Site icon Vistara News

Salman Khan: ಈದ್ ಸಂಭ್ರಮದಲ್ಲಿ ಸಲ್ಮಾನ್‌ ಖಾನ್‌ ಕುಟುಂಬ!

Salman Khan Poses Perfect Family Photo

ಬೆಂಗಳೂರು: ಏಪ್ರಿಲ್ 22ರಂದು ಈದ್ ಹಬ್ಬದ ಸಂಭ್ರಮ. ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗೆ ವಿಶ್‌ ಕೂಡ ಮಾಡಿದ್ದಾರೆ. ಇದೀಗ ಸಲ್ಮಾನ್‌ ಖಾನ್‌ (Salman Khan) ಈ ವಿಶೇಷ ದಿನದಂದು ತಮ್ಮ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆಯುಷ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಸಲ್ಮಾನ್ ಖಾನ್ ಕಪ್ಪು ಟೀ ಶರ್ಟ್ ಧರಿಸಿದ್ದು, ಆಯುಷ್ ಶರ್ಮಾ ಪತ್ನಿ ಅರ್ಪಿತಾ ಖಾನ್ ಪಕ್ಕದಲ್ಲಿ ನಿಂತಿದ್ದಾರೆ, ಅರ್ಬಾಜ್ ಖಾನ್ ಬಿಳಿ ಕುರ್ತಾದಲ್ಲಿ ಕಾಣುತ್ತಿದ್ದಾರೆ, ಸೋಹೈಲ್ ಖಾನ್ ಬಿಳಿ ಟಿ-ಶರ್ಟ್‌ನಲ್ಲಿ, ಸಲೀಂ ಖಾನ್ ಡೆನಿಮ್ ಶರ್ಟ್‌ನಲ್ಲಿ ಮತ್ತು ಹೆಲೆನ್ ಸೊಗಸಾಗಿ ಕಾಣುತ್ತಿದ್ದಾರೆ. ಆಯುಷ್ ಶರ್ಮಾ ಅವರು “ಈದ್ ಮುಬಾರಕ್ (ನಗುತ್ತಿರುವ ಇಮೋಜಿಯೊಂದಿಗೆ)” ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕಾಮೆಂಟ್‌ನಲ್ಲಿ ಒಬ್ಬರು “ಈದ್ ಮುಬಾರಕ್!” ಎಂದರೆ ಮತ್ತೊಬ್ಬರು, “ಸುಂದರವಾದ ಕುಟುಂಬದ ಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಆಯುಷ್ ಶರ್ಮಾ ಆಕ್ಷನ್-ಎಂಟರ್ಟೈನರ್ ʻರುಸ್ಲಾನ್ʼ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬಿಡುಗಡೆಯಾದ ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ

ಬಾಲಿವುಡ್‌ ನಟ ಸಲ್ಮಾನ್ ಖಾನ್ (Salman Khan) ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ʻ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ʼ ಪ್ರಚಾರಗಳು ತಡವಾಗಿ ಪ್ರಾರಂಭವಾದರೂ ಅಭಿಮಾನಿಗಳಲ್ಲಿ ತಕ್ಕಮಟ್ಟಿಗೆ ಬಝ್ ಸೃಷ್ಟಿಸಿವೆ. ಸಲ್ಮಾನ್ ಜತೆಗೆ ಅನೇಕ ನಟರು ನಟಿಸಿದ್ದಾರೆ. ವರದಿ ಪ್ರಕಾರ ಸಿನಿಮಾ ಬಿಡುಗಡೆಯಾದ ಮೊದಲನೇ ದಿನವೇ ಸುಮಾರು 15 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ: Salman Khan: ʻಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದ ಮೊದಲನೇ ದಿನದ ಕಲೆಕ್ಷನ್‌ ಎಷ್ಟು?

ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೊಡಕ್ಷನ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾವನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್, ವೆಂಕಟೇಶ್ ದಗ್ಗುಬಾಟಿ, ಪೂಜಾ ಹೆಗ್ಡೆ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿನಾಲಿ ಭಟ್ನಾಗರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Exit mobile version