Site icon Vistara News

Salman Khan: ಸಲ್ಮಾನ್ ಖಾನ್‌ಗೆ ಮುತ್ತಿಟ್ಟ ಮಹಿಳಾ ಅಭಿಮಾನಿ!

Salman Khan REACTS As Woman Kisses His Hand

ಬೆಂಗಳೂರು: ಮುಂಬಯಿಯಲ್ಲಿ ಡಿ.21ರಂದು ನಡೆದ ಚಲನಚಿತ್ರ ನಿರ್ಮಾಪಕ ಆನಂದ್ ಪಂಡಿತ್ ಅವರ 60ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್‌ ತಾರೆಗಳು ಭಾಗಿಯಾಗಿದ್ದರು. ಅಮಿತಾಭ್‌ ಬಚ್ಚನ್ ಮತ್ತು ಶಾರುಖ್ ಖಾನ್ ಕೂಡ ಇದ್ದರು. ಸಮಾರಂಭದಲ್ಲಿ ಭಾಗಿಯಾದ ಸಲ್ಮಾನ್‌ ಖಾನ್‌ (Salman Khan) ಅವರ ವಿಡಿಯೊ ಹೆಚ್ಚಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೊಗಳಲ್ಲಿ ಸಲ್ಮಾನ್ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದಾಗ ಮಹಿಳಾ ಅಭಿಮಾನಿಯೊಬ್ಬರು ಸಲ್ಮಾನ್‌ ಅವರ ಕೈಗೆ ಮುತ್ತಿಟ್ಟಿರುವುದು ಗಮನ ಸೆಳೆಯುತ್ತಿದೆ.

ಸಲ್ಮಾನ್ ಅಲ್ಲಿಂದ ನಿರ್ಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಮಹಿಳೆಯೊಬ್ಬರು ಫೋಟೊಗಾಗಿ ಸಲ್ಮಾನ್ ಅವರ ಹತ್ತಿರ ಬಂದು, ಫೋಟೊ ಕ್ಲಿಕ್ ಆದ ಬಳಿಕ ಸಲ್ಮಾನ್‌ ಅವರ ಕೈಗೆ ಮುತ್ತಿಟ್ಟಿದ್ದಾರೆ. ಯಾರೋ ಅಭಿಮಾನಿಯೊಬ್ಬರು ಒಬ್ಬರು “ಐ ಲವ್ ಯೂ” ಎಂದು ಕೂಗಿದ್ದೇ ತಡ ಸಲ್ಮಾನ್‌ ಖುಷಿಯಿಂದಲೇ ಪ್ರತಿಕ್ರಿಯಿಸಿದರು. ಅಭಿಮಾನಿಗಳೊಂದಿಗಿನ ಅವರ ಮಾತುಗಳು, ನಡೆದುಕೊಂಡ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ಹೃದಯಗಳನ್ನು ಗೆದ್ದಿವೆ.

ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್‌ರನ್ನು ಬಿಗಿದಪ್ಪಿದ ಸಲ್ಮಾನ್ ಖಾನ್!

ಆನಂದ್ ಪಂಡಿತ್ ಅವರ ಜನ್ಮದಿನದ ಸಂಭ್ರಮಾಚರಣೆಯ ಕ್ಷಣವನ್ನು ಪಾಪರಾಜಿಗಳು (ಫೋಟೊಗ್ರಾಫರ್‌ಗಳು) ಸೆರೆ ಹಿಡಿದಿದ್ದಾರೆ. ವಿಡಿಯೊದಲ್ಲಿ, ಆನಂದ್ ಪಂಡಿತ್ ಅವರಿಗೆ ಶುಭಾಶಯಗಳನ್ನು ತಿಳಿಸಲು ಸಲ್ಮಾನ್ ಖಾನ್ ವೇದಿಕೆ ಬರುತ್ತಾರೆ. ಅಮಿತಾಭ್‌ ಅವರನ್ನು ಕಂಡೊಡನೆ ಸಲ್ಮಾನ್ ಶೇಕ್‌ ಹ್ಯಾಂಡ್‌ ಕೊಟ್ಟು ಹಗ್‌ ಮಾಡುತ್ತಾರೆ. ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಅವರು ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರನ್ನು ಅಪ್ಪಿಕೊಂಡು, ನಂತರ ಸಲ್ಮಾನ್ ಅವರಿಗೆ ಅಭಿಷೇಕ್ ಬಚ್ಚನ್ ಅಪ್ಪುಗೆ ನೀಡುತ್ತಾರೆ.

ಇದನ್ನೂ ಓದಿ: Salman Khan: ಐಶ್ವರ್ಯ ರೈ ಪತಿ ಅಭಿಷೇಕ್ ಬಚ್ಚನ್‌ರನ್ನು ಬಿಗಿದಪ್ಪಿದ ಸಲ್ಮಾನ್ ಖಾನ್!

ನಿರ್ಮಾಪಕ ಆನಂದ್ ಪಂಡಿತ್ ಚೆಹ್ರೆ, ದಿ ಬಿಗ್ ಬುಲ್, ಥ್ಯಾಂಕ್ ಗಾಡ್ ಮತ್ತು ಟೋಟಲ್ ಧಮಾಲ್ ಮುಂತಾದ ಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ಹುಟ್ಟುಹಬ್ಬದ ಆಚರಣೆಯಲ್ಲಿ ಕಾಜೋಲ್, ಹೃತಿಕ್ ರೋಷನ್, ಕಾರ್ತಿಕ್ ಆರ್ಯನ್, ಟೈಗರ್ ಶ್ರಾಫ್, ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್ ಸೇರಿದಂತೆ ಅನೇಕ ಬಾಲಿವುಡ್‌ ತಾರೆಯರು ಉಪಸ್ಥಿತರಿದ್ದರು.

Exit mobile version