Site icon Vistara News

Vikrant Rona Film: ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ ನಟ ಸಲ್ಮಾನ್‌ ಖಾನ್‌

Vikranth Rona

ಬೆಂಗಳೂರು : ಚಿತ್ರದ ನಿರ್ಮಾಪಕ ಜಾಕ್‌ ಮಂಜು ಈ ಹಿಂದೆ ಹೊಸ ಸುದ್ದಿಯನ್ನು ಅಪ್‌ಡೇಟ್‌ ಮಾಡುವುದಾಗಿ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಏನು ಸುದ್ದಿ ಎಂಬುದನ್ನು ರಿವೀಲ್‌ ಮಾಡಿದ್ದಾರೆ. ವಿಕ್ರಾಂತ್‌ ರೋಣ ಸಿನಿಮಾವನ್ನು ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ವಿತರಣೆ ಮಾಡಲಿದ್ದಾರೆ!

ಕಿಚ್ಚ ಸುದೀಪ್‌ ಹಾಗೂ ಸಲ್ಮಾನ್‌ ಖಾನ್‌ ಇಬ್ಬರ ನಡುವೆ ಒಳ್ಳೆಯ ಸಂಬಂಧವಿದ್ದು ʼದಬಾಂಗ್‌ 3ʼ ರಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ವಿತರಣೆ ಮಾಡಲು ಮುಂದಾಗಿದ್ದಾರೆ. 3ಡಿ ರೂಪದಲ್ಲಿ ಬಿಡುಗಡೆ ಗೊಳ್ಳುತ್ತಿದ್ದು, ಅನೂಪ್‌ ಭಂಡಾರಿ ನಿರ್ದೇಶಿಸಲಿದ್ದಾರೆ.  ಪೋಸ್ಟರ್‌ ಮೂಲಕ ಸಿನಿ ರಸಿಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಸಿನಿಮಾ ಮೊದಲೇ ದೊಡ್ಡ ಮಟ್ಟದಲ್ಲಿದೆ, ಸಲ್ಮಾನ್‌ ಖಾನ್‌ ಅವರು ಕೈ ಜೋಡಿಸಿರುವುದರಿಂದ ಇನ್ನಷ್ಟು ಎತ್ತರಕ್ಕೇರಿದೆ ಎಂದು ಕಿಚ್ಚ ಸುದೀಪ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | ಇನ್ನೊಮ್ಮೆ ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ಜುಲೈನಲ್ಲಿ ʼವಿಕ್ರಾಂತ್‌ ರೋಣಾʼ, ʼಥ್ಯಾಂಕ್‌ ಗಾಡ್‌ʼ ಸ್ಟಾರ್‌ ವಾರ್..!

ಕೆಜಿಎಫ್ ಚಾಪ್ಟರ್- 2ರ ನಂತರ ಸ್ಯಾಂಡಲ್‌ವುಡ್‌ನಲ್ಲಿ ವಿಕ್ರಾಂತ್ ರೋಣ ಎರಡನೇ ಅತಿದೊಡ್ಡ ಸಿನಿಮಾ ಎಂದು ಹಲವರು ಕರೆಯುತ್ತಿದ್ದಾರೆ. ನಟರಾದ ನೀತಾ ಅಶೋಕ್, ರವಿಶಂಕರ್ ಗೌಡ, ಸಿದ್ದು ಮೂಲಿಮನಿ ಮತ್ತು ನಿರೂಪ್ ಭಂಡಾರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಾಲಿನಿ ಆರ್ಟ್ಸ್‌ ಬ್ಯಾನರ್‌ ಮೂಲಕ ಬರುತ್ತಿದ್ದು, ಅಲಂಕಾರ್‌ ಪಾಂಡಿಯನ್‌ ಸಹ ನಿರ್ಮಾಪಕರಾಗಿದ್ದಾರೆ. ಏಪ್ರಿಲ್‌ 2 ರಂದು ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿತ್ತು. ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್‌ ಲಾಲ್‌, ತೆಲಗುನಲ್ಲಿ ಮೆಗಾ ಸ್ಟಾರ್‌ ಚಿರಂಜೀವಿ ಹಾಗೂ ಇಂಗ್ಲಿಷ್‌ನಲ್ಲಿ ವಿರೇಂದ್ರ ಸೆಹ್ವಾಗ್‌ ಅವರು ಟೀಸರ್‌ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ | ನಾವೆಲ್ಲರೂ ಭಾರತೀಯರೇ ಅಲ್ವಾ ಸರ್‌ !: ಹಿಂದಿಗೇಕೆ ಡಬ್‌ ಮಾಡುತ್ತೀರ ಎಂದ ಅಜಯ್‌ ದೇವಗನ್‌ಗೆ ಕಿಚ್ಚ ಉತ್ತರ

Exit mobile version