ಮುಂಬೈ: ಬಾಲಿವುಡ್ನ ಪ್ರಸಿದ್ಧ ನಟ ಸಲ್ಮಾನ್ ಖಾನ್ (Salman Khan) ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಟ ಪಾರ್ಟಿಯೊಂದರಲ್ಲಿ ತಮ್ಮ ತಂಡದ ಜತೆ ಭಾಗವಹಿಸಿದ್ದರು. ಈ ವೇಳೆ ಅವರು ಬಾಲಿವುಡ್ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದು, ಅವರ ಪಾರ್ಟಿ ಲುಕ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತಾಗಿದೆ. ಸಲ್ಮಾನ್ ಅವರು ತಲೆಕೂದಲನ್ನು ಬಹುತೇಕ ತೆಗೆಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಸಲ್ಮಾನ್ ಖಾನ್ ಅವರು ಕಪ್ಪು ಬಣ್ಣದ ಹಾಫ್ ಸ್ಲೀವ್ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ವಿಶೇಷವೆಂದರೆ ಸಲ್ಮಾನ್ ಅವರು ಇದೀಗ ಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ರೀತಿ ಬಾಲ್ಡ್ ಹೇರ್ ಸ್ಟೈಲ್ಗೆ ಕಾರಣವೇನು ಎನ್ನುವ ಚಿಂತೆಯಲ್ಲಿ ಸಲ್ಮಾನ್ ಅವರ ಅಭಿಮಾನಿಗಳು ಬಿದ್ದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯೂ ಆಗುತ್ತಿದೆ. “ತೇರೆ ನಾಮ್ 2 ʼ ಸಿನಿಮಾಕ್ಕಾಗಿ ಸಲ್ಮಾನ್ ಸಿದ್ಧರಾಗುತ್ತಿದ್ದಾರೆ”, “ಹಳೆಯ ಸಲ್ಮಾನ್ ವಾಪಸು ಬಂದಿದ್ದಾರೆ”, “ಮಾಸ್ಟರ್ ಪೀಸ್ನಂತೆ ಕಾಣುತ್ತಿದ್ದಾರೆ”, “ಸಲ್ಮಾನ್ ಭಾಯ್ ಜವಾನ್ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ”, “ಅವರು ಮುಂದಿನ ಸಿನಿಮಾಕ್ಕಾಗಿ ಪೂರ್ತಿ ಡೆಡಿಕೇಶನ್ ಹಾಕುತ್ತಿದ್ದಾರೆ. ಅಮೇಜಿಂಗ್”, “ಸಲ್ಮಾನ್ ಹ್ಯಾಂಡ್ಸಮ್ ಬಾಲಿವುಡ್ ಆಕ್ಟರ್ ಆಗಿ ಎಂದಿಗೂ ಉಳಿದುಕೊಳ್ಳುತ್ತಾರೆ”, “ಇದು ಸುಲ್ತಾನ್ 2 ಸಿನಿಮಾದ ಲುಕ್ ಅಥವಾ ತೇರೆ ನಾಮ್ 2 ಸಿನಿಮಾದ ಲುಕ್?”, “ತೇರೆ ನಾಮ್ 2ʼ ಸಿನಿಮಾ ಬರಲಿದೆಯೇ?” ಎನ್ನುವಂತಹ ಕಮೆಂಟ್ಗಳನ್ನು ಅಭಿಮಾನಿಗಳು ಮಾಡಲಾರಂಭಿಸಿದ್ದಾರೆ. ಆದರೆ ಸಲ್ಮಾನ್ ಖಾನ್ ಮಾತ್ರ ತಮ್ಮ ಹೊಸ ಲುಕ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: Viral News: 25 ವರ್ಷದ ರೈತನನ್ನು ಒಂದೇ ಏಟಿಗೆ ನುಂಗಿದ್ದ 23 ಅಡಿ ಉದ್ದದ ಹೆಬ್ಬಾವು!
ಸಲ್ಮಾನ್ ಅವರು ಶಾರುಖ್ ಖಾನ್ ಅವರ ʼಪಠಾಣ್ʼ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಅದಾದ ನಂತರ ಅವರು ಫರ್ಹಾದ್ ಸಾಮ್ಜಿ ಅವರ ನಿರ್ದೇಶನದ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಸಲ್ಮಾನ್ ಅವರ ಜತೆ ಪೂಜಾ ಹೆಗ್ಡೆ, ವೆಂಕಟೇಶ್, ಭೂಮಿಕಾ ಚಾವ್ಲಾ, ಶೆಹ್ನಾಜ್ ಗಿಲ್, ರಾಘವ್ ಜುಯಲ್, ಪಾಲಕ್ ತಿವಾರಿ ಸೇರಿ ಅನೇಕರು ನಟಿಸಿದ್ದರು.
ಸಲ್ಮಾನ್ ಅವರು ಮುಂದೆ ʼಟೈಗರ್ 3ʼ ಸಿನಿಮಾದಲ್ಲಿ ನಟಿಸಲಿದ್ದಾರೆ. ಆಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾವನ್ನು ಮನೀಶ್ ಶರ್ಮಾ ನಿರ್ದೇಶನ ಮಾಡುತ್ತಿದ್ದರೆ, ಆದಿತ್ಯಾ ಚೋಪ್ರಾ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಮ್ಶಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ 2017ರ ʼಟೈಗರ್ ಜಿಂದಾ ಹೈʼ ಸಿನಿಮಾದ ಸೀಕ್ವೆಲ್ ಆಗಿದೆ.