಮಾನ್ ಖಾನ್ (Salman Khan) ಅಭಿನಯದ `ಕಿಸೀ ಕಾ ಭಾಯ್ ಕಿಸೀ ಕಿ ಜಾನ್’ನಲ್ಲಿ (kisika bhai kisiki jaan) ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇದೀಗ ನಟ ಸಲ್ಮಾನ್ ಖಾನ್ ಅವರನ್ನು ಕುರಿತು ಹಲವಾರು ವಿಚಾರಗಳನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಕೂದಲಿಗೆ ಕಪ್ಪು ಬಣ್ಣ ಬಳಿಯಬೇಕು ಹಾಗೂ ಚಿಕ್ಕವನಾಗಿ ಕಾಣಬೇಕೆಂದು ನಟ ಸಲ್ಮಾನ್ ಖಾನ್ ಬಯಸಿದ್ದರು ಎಂದು ಕಾರಣಗಳೊಂದಿಗೆ ಹೇಳಿಕೊಂಡಿದ್ದಾರೆ.
ನಟ ಜಗಪತಿ ಬಾಬು ಅವರು ಸಲ್ಮಾನ್ ಅವರನ್ನು ಕುರಿತು ಮಾತನಾಡಿ, ʻʻಸಲ್ಮಾನ್ ಖಾನ್ ಅವರು ತುಂಬ ಸರಳ ವ್ಯಕ್ತಿತ್ವದವರು. ನನಗೇ ಮಾರ್ಗದರ್ಶನ ನೀಡುತ್ತಾರೆ. ನನ್ನ ಕೂದಲಿಗೆ ಕಪ್ಪು ಬಣ್ಣ ಬಳಿಯಬೇಕು ಹಾಗೂ ಚಿಕ್ಕವನಾಗಿ ಕಾಣಬೇಕೆಂದು ಬಯಸಿದ್ದರು. ಏಕೆಂದರೆ, ನನಗಿಂತ ಹಿರಿಯ ವ್ಯಕ್ತಿಯೊಂದಿಗೆ ನಾನು ಹೋರಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರುʼʼಎಂದರು.
ಜಗಪತಿ ಬಾಬು ಅವರು ಪೂಜಾ ಹೆಗ್ಡೆ ಕುರಿತಾಗಿ ಮಾತನಾಡಿ “ಪೂಜಾ ನನ್ನನ್ನು ರಾಕ್ಸ್ಟಾರ್ ಎಂದು ಕರೆಯುತ್ತಾರೆ. ಅವರು ಹಾಗೆ ಯಾಕೆ ಕರೆಯುತ್ತಾರೆ? ಆಕೆ ಈ ಸಿನಿಮಾಗೆ ನನ್ನ ಹೆಸರನ್ನು ಯಾಕೆ ಶಿಫಾರಸು ಮಾಡಿದ್ದಾರೆ ಎಂದು ನನಗೆ ತಿಳಿದಿಲ್ಲ. ನಾನು ಕೂಡ ಅವರನ್ನು ಕೇಳಲಿಲ್ಲ. ಅವರು ನನಗೆ ಹೇಳಲಿಲ್ಲ ಎಂದರು. ಪೂಜಾ ಮತ್ತು ಜಗಪತಿ ಬಾಬು ಈ ಮೊದಲು ಈ ಹಿಂದೆ ರಾಧೆ ಶ್ಯಾಮ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
“ಈ ಸಿನಿಮಾಗೆ ನನಗೆ ಆಫರ್ ಹೇಗೆ ಬಂದಿತು ಎಂಬುದು ನನಗೆ ನಿಜವಾಗಿಯೂ ತಿಳಿದಿಲ್ಲ. ಸಲ್ಮಾನ್ ಭಾಯ್ ಜತೆಯಲ್ಲಿರುವ ಗುಂಜಾಲ್ಕರ್ ಇದಕ್ಕೆ ಪ್ರಮುಖ ಕಾರಣ ಎಂದು ನಾನು ಖಂಡಿತವಾಗಿ ಹೇಳುತ್ತೇನೆ. ಸುಕುಮಾರ್ ಮತ್ತು ನಾನು ಚೆನ್ನಾಗಿ ಬಾಂಧವ್ಯ ಹೊಂದಿದ್ದೇವೆ. ಸ್ವಲ್ಪ ಡೇಟ್ ಕ್ಲ್ಯಾಶ್ ಇದ್ದಿತ್ತು. ಅದು ಬಿಟ್ಟರೆ ಶೂಟಿಂಗ್ ಚೆನ್ನಾಗಿ ನಡೆದಿದೆ. ಸುಕುಮಾರ್ ಅವರಿಗೆ ನಾನೆ ಶೂಟಿಂಗ್ನಲ್ಲಿ ಏನು ಮಾಡಬೇಕು ಎಂದು ಕೇಳಿದಾಗ ʻʻನೀವೇ ಬ್ರ್ಯಾಂಡ್ ಆಗಿರುವುದರಿಂದ ನೀವು ಏನು ಮಾಡಬೇಕೋ ಅದನ್ನು ಮಾಡಿʼʼಎನ್ನುತ್ತಿದ್ದರು.
ಇದನ್ನೂ ಓದಿ: Pooja Hegde: ನಿರ್ಮಾಪಕರಿಂದ ಐಷಾರಾಮಿ ಕಾರ್ ಗಿಫ್ಟ್ ಪಡೆದರಾ ಪೂಜಾ ಹೆಗ್ಡೆ? ನಟಿ ಸ್ಪಷ್ಟನೆ ನೀಡಿದ್ದೇನು?
ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿಜೇಂದರ್ ಸಿಂಗ್, ರಾಘವ್ ಜುಯಲ್, ಜಸ್ಸಿ ಗಿಲ್, ಭೂಮಿಕಾ ಚಾವ್ಲಾ ಮತ್ತು ಸಿದ್ಧಾರ್ಥ್ ನಿಗಮ್ ಸೇರಿ ಅನೇಕರು ನಟಿಸಿದ್ದಾರೆ. ಇದೇ ಏಪ್ರಿಲ್ 21ರಂದು ಸಿನಿಮಾ ಬಿಡುಗಡೆಗೊಳ್ಳುತ್ತಿದೆ.